Soc-work-Dept Photo

ವಿಭಾಗದ ಕುರಿತು:

ಹಿನ್ನೆಲೆ: ಸಮಾಜಕಾರ್ಯ ವಿಭಾಗ ರಾಷ್ಟ್ರೀಯ ಸಮಾಜ ವಿಜ್ಞಾನಗಳ ಸಂಸ್ಥೆಯಿಂದ ಬಳುವಳಿಯಾಗಿ ಪಡೆದಿರುವ ಆಸ್ತಿ. ಕರ್ನಾಟಕ ಸರ್ಕಾರ ರಾಷ್ಟ್ರೀಯ ಸಮಾಜ ವಿಜ್ಞಾನಗಳ ಸಂಸ್ಥೆಯ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಂತರ ಅದರ ಉಸ್ತುವಾರಿಯನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿತು. ಬೆಂಗಳೂರು ವಿಶ್ವವಿದ್ಯಾಲಯ 1973 ರಲ್ಲಿ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಎಸ್.ಡಬ್ಲ್ಯೂ) ಆರಂಭಿಸಿತು. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಕ್ಕೆ ಒಳಪಡುವ ಸುಮಾರು 08 ಸಂಯೋಜಿತ ಕಾಲೇಜುಗಳಲ್ಲಿ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬೋಧಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆಯಾದ ನಂತರ ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಅಡಿಯಲ್ಲಿ ಸ್ನಾತಕೋತ್ತರ ಕೇಂದ್ರ, ರಾಮನಗರ ಹಾಗೂ ಒಟ್ಟು ಸಂಯೋಜಿತ ಕಾಲೇಜುಗಳು ಎಂ.ಎಸ್.ಡಬ್ಲ್ಯೂ ವಿಭಾಗವನ್ನು ಹೊಂದಿವೆ. ಜೊತೆಗೆ ಸಮಾಜಕಾರ್ಯ ವಿಭಾಗದಲ್ಲಿ ಪಿಎಚ್.ಡಿ ಕಾರ್ಯಕ್ರಮವನ್ನೂ ಹೊಂದಿದೆ. ವ್ಯಕ್ತಿಯ ಘನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮೌಲ್ಯಗಳನ್ನೊಳಗೊಂಡ ವಾತಾವರಣವನ್ನು ನಿರ್ಮಿಸಿಸುವ ಮುಖ್ಯ ಉದ್ದೇಶವನ್ನು ಹೊಂದಿರುವ  ಸಮಾಜಕಾರ್ಯ ವಿಭಾಗವು, ಸಮಾನತೆ, ಶಾಂತಿ ಮತ್ತು ಸಹಬಾಳ್ವೆಯನ್ನು ವೃದ್ಧಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜದ ಅಂಚಿಗೆ ದೂಡಲ್ಪಟ್ಟವರು ಹಾಗೂ ತುಳಿತಕ್ಕೊಳಪಟ್ಟ ಜನಾಂಗಗಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ಮತ್ತು ತರಭೇತಿಯನ್ನು ನೀಡುತ್ತಿದೆ.

ಅಧ್ಯಕ್ಷರು:  ಡಾ. ಕೋದಂಡರಾಮ 

ಸಂಪರ್ಕ ವಿವರಗಳು
ಸಮಾಜಕಾರ್ಯ ವಿಭಾಗ,
ಜ್ಞಾನಭಾರತಿ ಆವರಣ,
ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು - 560056
 
ದೂರವಾಣಿ:    080 – 22941761
ಮಿಂಚಂಚೆ:      mswbub@gmail.com

 

ಲಭ್ಯವಿರುವ ಕೋರ್ಸ - ಸ್ನಾತಕೋತ್ತರ ಸಮಾಜಕಾರ್ಯ - ಎಂ.ಎಸ್.ಡಬ್ಲ್ಯೂ 

ಕೋರ್ಸಿನ ಸ್ವರೂಪ - ಸೆಮಿಸ್ಟರ್

ಅವಧಿ - ನಾಲ್ಕು ಸೆಮಿಸ್ಟರ್ (ಎರಡು ವರ್ಷಗಳು )

ಲಭ್ಯವಿರುವ ಸೀಟುಗಳು

a) Regular: 29(BU); 03(Autonomous) ;03 (HK); 01 (OUK); 01(OUOK)
b) Payment : 08 (BU); 01 (Autonomous); 01 (HK)

ಹೆಚ್ಚಿನ ವಿವರಗಳಿಗೆ ಇಲ್ಲಿ ಒತ್ತಿ

ಅರ್ಹತೆ:

ಕನಿಷ್ಟ 50 ಪ್ರತಿಶತ (ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ 45%) ಅಂಕಗಳೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಎ ಅಥವಾ ಬಿ.ಎಸ್.ಡಬ್ಲ್ಯೂ ಪದವಿ ಪಡೆದವರು ಸದರಿ ಕೋರ್ಸಿಗೆ ದಾಖಲಾಗಲು ಅರ್ಹರಾಗಿರುತ್ತಾರೆ. ಕೇವಲ ಬಿ.ಎ ಅಥವಾ ಬಿ.ಎಸ್.ಡಬ್ಲ್ಯೂ ಪದವಿ ಪಡೆದವರನ್ನು ಮಾತ್ರ ಸದರಿ ಕೋರ್ಸಿಗೆ ದಾಖಲಾಗಲು ಅರ್ಹರಾಗಿರುತ್ತಾರೆ. 

ಕ್ರಮ ಸಂಖ್ಯೆಹೆಸರುವಿದ್ಯಾರ್ಹತೆಪದನಾಮ ವಿಶೇಷ ಪರಿಣಿತಿಸ್ವವಿವರ
1ಡಾ. ಕೋದಂಡರಾಮ ಎಂ.ಎಸ್.ಡಬ್ಲ್ಯೂ. ಪಿಎಚ್.ಡಿಪ್ರಾಧ್ಯಾಪಕರು
ಮಾನವ ಸಂಪನ್ಮೂಲ ನಿರ್ವಹಣೆವೀಕ್ಷಿಸಿ