Physics dept

ವಿಭಾಗದ ಬಗ್ಗೆ ಸಂಕ್ಷಿಪ್ತ ವಿವರ


ಭೌತಶಾಸ್ತ್ರ ವಿಭಾಗ ೧೮೮೨ ರಿಂದಲೇ ಅಸ್ಥಿತ್ವಕ್ಕೆ ಬಂದಿದ್ದು  ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಅತೀ ಪ್ರಾಚೀನ ವಿಭಾಗಗಳಲ್ಲಿ ಒಂದಾಗಿದೆ. ಮೊದಲಿನ ದಿನಗಳಲ್ಲಿ ಪ್ರೊ  ಜೆ. ಕುಕ್ ಅವರು  ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಪ್ರಖ್ಯಾತ ವಿಜ್ಞಾನಿ ಪ್ರೊ  ಜೆ ಜೆ ಥಾಮ್ಸನ್ ಅವರ ವಿದ್ಯಾರ್ಥಿಯಾದ  ಪ್ರೊ   ಇ. ಪಿ. ಮೆಟ್ಕಾಫ್ ೧೯೦೮ ರಿಂದ  ಪ್ರಾಂಶುಪಾಲರಾಗಿದ್ದು  ೧೯೨೯ ರಲ್ಲಿ ಮೈಸೂರು ವಿ ವಿ ಯ ಉಪಕುಲಪತಿಯಾಗಿ ನೇಮಕಗೊಂಡರು.  ರಾವ್ ಬಹಾದ್ದೂರ್ ಬಿ. ವೆಂಕಟೇಶಾಚಾರ್  ಅವರು ಮೆಟ್ಕಾಫ್ ನಂತರ   ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲರರಾದರು.  ಮೆಟ್ಕಾಫ್ ಮತ್ತು ವೆಂಕಟೇಶಾಚಾರ್ ಅವರ ಸಂಶೋಧನಾ ಪ್ರಬಂದ ರಾಯಲ್ ಸೊಸೈಟಿಯ ನಡಾವಳಿಯಲ್ಲಿ ಪ್ರಕಟಗೊಂಡಿತು ಹಾಗೂ  ಸೆಂಟ್ರಲ್ ಕಾಲೇಜಿನಲ್ಲಿ   ಸ್ಪೆಕ್ಟ್ರೋಸ್ಕೋಪಿ  ಸಂಶೋಧನಾ  ಕೇಂದ್ರ (School of Spectroscopy Research)  ಸ್ಥಾಪನೆಗೆ ಇದು ಮೂಲಕಾರಣವಾಯಿತು.  ಇಲ್ಲಿನ ಸಭಾಂಗಣದಲ್ಲಿ ೧೬ ಮಾರ್ಚ್ ೧೯೨೮ ರಂದು ಸರ್ ಸಿ ವಿ ರಾಮನ್ ತಮ್ಮ "ರಾಮನ್ ಎಫೆಕ್ಟ್ " ಬಗ್ಗೆ ವಿವರವಾದ ನಿರೂಪಣೆಯನ್ನು ಪ್ರಸ್ತುತ ಪಡಿಸಿದರು ಎನ್ನಲಾಗಿದೆ. ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಈ ಭವನವನ್ನು ರಾಮನ್ ಸಭಾಂಗಣ (Raman Hall) ಎಂದೇ ಕರೆಯಲಾಗುತ್ತದೆ.

೧೯೩೭ ರಲ್ಲಿ  ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ   ಪ್ರೊ ಎ. ವೆಂಕಟರಾವ್ ತೆಲಾಂಗ್ ಅವರು ವಾಯುಮಂಡಲದ ವಿದ್ಯುತ್ (Atmospheric Electricity) ವಿಷಯದಲ್ಲಿ ಸಂಶೋಧನೆಗೆ ಚಾಲನೆ ಕೊಟ್ಟರು. ಅಂತರರಾಷ್ಟ್ರೀಯ ಧ್ರುವ ವರ್ಷದ (International Polar Year) ಸಮಿತಿಯೊಂದಿಗೆ  ಸಹಯೋಗ ನಡೆಸಿದರು ಹಾಗೂ ವೈರ್ ಲೆಸ್ ವಿಭಾಗಕ್ಕೆ ಚಾಲನೆ ಕೊಟ್ಟರು. ಭಾರತದ ಅಂಚೆ ಮತ್ತು ತಂತಿ ಕಛೇರಿಯು ಯುದ್ಧದ ಸಂದರ್ಭದಲ್ಲಿ ಸೆಂಟ್ರಲ್ ಕಾಲೇಜಿನ  ವೈರ್ ಲೆಸ್ ವಿಭಾಗವನ್ನು ಸಂಪರ್ಕಿಸಿ ವಿದ್ಯುತ್ ಪ್ರಸರಕ ಚೋಕ್ ಗಳ  (power transmitter chokes) ವಿನ್ಯಾಸ ಮತ್ತು ಪರೀಕ್ಷೆ ನಡೆಸುವ ಕಾರ್ಯವನ್ನು ವಹಿಸಿತು. ಮೂರೇ ತಿಂಗಳುಗಳ ಅವಧಿಯಲ್ಲಿ ಈ ಕಾರ್ಯವನ್ನು  ಸಮರ್ಥವಾಗಿ ನಿರ್ವಹಿಸಿದರಿಂದಾಗಿ  ಈ ವಿಭಾಗವು ಅಧಿಕ ಪ್ರಶಂಸೆಗೆ ಪಾತ್ರವಾಯಿತು.

ಪ್ರೊ ಎಸ್. ರಾಮಚಂದ್ರ ರಾವ್ ಮತ್ತು ಪ್ರೊ ಎಸ್. ಬಿ. ಬೋಂಡಾಡೆ ಅವರುಗಳು ವಿಭಾಗದ ಮುಖ್ಯಸ್ಥರಾಗಿದ್ದ ಸಮಯದಲ್ಲಿ  ಆನರ್ಸ್ ಹಾಗೂ ಎಂ. ಎಸ್ . ಸಿ ಕಾರ್ಯಕ್ರಮಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ  ಹೆಚ್ಚಳವಾಗಿ ಭೌತಶಾಸ್ತ್ರ ವಿಭಾಗವು   ಗಣನೀಯ ಬೆಳವಣಿಗೆ ಕಂಡಿತು. ಮುಂದಿನ ವರ್ಷಗಳಲ್ಲಿ ಪ್ರೊ. ಎನ್. ಜಿ. ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ  ಪರಮಾಣು ಭೌತಶಾಸ್ತ್ರ (Nuclear Physics) ದ ಸಂಶೋಧನೆ ಆರಂಭಗೊಂಡಿತು.   ಯು.ಜಿ. ಸಿ. ಮತ್ತು ಸಿ . ಎಸ್. ಐ . ಆರ್ ಸಂಸ್ಥೆಗಳಿಂದ ಅವರು ಪಡೆದ ಅನುದಾನಗಳಿಂದಾಗಿ  ಪರಮಾಣು ಭೌತಶಾಸ್ತ್ರದ  ಸಂಶೋಧನಾ ಕಾರ್ಯಗಳಿಗೆ ಹೆಚ್ಚಿನ ಚಾಲನೆ ಸಿಕ್ಕಿತು.  ೧೯೯೦ ರ ಸುಮಾರಿಗೆ   ಪ್ರೊ. ಬಿ. ಸಿ. ಚಂದ್ರಶೇಖರ್ ಮತ್ತು ಪ್ರೊ. ಎಂ. ಎನ್. ಆನಂದರಾಮ್ ಅವರು ಖಗೋಳ ವಿಜ್ಞಾನದಲ್ಲಿ (Astrophysics) ಸಂಶೋಧನೆ ಪ್ರಾರಂಭಿಸಿದರು.  ಇದರಿಂದಾಗಿ ಶೀಘ್ರದಲ್ಲಿಯೇ ಖಗೋಳ ವಿಜ್ಞಾನ ವಿಷಯವನ್ನು ವಿಶೇಷ ವಿಷಯ (Special Subject)  ಆಗಿ ಅಧ್ಯಯಿಸುವ ಅವಕಾಶವೂ  ಎಂಎಸ್ಸಿ ವಿದ್ಯಾರ್ಥಿಗಳಿಗೆ ಲಭಿಸಿತು.   ದೇಶಾದ್ಯಂತ ಇರುವ ವಿಶ್ವವಿದ್ಯಾಲಯಗಳಲ್ಲಿ ಖಗೋಳ ವಿಜ್ಞಾನ ವಿಷಯವನ್ನು ವಿಶೇಷ ವಿಷಯ ಆಗಿ ಅಧ್ಯಯಿಸುವ ಅವಕಾಶ ಕೆಲವೇ  ಭೌತಶಾಸ್ತ್ರ ವಿಭಾಗಗಳಲ್ಲಿ  ಮಾತ್ರ ಲಭ್ಯವಾಗಿದ್ದ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ  ವಿಭಾಗದಲ್ಲಿ ಇದನ್ನು ಆರಂಭಿಸಿದ್ದು ಗಮನಾರ್ಹ.

೧೯೮೯ರಲ್ಲಿ ಭೌತಶಾಸ್ತ್ರ ವಿಭಾಗವು ಜ್ಞಾನಭಾರತಿ ಆವರಣಕ್ಕೆ ಸ್ಥಳೀಕರಣಗೊಂಡಿತು. ಪ್ರಸ್ತುತ  ಭೌತಶಾಸ್ತ್ರ  ವಿಭಾಗದಲ್ಲಿ ೧೫ ಮಂದಿ ಅಧ್ಯಾಪಕರು ಸೇವೆಯಲ್ಲಿದ್ದು,  ಸಕ್ರಿಯ ಭೋದನೆ ಮತ್ತು ಸಂಶೋಧನಾ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯು (ISRO) ಭೌತಶಾಸ್ತ್ರ ವಿಭಾಗದಲ್ಲಿ  ಸರ್ ಎಂ. ವಿಶ್ವೇಶ್ವರಯ್ಯ ಚೇರ್ ಅನ್ನು ಸ್ಥಾಪಿಸಿದೆ. ಅಲ್ಲದೆ ವಾಯುಮಂಡಲ ಮತ್ತು ಬಾಹ್ಯಾಕಾಶ ವಿಜ್ಞಾನ (Atmospheric and Space Science) ದಲ್ಲಿ ಸಂಶೋಧನೆ ಮತ್ತು ಭೋದನೆಗಳನ್ನು   ನಡೆಸಲು ಇಸ್ರೋ ಸಂಸ್ಥೆಯು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದೆ. ಭೌತಶಾಸ್ತ್ರ ವಿಭಾಗದ ಭೋದಕರು ಭಾರತೀಯ ವಿಜ್ಞಾನ ಸಂಸ್ಥೆ ( IISc),   ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ರಾಮನ್ ಸಂಶೋಧನಾ ಸಂಸ್ಥೆ (Raman Research Institute), ಭಾರತೀಯ ಖಗೋಳ ವಿಜ್ಞಾನ ಸಂಸ್ಥೆ (Indian Institute of Astrophysics), IUAC, IUCAA, IGKAR, UGC-DAE-CSIR ನಂತಹ ರಾಷ್ಟ್ರೀಯ ಸಂಸ್ಥೆಗಳಲ್ಲದೆ ಅಂತರರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಸಂಶೋಧನಾ ಸಹಯೋಗವನ್ನು ನಡೆಸುತ್ತಿದ್ದಾರೆ. UGC, BRNS-DAE, DST ಸಂಸ್ಥೆಗಳಿಂದ ಭೌತಶಾಸ್ತ್ರ ವಿಭಾಗದ ಅಧ್ಯಾಪಕರುಗಳು ತಮ್ಮ ಸಂಶೋಧನೆಗಳಿಗೆ ಅನುದಾನ ಪಡೆದಿದ್ದಾರೆ.  ಭೌತಶಾಸ್ತ್ರ ವಿಭಾಗವು DST-FIST ನ ಅನುದಾನವನ್ನು ಕೂಡ ಗಳಿಸಿದೆ.

 

ವಿಭಾಗದ ಮುಖ್ಯಸ್ಥರು: ಡಾ. ಎ.ಆರ್ ಉಷಾದೇವಿ

ಅಧಿಕಾರಾವಧಿ :01.02.2021 ರಿಂದ 31.01.2023

ಸಂಪರ್ಕ ವಿವರಗಳು :

ವಿಳಾಸ:   ಭೌತಶಾಸ್ತ್ರ ವಿಭಾಗ, ಜ್ಞಾನಭಾರತಿ ಆವರಣ – ೫೬೦ ೦೫೬

ದೂರವಾಣಿ ಸಂಖ್ಯೆ : (ಓ) ೦೮೦-೨೨೯೬ ೧೪೭೧/೯೦

ಇ-ಮೇಲ್ :    dept.physics@bub.ernet.in

ಲಭ್ಯವಿರುವ ಕೋರ್ಸ್ (ವಿಷಯಗಳ) ವಿವರ : ಕೋರ್ಸ್ ಗಳ ಹೆಸರು ಮತ್ತು ಅವಧಿ :

           ಎಂ.ಎಸ್ಸಿ ಭೌತಶಾತ್ತ್ರ, ಬಿ ಇ- ಎಂಜಿನಿಯರಿಂಗ್ ಭೌತಶಾಸ್ತ್ರ (ಯು.ವಿ.ಸಿ.ಇ.ಯಲ್ಲಿ)

         ಎಂ.ಎಸ್ಸಿ ಭೌತಶಾಸ್ತ್ರ :

                   ಕೋರ್ಸಿನ ಸ್ವರೂಪ:     ಸೆಮಿಸ್ಟರ್ ಸ್ಕೀಮ್ (ಸಿ.ಬಿ.ಸಿ.ಎಸ್)
                ಅವಧಿ:   ನಾಲ್ಕು ಸೆಮಿಸ್ಟರ್
               ಸೀಟ್ ಗಳು:     ೬೦ + ಪೇಮೆಂಟ್ ಸೀಟ್ ಗಳು – ೧೫

ಅರ್ಹತೆ:   ಅಭ್ಯರ್ಥಿಯು ಬಿ.ಎಸ್ಸಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಇತರೆ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ತೇರ್ಗೆಡೆ ಹೋದಿದ್ದು ಸದರಿ ಕೋರ್ಸ್ ನಲ್ಲಿ ಭೌತಶಾಸ್ತ್ರ  ಮತ್ತು ಗಣಿತಶಾಸ್ತ್ರ ವಿಷಯಗಳನ್ನು ಓದಿರಬೇಕು.ಐಚ್ಚಿಕ ವಿಷಯಗಳಲ್ಲಿ ಕನಿಷ್ಟ ಶೇಖಡ ೫೦ ಅಂಕಗಳನ್ನು ಗಳಿಸಿರಬೇಕು.

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿ

ಪ್ರೊಫೈಲ್ ವೀಕ್ಷಿಸಿ

1ಡಾ.ಶರತ್ ಅನಂತಮೂರ್ತಿಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಮೃದು ಮತ್ತು ಲಿವಿಂಗ್ ವಸ್ತುಗಳು ಮತ್ತು ಸ್ಪೆಕ್ಟ್ರೋಸ್ಕೋಪಿ
ಪ್ರೊಫೈಲ್
2ಡಾ.ರಾಮ ಕೃಷ್ಣ ದಾಮ್ಲೆಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಅಡ್ವಾನ್ಸ್ ಡ್ ಮೆಟೀರಿಯಲ್ಸ್ಪ್ರೊಫೈಲ್
3ಡಾ.ಎನ್. ನಾಗಯ್ಯ
ಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಪರಮಾಣು ಮತ್ತು ವಿಕಿರಣ ಭೌತಶಾಸ್ತ್ರಪ್ರೊಫೈಲ್
4ಡಾ.ವಿ.ಹೆಚ್. ದೊಡ್ಡಮನಿಎಂ.ಎಸ್ಸಿ,ಎಂ. ಫಿಲ್, ಪಿಹೆಚ್.ಡಿಪ್ರಾಧ್ಯಾಪಕರುಆಸ್ಟ್ರೋಫಿಸಿಕ್ಸ್ ಮತ್ತು ಖಗೋಳಶಾಸ್ತ್ರ
ಪ್ರೊಫೈಲ್
5ಡಾ.ಎಂ.ಕೆ. ಕೋಕಿಲಎಂ.ಎಸ್ಸಿ,ಎಂ. ಫಿಲ್, ಪಿಹೆಚ್.ಡಿಪ್ರಾಧ್ಯಾಪಕರುಅಡ್ವಾನ್ಸ್ ಡ್ ಮೆಟೀರಿಯಲ್ಸ್ ಮತ್ತು ಸ್ಫಟಿಕಶಾಸ್ತ್ರಪ್ರೊಫೈಲ್
6ಡಾ.ಎ.ಆರ್. ಉಷಾದೇವಿ
ಎಂ.ಎಸ್ಸಿ, ಪಿಹೆಚ್.ಡಿಪ್ರಾಧ್ಯಾಪಕರುಕ್ವಾಂಟಮ್ ಮಾಹಿತಿ ಸಿಧ್ದಾಂತಪ್ರೊಫೈಲ್
7ಡಾ.ಬಿ. ಈರಯ್ಯ
ಎಂ.ಎಸ್ಸಿ,ಎಂ. ಫಿಲ್, ಪಿಹೆಚ್.ಡಿಪ್ರಾಧ್ಯಾಪಕರುಅಡ್ವಾನ್ಸ್ ಡ್ ಮೆಟೀರಿಯಲ್ಸ್ಪ್ರೊಫೈಲ್
8ಡಾ.ಬಿ.ಎನ್. ಮೀರಾ
ಎಂ.ಎಸ್ಸಿ, ಪಿಹೆಚ್.ಡಿಸಹ ಪ್ರಾಧ್ಯಾಪಕರುಭೌತಶಾಸ್ತ್ರ ಶಿಕ್ಷಣ ಸಂಶೋಧನೆ
ಪ್ರೊಫೈಲ್
9ಡಾ.ಕಂಸಾಲಿ ನಾಗರಾಜಎಂ.ಎಸ್ಸಿ, ಪಿಹೆಚ್.ಡಿಸಹ ಪ್ರಾಧ್ಯಾಪಕರು ವಾಯುಮಂಡಲ ಮತ್ತು ಬಾಹ್ಯಾಕಾಶ ವಿಜ್ಞಾನಪ್ರೊಫೈಲ್
10ಡಾ.ಸಿ.ಜಿ. ರೇಣುಕಎಂ.ಎಸ್ಸಿ, ಪಿಹೆಚ್.ಡಿಸಹ ಪ್ರಾಧ್ಯಾಪಕರುಸ್ಪೆಕ್ಟ್ರೋಸ್ಕೋಪಿ ಮತ್ತು ಅಡ್ವಾನ್ಸ್ಡ್ ಮೆಟೀರಿಯಲ್ಸ್ಪ್ರೊಫೈಲ್
11ಡಾ.ಬಸವರಾಜ್ ಅಂಗಡಿಎಂ.ಎಸ್ಸಿ,ಎಂ. ಫಿಲ್, ಪಿಹೆಚ್.ಡಿಸಹ ಪ್ರಾಧ್ಯಾಪಕರುಅಡ್ವಾನ್ಸ್ಡ್ ಮೆಟೀರಿಯಲ್ಸ್ಪ್ರೊಫೈಲ್
12ಡಾ.ಶರಭರಿ ಭಟ್ಟಾಚಾರ್ಯಎಂ.ಎಸ್ಸಿ, ಪಿಹೆಚ್.ಡಿಸಹಾಯಕ ಪ್ರಾಧ್ಯಾಪಕರುಮೃದು ಮತ್ತು ಲಿವಿಂಗ್ ವಸ್ತುಗಳು
ಪ್ರೊಫೈಲ್

 ವಿಭಾಗದಲ್ಲಿ ಪ್ರಸ್ತುತ ನಡೆಯುತ್ತಿರುವ ಸಂಶೋಧನಾ ವಿಷಯಗಳು ಹೀಗಿವೆ: 

 • ಕ್ಷ-ಕಿರಣ ಸ್ಫಟಿಕಶಾಸ್ತ್ರ ( X-ray Crystallography)
 • ಘನಸ್ಥಿತಿ ವಸ್ತುಗಳ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ (NMR)/ ನ್ಯೂಕ್ಲಿಯರ್ ಕ್ವಾಡ್ರುಪೋಲ್  ರೆಸೋನೆನ್ಸ್(NQR)/ ಎಲೆಕ್ಟ್ರಾನ್ ಸ್ಪಿನ್ ರೆಸೋನೆನ್ಸ್ (ESR).   (NMR / ESR / NQR of solids)
 • ನಕ್ಷತ್ರಗಳ ರಚನೆ ಮತ್ತು ಸಕ್ರಿಯ ಗೆಲ್ಯಾಕ್ಟಿಕ್ ನ್ಯೂಕ್ಲಿಯೈ ಗಳನ್ನು ಕುರಿತ ಖಗೋಳ ಶಾಸ್ತ್ರ ಸಂಶೋಧನೆ  (Astrophysics research in stellar structure and active galactic nuclei). 
 • ಗ್ಲಾಸ್ ವಿಜ್ಞಾನ ( Glass Science)
 • ಪರಮಾಣು ಮತ್ತು ವಿಕಿರಣ ಭೌತಶಾಸ್ತ್ರ (Nuclear and Radiation Physics). 
 • ಕ್ವಾಂಟಮ್ ಮಾಹಿತಿ  ಸಿಧ್ದಾಂತ (Quantum information Theory)
 • ಭೌತಶಾಸ್ತ್ರ ಶಿಕ್ಷಣ ಸಂಶೋಧನೆ (Physics Education Research) 
 • ನ್ಯಾನೋ ಪಾಸ್ಫರ್ ವಸ್ತುಗಳು (Nanophosphor Materials
 • ಅರೆವಾಹಕಗಳಲ್ಲಿ ವಿಕಿರಣ ಹಾನಿಯ ಕುರಿತ ಸಂಶೋಧನೆ (Radiation damage studies in semiconductors)
 • ಮ್ಯಾಟರ್ನೊಂದಿಗೆ  ತ್ವರಿತ ಗತಿಯ ಭಾರೀ ಅಯಾನುಗಳ ಸಂವಹನೆ (Swift heavy ion interaction with matter)
 • ಥಿನ್ ಫಿಲ್ಮ್ಸ್ (Thin films)
 • ಕಾಂತೀಯ ವಸ್ತುಗಳ ಮೋಸ್ಬಾಯರ್ ಸ್ಪೆಕ್ಟ್ರೋಸ್ಕೋಪಿ (Mössbauer Spectroscopy of certain magnetic materials)
 • ಮೃದು ಮತ್ತು ಜೈವಿಕ ವಸ್ತುಗಳು (Soft and Biological Matter)
 • ಅಯಾನ್ ಟ್ರ್ಯಾಪ್ ಸ್ಪೆಕ್ಟ್ರೋಸ್ಕೋಪಿ (Ion Trap Spectroscopy)

ಭೌತಶಾಸ್ತ್ರ ವಿಭಾಗದ ವಿಶೇಷ ಅಲುಮ್ನಿ

ಬೆಂಗಳೂರಿನ ಭೌತಶಾಸ್ತ್ರ ವಿಭಾಗದ ಅಲುಮ್ನಿ ಅಸೋಸಿಯೇಷನ್

The students and the parents are the direct stakeholders of any institution of higher education whose feedback and responses are very important for the growth of the institution and the quality of services rendered by the institution. Hence, an Alumni Association of the past students of the Department and their parents has been established in the Department of Physics. The purpose of this association is to invite feedback from the students and parents which would help in maintaining and improving quality of services rendered by the Department.

All those past students and their parents can become members free of cost by giving following details:

Name:

Year of passing M.Sc. Physics:

Reg. No.:

Present occupation/employment:

Contact Tel No. and e-mail ID:

The above information may be sent to the Department e-mail ID:

                       dept.physics@bub.ernet.in

Meetings of the past students and parents will be held in the Department periodically to interact with the teachers.  Meeting schedule will be sent to all members through e-mail.