LifeScience dept

ವಿಭಾಗದ ಬಗ್ಗೆ ಸಂಕ್ಷಿಪ್ತ ವಿವರ:

ರೇಷ್ಮೆಕೃಷಿ ವಿಭಾಗವು R and D ಕಾರ್ಯಕ್ರಮದ ಅಡಿಯಲ್ಲಿ ಹಾಗೂ ವಿಶ್ವಬ್ಯಾಂಕ್ ಅನುದಾನದೊಂದಿಗೆ 1980 ರ ಇಸವಿಯಲ್ಲಿ ಮೊದಲ ಬಾರಿ ಪ್ರಾರಂಭವಾಯಿತು. ತದನಂತರ ಈ ಕಾರ್ಯಕ್ರಮವನ್ನು ರೇಷ್ಮೆಕೃಷಿ ವಿಭಾಗವೆಂದು ಪರಿಗಣಿಸಲಾಯಿತು. ಈ ವಿಭಾಗದಿಂದ ಸುಮಾರು 480 ವಿದ್ಯಾರ್ಥಿಗಳು ಎಂ.ಎಸ್ಸಿ ಮತ್ತು 65 ಪಿ.ಎಚ್.ಡಿ ಪದವಿಯನ್ನು ಪಡೆದುಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ಈ ವಿಭಾಗದಿಂದಲೇ ‘ಜೀವ ವಿಜ್ಞಾನ’ ಎಂ.ಎಸ್ಸಿ ಕೋರ್ಸ್‍ನ್ನು 2006-07ರ ಇಸವಿಯಲ್ಲಿ ಅಗತ್ಯವಾದ ಅನುಮೋದನೆಯನ್ನು ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈ ವಿಭಾಗವನ್ನು ಪರಿಗಣಿಸಲಾಯಿತು. ಈ ‘ಜೀವ ವಿಜ್ಞಾನದ’ ಎಂ.ಎಸ್ಸಿ ವಿಭಾಗದ ವಿಶೇಷತೆಯೆಂದರೆ ಇದರ ಪಠ್ಯಕ್ರಮವನ್ನು ಯು.ಜಿ.ಸಿ - ಸಿ.ಎಸ್.ಐ.ಆರ್ ನೆಟ್ ಪಠ್ಯಕ್ರಮಕ್ಕೆ ಹೋಲಿಕೆಯಾಗುವಂತೆ ಸಿದ್ದಪಡಿಸಿದ್ದು ಈ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಯು.ಜಿ.ಸಿ - ಸಿ ಎಸ್ ಆರ್ ಐ ನೆಟ್ ಮಾಡಲು ಬಹಳ ಅನುಕೂಲಕರವಾಗಿರುತ್ತದೆ.   

ಇದರ ಜೊತೆಗೆ ಈ ವಿಭಾಗವು ಬೋಧನೆ ಮತ್ತು ಸಂಶೋಧನಾ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಟ್ಟಿದೆ. ಈ ವಿಭಾಗದ ಅಡಿಯಲ್ಲಿ ಮತ್ತೊಂದು 5 ವರ್ಷದ ಸಂಯೋಜಿತ ಬಿ.ಎಸ್ಸಿ – ಎಂ.ಎಸ್ಸಿ ಕೋರ್ಸನ್ನು 2007-08ರ ಇಸವಿಯಲ್ಲಿ ಶುರು ಮಾಡಲಾಯಿತು. ಪಿ.ಯು.ಸಿಯ ತದನಂತರ ವಿದ್ಯಾರ್ಥಿಗಳು ಈ ಕೋರ್ಸಿಗೆ ಆಧ್ಯತೆ ನೀಡುವುದರಿಂದ ಈ ಕೋರ್ಸ್‍ಗೆ ಹೆಚ್ಚಿನ ಬೇಡಿಕೆಯಿದೆ. 2013-14ರ ಅವಧಿಯಲ್ಲಿ ರೇಷ್ಮೆಕೃಷಿ ವಿಭಾಗವನ್ನು ಜೀವವಿಜ್ಞಾನವೆಂದು ಮರುನಾಮಕರಣ ಮಾಡಲಾಗಿದೆ.

ಜೀವ ವಿಜ್ಞಾನದ ವಿಭಾಗವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲಕರವಾಗುವಂತಹ, ಹಾಗೂ ವಿದ್ಯಾರ್ಥಿಗಳಿಗೆ ಉತ್ತಮವಾದ ಸಂವಾದಾತ್ಮಕ ವಿಚಾರಗೋಷ್ಠಿಗಳು, ತರಬೇತಿಗಳು, ವೈಜ್ಞಾನಿಕ ಸಂಸ್ಥೆಗಳಿಗೆ ಭೇಟಿಕೊಡಿಸುವಿಕೆಯ ಕಾರ್ಯಕ್ರಮಗಳು ಜೀವ ವಿಜ್ಞಾನ ವಿಭಾಗದ ವಿಶೇಷತೆಗೆ ಹೆಚ್ಚಿನ ಮಹತ್ವ ಬಂದಿದೆ.

ಈ ವಿಭಾಗದಲ್ಲಿ “ವೈದ್ಯಕೀಯ ಭ್ರೂಣಶಾಸ್ತ್ರ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ” ಎಂಬ¨ ಒಂದು ವರ್ಷದ ಡಿಪ್ಲೊಮೋ ಕೋರ್ಸನ್ನು 2013 ಇಸವಿಯಿಂದ ಶುರು ಮಾಡಿದ್ದು, ಈ ಕೋರ್ಸಗೆ ಹೆಚ್ಚಿನ ಬೇಡಿಕೆಯಿದೆ.

ವಿಭಾಗದ ಮುಖ್ಯಸ್ಥರು:  ಡಾ|| ಎಂ ಶಿವಶಂಕರ್

ಅಧಿಕಾರಾವಧಿ -   16-01-2018   ರಿಂದ 15-01-2020

ಸಂಪರ್ಕ ವಿವರಗಳು:

ವಿಭಾಗದ ಅಧ್ಯಕ್ಷರು,
ಜೀವ ವಿಜ್ಞಾನ ವಿಭಾಗ, 
ಮನೋವಿಜ್ಞಾನ ವಿಭಾಗದ ಕಟ್ಟಡ,
ಬೆಂಗಳೂರು ವಿಶ್ವವಿದ್ಯಾಲಯ,
ಜ್ಞಾನಭಾರತಿ ಆವರಣ, ಬೆಂಗಳೂರು – 560056

ದೂರವಾಣಿ ಸಂಖ್ಯೆ : 080 22961521 / 22961923

ಇಮೇಲ್:   lifescience@bub.ernet.in

        ಮುಖ್ಯಸ್ಥರ ಇಮೇಲ್:  shivashankarseri@gmail.com

ಲಭ್ಯವಿರುವ ಕೋರ್ಸ್ (ವಿಷಯಗಳ) ವಿವರ : ಕೋರ್ಸ್ ಗಳ ಹೆಸರು ಮತ್ತು ಅವಧಿ:

 1. ಎಂ.ಎಸ್ಸಿ ಜೀವವಿಜ್ಞಾನ (2 ವರ್ಷ) 
 2. ಪಿ.ಎಚ್.ಡಿ. ಜೀವ ವಿಜ್ಞಾನ
 3. ಸಂಯೋಜಿತ ಬಿ.ಎಸ್ಸಿ – ಎಂ.ಎಸ್ಸಿ ಜೈವಿಕ ವಿಜ್ಞಾನ (5 ವರ್ಷ) 
 4. ಪಿ.ಜಿ. ಡಿಪ್ಲೊಮೊ ಇನ್ “ವೈದ್ಯಕೀಯ ಭ್ರೂಣಶಾಸ್ತ್ರ ಮತ್ತು ನೆರವಿನ ಸಂತಾನೋತ್ಪತಿ ತಂತ್ರಜ್ಞಾನ” (1 ವರ್ಷ)  

ಎಂ.ಎಸ್ಸಿ  ಜೀವವಿಜ್ಞಾನ (೨ ವರ್ಷಗಳು)

         ಕೋರ್ಸಿನ ಸ್ವರೂಪ:    ಸೆಮಿಸ್ಟರ್ ಸ್ಕೀಮ್ (ಸಿ.ಬಿ.ಸಿ.ಎಸ್)

         ಅವಧಿ                :   ನಾಲ್ಕು ಸೆಮಿಸ್ಟರ್

         ಸೀಟ್ ಗಳು         :   ೨೦ + ಪೇಮೆಂಟ್ ಸೀಟ್ ಗಳು – ೦೫

        ಅರ್ಹತೆ :

ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಯಾವುದಾದರೊಂದು ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ಅಥವಾ ಜೀವರಸಾಯನಶಾಸ್ತ್ರ ಮತ್ತು ಜೀವವಿಜ್ಞಾನ ವಿಷಯಗಳ ಪೈಕಿ ಬಿ.ಎಸ್ಸಿ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿರಬೇಕು. 

        ಇಂಟಿಗ್ರೇಟೆಡ್ ಬಿ.ಎಸ್ಸಿ, ಎಂ.ಎಸ್ಸಿ ಜೈವಿಕ ವಿಜ್ಞಾನ

         5 ವರ್ಷ  :  ಯೋಜನೆ ಸಿ.ಬಿ.ಸಿ.ಎಸ್

         ಅವಧಿ   :   10 ಸೆಮಿಸ್ಟರುಗಳು (ಸಾಮಾನ್ಯ 16 + ಪಾವತಿ ಸೀಟುಗಳು 4).

        ಅರ್ಹತೆ :

ದ್ವಿತೀಯ  ಪಿ.ಯು.ಸಿ ಕೇಂದ್ರೀಯ ಪಠ್ಯಕ್ರಮದ ರಾಜ್ಯ ವಿಜ್ಞಾನದ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿರಬೇಕು. 

ಪಿಜಿ ಡಿಪ್ಲೋಮಾ ಇನ್ ಕ್ಲಿನಿಕಲ್ ಎಂಬ್ರಿಯಾಲಜಿ ಅಂಡ್ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ಪಿಜಿಡಿ ಸಿಇಎಆರ್ ಟಿ) :

ಯೋಜನೆ:    ವಾರ್ಷಿಕ    (6 ತಿಂಗಳುಗಳು - ತರಗತಿ ಮತ್ತು ಪ್ರಯೋಗಾಲಯ ತರಬೇತಿ = 3 ತಿಂಗಳುಗಳು ಪ್ರೌಢ ಪ್ರಬಂದ / ಪ್ರಾಜೆಕ್ಟ್);

ಸೀಟುಗಳು : 20

ಅರ್ಹತೆ: ಜೀವವಿಜ್ಞಾನ (ಎಂಎಸ್ಸಿ ಲೈಫ್ ಸೈನ್ಸಸ್) ಮತ್ತು ಮೆಡಿಸಿನ್ (ಎಂಬಿಬಿಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಕ್ರ ಸಂಹೆಸರುವಿದ್ಯಾರ್ಹತೆಪದನಾಮವಿಶೇಷತೆಪ್ರೊಫೈಲ್ ವೀಕ್ಷಿಸಿ
1ಡಾ|| ಎಂ ಶಿವಶಂಕರ್ ಎಂ.ಎಸ್ಸಿ. ಪಿ.ಹೆಚ್ ಡಿ ಅಧ್ಯಕ್ಷರುತಳಿಶಾಸ್ತ್ರ ಮತ್ತು ಸಂತಾನೊತ್ಪತ್ತಿಪ್ರೊಫೈಲ್
2ಡಾ|| ರವಿಕುಮಾರ್ ಹೆಚ್  ಎಂಫಿಲ್., ಪಿ.ಹೆಚ್ ಡಿಸಹಾಯಕ ಪ್ರಾಧ್ಯಾಪಕರು ಪ್ರೊಫೈಲ್
3ಡಾ|| ಹರಿಪ್ರಸಾದ್ ಟಿ ಪಿ ಎನ್ ಎಂ.ಎಸ್ಸಿ. ಪಿ.ಹೆಚ್ ಡಿಸಹಾಯಕ ಪ್ರಾಧ್ಯಾಪಕರು ಪ್ರೊಫೈಲ್
4ಡಾ|| ಅಂಜಲಿ ಡಿ ಗಂಜೀವಾಲೆ ಎಂ.ಎಸ್ಸಿ. ಪಿ.ಹೆಚ್ ಡಿಸಹಾಯಕ ಪ್ರಾಧ್ಯಾಪಕರು ಪ್ರೊಫೈಲ್

ವಿಭಾಗದಲ್ಲಿ ನಡೆಸಿದ ಸಂಶೋಧನೆ ಮತ್ತು ಚಟುವಟಿಕೆಗಳು

UGC / DST ಯಿಂದ ವಿಭಾಗವು ಗುರುತಿಸಲ್ಪಟ್ಟಿದೆ ಮತ್ತು DST-FIST UGC-CPEPA, DST –PURSE, ಅಡಿಯಲ್ಲಿ ಸಂಶೋಧನೆಗೆ ಅನುದಾನವನ್ನು ಪಡೆದಿದೆ. ಈ ಕೆಳಗೆ   ವಿವರಿಸಿರುವ ಬೋಧನಾ ವಿಭಾಗದ ಮೂಲಕ ವಿವಿಧ ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಕೋಟಿ ರೂಪಾಯಿ ಮೌಲ್ಯದ ಹಲವಾರು ಸಂಶೋಧನಾ ಯೋಜನೆಗಳನ್ನು ನಿಯೋಜಿಸಲಾಗಿದೆ.

 1. ಡಾ|| ಎಂ ಶಿವಶಂಕರ್: ಯುಜಿಸಿ (10,25 ಲಕ್ಷ), ಡಿಬಿಟಿ (25.19 ಲಕ್ಷ), ಬಿಯುಬಿ  (1 ಲಕ್ಷ),
 2. ಡಾ|| ಎಚ್.ಪಿ. ಪುಟ್ಟರಾಜು: ಯು.ಜಿ.ಸಿ. ಬಿಎಸ್ ಆರ್ ಫ್ಯಾಕಲ್ಟಿ ಫೆಲೋ  ಡಿ.ಎಸ್ ಟಿ (5.5 ಲಕ್ಷ), ಡಿಬಿಟಿ (13.36 ಲಕ್ಷ),   ಬಿಯುಬಿ (6 ಲಕ್ಷ), ಯುಜಿಸಿ (7.32 ಲಕ್ಷ) + ಡಿ.ಎಸ್ ಟಿ (33.72 ಲಕ್ಷ), ಐಸಿಎಂಆರ್ (36.90 ಲಕ್ಷ), ಬಿಆರ್‍ಎನ್ ಎಸ್ (17.09 ಲಕ್ಷ), ಡಿ.ಎಸ್ ಟಿ (32.00 ಲಕ್ಷ) ಡಿ.ಎಸ್ ಟಿ (31 ಲಕ್ಷ).
 3. ಡಾ|| ರವಿಕುಮಾರ್ ಹೆಚ್. ಯುಜಿಸಿ  ಅನುದಾನ (10 ಲಕ್ಷ)
 4. ಡಾ|| ಹರಿಪ್ರಸಾದ್  ಯುಜಿಸಿ  ಅನುದಾನ (10 ಲಕ್ಷ)
 5. ಡಾ||  ಅಂಜಲಿ ಡಿ ಗಂಜಿಲಾವೆ ಯುಜಿಸಿ  ಅನುದಾನ  (10 ಲಕ್ಷ)
 6. ಡಾ|| ಎಂ.ವಿ.ವಿ.ಸುಬ್ರಹ್ಮಣ್ಯಂ  ಸಿ.ಪಿ.ಇ.ಪಿ.ಎ (5.79 ಕೋರ್)
 7. ಡಾ||  ಗೋವಿಂದಯ್ಯ: ಯುಜಿಸಿ (8, 07 ಲಕ್ಷ)
 8. ಡಾ|| ಅನಂತನಾರಯಣ ಸಿ.ಎಸ್ ಬಿ(9 ಲಕ್ಷ)
 9. ಡಾ|| ಸಂದೀಪ್ ಮುಖರ್ಜಿ ಯುಜಿಸಿ (6 ಲಕ್ಷ)

ವಿಭಾಗದ ಭೋಧನಾ ಸದಸ್ಯರು ಹಲವಾರು ಸಂಶೋಧನಾ ಪತ್ರಿಕೆಗಳನ್ನು ಉನ್ನತ ಶ್ರೇಯಾಂಕದ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ ಮತ್ತು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ವಿಭಾಗವು ಭಾರತದಲ್ಲಿನ ವಿಶ್ವವಿದ್ಯಾಲಯಗಳು / ಸಂಸ್ಥೆಗಳು, ಹಾಗೂ ಜರ್ಮನಿ, ಈಜಿಪ್ಟ್ ದೇಶಗಳ ಸಹಭಾಗಿತ್ವವನ್ನು ಹೊಂದಿದೆ. ಇವುಗಳ ಜೊತೆಗೆ ವಿಭಾಗದ ಬೋಧನಾ ಸಿಬ್ಬಂದಿಗಳು ಭಾರತ / ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳಿಂದ ರಚಿಸಲಾದ ವಿವಿಧ ಸಮಿತಿಗಳ ಅಧ್ಯಕ್ಷರು / ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಇಲ್ಲಿನ ಬೋಧಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕ ಸಂಪಾದಕೀಯ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ವಿವಿಧ ಶೈಕ್ಷಣಿಕ ಕಾರ್ಯಯೋಜನೆ / ಫೆಲೋಷಿಪ್ ಗಳ ಅಡಿಯಲ್ಲಿ ವಿದೇಶಗಳಲ್ಲಿನ ಹಲವಾರು ವಿಶ್ವವಿದ್ಯಾಲಯಗಳು / ಸಂಸ್ಥೆಗಳಿಗೆ ಭೇಟಿ ಮಾಡಿದ್ದಾರೆ.

ಸಂಪನ್ಮೂಲಗಳು :

ಪ್ರತಿ ಸೆಮಿಸ್ಟರ್ ಗೆ ವಿಶಾಲವಾದ ಗಾಳಿ ಬೆಳಕು ಇರುವಂತಹ   ತರಗತಿಗಳು ಮತ್ತು ಉತ್ತಮವಾದ ಸೆಮಿನಾರ್ ಹಾಲ್ ಇವೆ. ಪ್ರತ್ಯೇಕ ವಿದ್ಯಾರ್ಥಿ ಪ್ರಯೋಗಾಲಯಗಳು (6 ಸಂಖ್ಯೆಗಳು) ಮತ್ತು ಸಂಶೋಧನಾ ಪ್ರಯೋಗಾಲಯಗಳು (6 ಸಂಖ್ಯೆಗಳು) ಮೈಕ್ರೋಮ್ಯಾನಿಪ್ಯುಲೇಟರ್ ಗಳು, ಸೋನಿಕ್ಯಾಟರ್ಸ್, ಡೀಪ್ ಫ್ರೀಜರ್ಸ್, ನೀರು ಶುದ್ಧೀಕರಿಸುವ ವ್ಯವಸ್ಥೆಗಳು,  Co2 ಇನ್ಕ್ಯುಬೇಟರ್ಸ್, ನೀಡಲ್ ಪುಲ್ಲರ್, ಸೂಕ್ಷ್ಮದರ್ಶಕಗಳು, UV-Vis ಸ್ಪೆಕ್ಟ್ರಾಫೋಟೊಮೀಟರ್ , ಜೆಲ್ ಡಾಕ್ಯುಮೆಂಟೇಶನ್ ಸಿಸ್ಟಮ್ಸ್, ಗ್ರೇಡಿಯಂಟ್ ಪಿಸಿಆರ್, ಆರ್ ಟಿ ಪಿಸಿಆರ್, ಫ್ಲೋರೊಸೆಂಟ್ ಮೈಕ್ರೋಸ್ಕೋಪಿ, ಕೋಲ್ಡ್ ರೂಮ್,ಭೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಪ್ರತ್ಯೇಕ ಕೊಠಡಿ ಹೀಗೆ ಸಂಶೋಧನೆಗೆ ಪೂರಕವಾದ ಎಲ್ಲಾ ವ್ಯವಸ್ಥೆ ಇರುತ್ತದೆ. ವಿಭಾಗದಲ್ಲಿ ಗ್ರಂಥಾಲಯ  ಮತ್ತು ಸುಸಜ್ಜಿತ ಪ್ರಾಣಿಶಾಸ್ತ್ರ + ಸಸ್ಯಶಾಸ್ತ್ರ ಮ್ಯೂಸಿಯಂ ಸಹ ಇರುತ್ತದೆ.

ಬಯೋರಾಮ್ ಫೋರಮ್ :

ಬಯೋರಾಮ್ ಫೋರಮ್ (ಸೆಮಿನಾರ್ ಕ್ಲಬ್) ಅನ್ನು 2008 ರಲ್ಲಿ ಆರಂಭಿಸಲಾಯಿತು, ಇದು ವಿದ್ಯಾರ್ಥಿಗಳಿಗೆ ಸೆಮಿನಾರ್ ಬಗ್ಗೆ ತಿಳುವಳಿಕೆ ಹಾಗೂ ಹೇಗೆ ಪ್ರಬಂಧಗಳನ್ನು ಮಂಡಿಸುವುದು ಎಂಬ ವಿಚಾರದ ವಿಮರ್ಶೆಗೆ ವೇದಿಕೆಯಾಗಿದೆ.  ಪ್ರಸ್ತುತ ಸಂಶೋಧನಾ ಕಾರ್ಯಕರ್ತರು ಹಾಗೂ ಜೈವಿಕ ವಿಜ್ಞಾನದ ವಿವಿಧ ಕ್ಷೇತ್ರಗಳ ಶ್ರೇಷ್ಠ ವಿಜ್ಞಾನಿ / ತಜ್ಞರ ವಿಶೇಷ ಉಪನ್ಯಾಸವನ್ನು ಸೆಮಿನಾರ್ ಕ್ಲಬ್ ನಲ್ಲಿ ಏರ್ಪಡಿಸಿ ವಿಧ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಲಾಗಿದೆ.

ವಿಸ್ತರಣೆ ಚಟುವಟಿಕೆಗಳು :

ವಿಭಾಗವು ಆಗಾಗ್ಗೆ ವಿಸ್ತೃತ ಚಟುವಟಿಕೆಗಳನ್ನು ಆಯೋಜಿಸುತ್ತದೆ ಇದರಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ವರ್ಮಿಕಾಂಪೋಸ್ಟಿಂಗ್ ಉತ್ಪಾದನೆ, ಮಶ್ರೂಮ್ ಮತ್ತು ಕ್ರಿಮಿಕೀಟಗಳ ನಿಯಂತ್ರಣ ಮತ್ತು ಬೆಳೆ ಸಸ್ಯಗಳ ರೋಗ. ಪ್ರಮುಖ ಕಲ್ಲಿನ ಉದ್ಯಾನವನದ ಅಭಿವೃಧ್ದಿ, ತೋಟಗಾರಿಕೆ ಮತ್ತು ಆವರಣದ ಸುತ್ತಮುತ್ತ ನೈರ್ಮಲ್ಯ ನಿರ್ವಹಣೆ ಇತ್ಯಾದಿ ಚಟುವಟಿಕೆಗಳು ಇದರಲ್ಲಿ ಸೇರಿವೆ. ನಿರ್ವಹಣೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸುವುದು. ಮಾನವ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಗಳನ್ನು ನೀಡುವಲ್ಲಿ ವಿದ್ಯಾರ್ಥಿಗಳು ಮತ್ತು ಬೋಧನಾ ವಿಭಾಗದ ಶಿಕ್ಷಕರು ಸಹ ತೊಡಗಿಸಿಕೊಂಡಿದ್ದಾರೆ. 

ಕ್ಷೇತ್ರ ಪ್ರವಾಸಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು:

ಇತ್ತೀಚಿನ ಬೆಳವಣಿಗೆಗಳೊಂದಿಗೆ ತರಗತಿ ಕೋಣೆಗಳಲ್ಲಿ ತಮ್ಮ ಕಲಿಕೆಯ ದೃಢೀಕರಣವನ್ನು ಮಾಡಲು ವಿದ್ಯಾರ್ಥಿಗಳನ್ನು ವಿವಿಧ ಸಂಸ್ಥೆಗಳು, ಇಂಡಸ್ಟ್ರೀಸ್, ಮ್ಯೂಸಿಯಮ್ಸ್, ಅಭಯಾರಣ್ಯಗಳು, ಮೀಸಲು ಅರಣ್ಯಗಳು ಇತ್ಯಾದಿಗಳಿಗೆ ಕರೆದೊಯ್ಯಲಾಗುವುದು.    ಈ ವಿಭಾಗವು ತನ್ನದೇ ಆದ ಕ್ರಿಕೆಟ್ ತಂಡವನ್ನು ಹೊಂದಿದೆ. ಬಯೋರಾಮ್ ಫೋರಮ್ ಅಡಿಯಲ್ಲಿ ನಿಯಮಿತವಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಭಾಗದಲ್ಲಿ ನಡೆಸುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯಾ ಕ್ಷೇತ್ರಗಳಿಂದ ಆಯ್ದುಕೊಳ್ಳುವ ಸಂಪನ್ಮೂಲ ಸಿಬ್ಬಂದಿಯಿಂದ ಆಯ್ಕೆ ಮಾಡಲಾಗುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಗರಿಷ್ಠ ಮಹತ್ವ ನೀಡಲಾಗುತ್ತದೆ, ವಿಧ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವ ಅದರ ಪಾಲ್ಗೊಳ್ಳುವಿಕೆಗೆ ಅವಕಾಶ ಮಾಡಿಕೊಡುವುದರಿಂದ ಅವರ ಮನೋವಿಜ್ಞಾನ ಅಭಿವೃದ್ಧಿಯಾಗುವುದಕ್ಕೆ ಸಹಕಾರಿಯಾಗುತ್ತದೆ