Telugu

ವಿಭಾಗದ ಕುರಿತು

ತೆಲುಗು ಅಧ್ಯಯನ ವಿಭಾಗವು ಜುಲೈ 1974 ರಲ್ಲಿ ಡೀನ್, ಫ್ಯಾಕಲ್ಟಿ ಆಫ್  ಆರ್ಟ್ ರವರ ನಾಯಕತ್ವದಲ್ಲಿ ಸ್ಥಾಪಿಸಲ್ಪಟಿತ್ತು. 1969 ರಿಂದ ತೆಲುಗು ಭಾಷೆಯನ್ನು ಪದವಿ ಮತ್ತು ಸ್ನಾಥಕೋತ್ತರ ಪದವಿ ಮಟ್ಟದಲ್ಲಿ ಕೇಂದ್ರ ಕಾಲೇಜು ಆವರಣದ  ಕನ್ನಡ ಅಧ್ಯಯನ ಕೇಂದ್ರದಲ್ಲಿ  ಅಡಿಯಲ್ಲಿ ಎರಡನೇ ಭಾಷೆಯಾಗಿ ಪರಿಗಣಿಸಲ್ಪಡಲಾಯಿತು. ಕರ್ನಾಟಕದಲ್ಲಿ ಎಂ.ಎ ಪದವಿಯನ್ನು ರೆಗ್ಯುಲರ್ ಕೋರ್ಸ್ ಮತ್ತು ಕರೆಸ್ಪಾಂಡೆನ್ಸ್ ಕೋರ್ಸ್  ಗಳಾಗಿ  ನೀಡುವ ಎಕೈಕ ಸ್ನಾತಕೋತ್ತರ ವಿಭಾಗವಾಗಿದೆ. ಸ್ನಾತಕೋತ್ತರ ಪದವಿಗೆ ಲಭ್ಯವಿರುವ ಗರಿಷ್ಠ ಸೀಟುಗಳು 22 . ಹೆಚ್ಚಿನ ವಿದ್ಯಾರ್ಥಿಗಳು ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ಹೊಸೂರು ತಾಲ್ಲೂಕಿನ ಗಡಿ ಜಿಲ್ಲೆಗಳಿಂದ ಬರುತ್ತಾರೆ. ಇಲ್ಲಿಯವರೆಗೆ ಸುಮಾರು 300 ವಿದ್ಯಾರ್ಥಿಗಳು ತಮ್ಮ ಎಂ.ಎ ಪದವಿಯನ್ನು ತೆಲುಗಿನಲ್ಲಿ ಪಡೆದುಕೊಂಡಿದ್ದಾರೆ. ದೂರ ಶಿಕ್ಷಣದ ಮೂಲಕ ಸುಮಾರು 250 ವಿದ್ಯಾರ್ಥಿಗಳು ತಮ್ಮ ಎಂ.ಎ ಪದವಿಯನ್ನು ಪಡೆದುಕೊಂಡಿದ್ದಾರೆ. ವಿಭಾಗವು ಪಿಹೆಚ್.ಡಿ ಕೊರ್ಸ್ ಅನ್ನು ಸಹ ಒದಗಿಸುತ್ತದೆ. ಇಲ್ಲಿಯವರೆಗೆ ಸುಮಾರು 55 ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಪದವಿಯನ್ನು ನೀಡಲಾಗಿದೆ ಹಾಗು ಪ್ರಸ್ತುತ 06 ಸ್ಕಾಲರ್ ಗಳು ಪಿಹೆಚ್.ಡಿ ಪದವಿಗಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಭಾಗವು ತುಲನಾತ್ಮಕ ಸಾಹಿತ್ಯ (ಕನ್ನಡ, ತೆಲುಗು), ಜಾನಪದ ಅಧ್ಯಯನ ಮತ್ತು ತುಲನಾತ್ಮಕ ಆಧುನಿಕ ಸಾಹಿತ್ಯ (ತೆಲುಗು, ಕನ್ನಡ) ಕ್ಷೇತ್ರಗಳಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ. ವಿಭಾಗವು ಮಾರ್ಚ್ 2000 ರಲ್ಲಿ  ತನ್ನ 25ನೇ ವರ್ಷದ ವಾರ್ಷಿಕೊತ್ಸವವನ್ನು ವಿಚಾರಗೋಷ್ಠಿಗಳು, ಅಷ್ಟಾವಧಾನಮ್ ಗಳನ್ನು ಏರ್ಪಡಿಸಿ ಆಚರಿಸಿತ್ತು. ವಿಭಾಗದ  ಬೋಧನಾ ವರ್ಗದಿಂದ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಲಾಗಿದೆ. ವಿಭಾಗದ ಬೊಧಕರಿಂದ “ಕನ್ನಡ ತೆಲುಗು ಭಾಷಾ ಸಾಹಿತ್ಯ ಬಾಂದವ್ಯದ” ಬಗ್ಗೆ 2007 ರಲ್ಲಿ ಕನ್ನಡದಲ್ಲಿ ಬರೆಯಲಾದ ಸಂಶೋಧನಾ ಲೇಖನೆಯಾದ “ಸುವರ್ಣ ಕರ್ನಾಟಕ ಮಳೆ” ಇದು ವಿಭಾಗದ ಸಂಶೊಧನೆಯ ಕಿರೀಟಕ್ಕೆ ಗರಿ ಇರಿಸಿದಂತಿತ್ತು. ವಿಭಾಗವು ಕನ್ನಡದ  ಶಾಸ್ತ್ರೀಯ ಸಾಹಿತ್ಯ ಮತ್ತು ಆಧುನಿಕ ಸಾಹಿತ್ಯಗಳಾದ ಕಾದಂಬರಿ, ಸಣ್ಣ ಕಥೆಗಳು, ಕವನ ಇತ್ಯಾದಿಗಳನ್ನು ತೆಲುಗಿಗೆ ಅನುವಾದ ಮಾಡುವ ಯೋಜನೆಗಳನ್ನು ಸಹ ಹೊಂದಿದೆ. ಕರ್ನಾಟಕ ಮತ್ತು ತಮಿಳುನಾಡಿನ ದ್ವಿಭಾಷಾ ಜಿಲ್ಲೆಗಳಿಂದ ತೆಲುಗು ಜನಪದ ಕಥೆಗಳನ್ನು ಸಂಗ್ರಹಿಸಲು ಸಹ ವಿಭಾಗವು ಪ್ರಸ್ತಾಪಿಸಿದೆ. ಜಾನಪದ ಅಧ್ಯಯನದ ದಾಖಲೆಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಆಡಿಯೋ ಹಾಗು ವೀಡಿಯ ಕ್ಯಾಸೆಟ್ ಗಳ ಮೂಲಕ ರಕ್ಷಿಸುವುದು, ಸಂಗ್ರಹಿಸಿದ ಜಾನಪದ ಅಧ್ಯಯನ ಮತ್ತು ತುಲನಾತ್ಮಕ ಆಧುನಿಕ ಸಾಹಿತ್ಯದ ವಸ್ತುಗಳನ್ನು ಪ್ರಕಟಿಸುವುದು. ಅನುವಾದ,ತುಲನಾತ್ಮಕ ಸಾಹಿತ್ಯ,ಆಧುನಿಕ ಸಾಹಿತ್ಯ ಮತ್ತು ಜಾನಪದ ಅಧ್ಯಯನ ಎವುಗಳ ಬಗ್ಗೆ ವಿಚಾರಗೋಷ್ಠಿಗಳು / ಕಾರ್ಯಾಗಾರಗಳನ್ನು ಸಂಘಟಿಸುವುದು.

ಅಧ್ಯಕ್ಷರು ಡಾ. ಆಶಾ ಜ್ಯೋತಿ

ಅಧಿಕಾರಾವಧಿ06.04.2018 ರಿಂದ 05.04.2020

ನಮ್ಮನ್ನು ಸಂಪರ್ಕಿಸಿ:
ತೆಲುಗು ವಿಭಾಗ,
ಜ್ಞಾನಭಾರತಿ ಆವರಣ ,
ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು-560 056

ದೂರವಾಣಿ : 080 - 22961786
       080 - 22961788

ಅ. ಲಭ್ಯವಿರುವ ಕೋರ್ಸ್ - ತೆಲುಗು ಎಂ.ಎ

ಆ. ಕೋರ್ಸ್ ನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ - 4 ಸೆಮಿಸ್ಟರ್ಗಳು (2 ವರ್ಷಗಳು)

ಈ. ಲಭ್ಯವಿರುವ ಸೀಟುಗಳು – 

a) Regular: 20(BU); 02(Autonomous) ;02 (HK); 01 (OUK); 01(OUOK)
b) Payment : 06 (BU); 01 (Autonomous); 01 (HK)

ಉ. ತೆಲುಗು ಸ್ನಾತಕೊತ್ತರ ಪದವಿಗೆ ಅರ್ಹತೆ

ಅಭ್ಯರ್ಥಿಯು  ಪದವಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಕನಿಷ್ಠ ಒಟ್ಟು 40% ಅಂಕಗಳು ಮತ್ತು ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ ಶೇ.  50% ಅಂಕಗಳನ್ನು ಪಡೆದಿರಬೇಕು  ಬಿ.ಎ. / ಬಿ.ಎಸ್ಸಿ / ಬಿ.ಕಾಂ ಪದವಿ  ಅಭ್ಯರ್ಥಿಗಳು ಸಂಬಂಧಪಟ್ಟ ಭಾಷಾ 55% ಅಂಕಗಳನ್ನು ಪದವಿಯಲ್ಲಿ ಗಳಿಸಿರಬೇಕು

ಕ್ರ. ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಸ್ವವಿವರ
1ಡಾ. ಕೆ.ಆಶಾ ಜ್ಯೋತಿಎಂ.ಎ;  ಪಿಹೆಚ್.ಡಿಪ್ರಾಧ್ಯಾಪಕರುತೆಲುಗು ಸಾಹಿತ್ಯ, ಆಧುನಿಕ ಮತ್ತು ಜನಪದ ಸಾಹಿತ್ಯದ ವಿಕಸನವೀಕ್ಷಿಸಿ
      

ಸಂಪನ್ಮೂಲಗಳು:

ತೆಲುಗು ಭಾಷೆಯ  ವ್ಯಾಕರಣವನ್ನು ಬೋಧಿಸುವಾಗ ಅಗತ್ಯವಿದ್ದಾಗ ಒವರ್ ಹೆಡ್ ಪ್ರೊಜೆಕ್ಟರ್ ಬಳಸಿ  ವಿವಿಧ ವಿಶ್ವವಿದ್ಯಾಲಯಗಳ ತೆಲುಗು ಪಠ್ಯಕ್ರಮ ಮತ್ತು ತೆಲುಗು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಬದಲಾವಣೆಗಳನ್ನು ನಿಯಮಿತವಾಗಿ ಮತ್ತು ತೀವ್ರವಾಗಿ ವೀಕ್ಷಿಸುವುದರ  ಮೂಲಕ ಒಳ ಗುಣಗಳನ್ನು ಅಭಿವೃದ್ಧಿಪಡಿಸಲು ಜ್ಞಾನವನ್ನು ನವೀಕರಿಸುವ ಅವಶ್ಯಕತೆಯನ್ನು ವಿವರಿಸುವುದು . ಸತತ ಮಧ್ಯಂತರಗಳ ಮೂಲಕ ಪಠ್ಯಕ್ರಮದ ನಿಯಮಿತ ಸುಧಾರಣೆ. ತೆಲುಗು ಮತ್ತು ಕನ್ನಡ ಎರಡೂ ಸಾಹಿತ್ಯದಲ್ಲಿ ಹಳೆಯ ಮತ್ತು ಆಧುನಿಕ ಸಾಹಿತ್ಯವನ್ನು ತುಲನಾತ್ಮಕ ಅಧ್ಯಯನದ ಮೂಲಕ ಪ್ರಕಾರದ ಬೆಳವಣಿಗೆಯ ಮೇಲೆ ಗಮನಹರಿಸುವುದು