ವಿಭಾಗದ ಇತಿಹಾಸ

ಸ್ನಾತಕೋತ್ತರ ಭೂಗೋಳಶಾಸ್ತ್ರ ವಿಭಾಗವು 1974 – 75 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಪ್ರಾರಂಭವಾಯಿತು. ಆಗಿನ ಕುಲಪತಿಗಳಾದ ಡಾ. ಹೆಚ್.ಎನ್ ನರಸಿಂಹಯ್ಯ ಅವರು ಮತ್ತು ಪ್ರೊ.ಎಂ.ಎಸ್ ಶಾಂತವೀರಯ್ಯ ಅವರು ವಿಭಾಗದ ಸ್ಥಾಪನೆಯ ಹಿಂದೆ ಇದ್ದರು.  ಆರಂಭದಲ್ಲಿ ವಿಭಾಗದ ಮೊದಲ ಮುಖ್ಯಸ್ಥರಾಗಿ ಡಾ. ಸಿ.ನಾಗಣ್ಣ ಅವರ ನೇತೃತ್ವದಲ್ಲಿ ಬೆಳೆಯಿತು. ನಂತರ ಡಾ. ದಕ್ಷ.ಸಿ. ಬಾರೈ ಅವರು ವಿಭಾಗದ ಮುಖ್ಯಸ್ಥರಾಗಿದ್ದರು. ನಂತರ ಅಧ್ಯಕ್ಷರ ರೊಟೇಷನ್ ಪದ್ದತಿಯನ್ನು ಪರಿಚಯಿಸಲಾಯಿತು.

ವಿಭಾಗವು ಎಂ.ಎಸ್ಸಿ ಭೂಗೋಳಶಾಸ್ತ್ರ ಮತ್ತು ಜಿಯೋಇನ್ಫಾರ್ಮೆಟಿಕ್ಸ್ ನಲ್ಲಿ ಸ್ನಾತಕೋತ್ತರ.ಡಿಪ್ಲೊಮೊ (ಸ್ವಯಂ ಹಣಕಾಸು ಯೋಜನೆ) ಮತ್ತು ಪಿಹೆಚ್.ಡಿ ಪ್ರೋಗ್ರಾಂ ಗಳನ್ನು ಒದಗಿಸುತ್ತದೆ. ಈ ವಿಭಾಗದಿಂದ ಪದವೀಧರರಿಗೆ ಹೆಚ್ಚಿನ ಬೇಡಿಕೆ ಇದೆ. ಮತ್ತು ಅದಕ್ಕಾಗಿಯೇ ಶಿಕ್ಷಣಕ್ಕೆ ಬೇಡಿಕೆ ಇದೆ. ಪ್ರಾರಂಭದಿಂದಲೂ 47 ಪಿಹೆಚ್.ಡಿ ಡಿಗ್ರಿ ಗಳನ್ನು ವಿಭಾಗದಿಂದ ನೀಡಲಾಗಿದೆ.

ಅಧ್ಯಕ್ಷರು: ಡಾ. ಅಶೋಕ್ ಡಿ. ಹಂಜಗಿ

ಅವಧಿ:  29.07.2021 ರಿಂದ 28.07.2023

ನಮ್ಮನ್ನು ಸಂಪರ್ಕಿಸಿ

ದೂ 080 - 22961371, 22961377  
ಫ್ಯಾಕ್ಸ್080 23219295

ಇಮೇಲ್: geography@bub.ernet.in
              chairmangeog1974@gmail.com

ವೆಬ್ ಸೈಟ್:   www.bangaloreuniversity.ac.in

                   http://www.ugit.net/

ಅ. ಲಭ್ಯವಿರುವ ಕೋರ್ಸುಗಳು :

ಅ. ಭೂಗೋಳ ಶಾಸ್ತ್ರ  ಎಂ.ಎಸ್ಸಿ

ಆ. ಭೌಗೋಳಿಕ ಮಾಹಿತಿ ವಿಜ್ಞಾನ ಎಂ.ಎಸ್ಸಿ (GIS) - 2017-18 ರಿಂದ

ಇ. ನೈಸರ್ಗಿಕ ವಿಪತ್ತು ನಿರ್ವಹಣೆ ಎಂ.ಎಸ್ಸಿ

ಇ. ಜಿಯೋಇನ್ಫಾರ್ಮೆಟಿಕ್ಸ್ ನಲ್ಲಿ ಸ್ನಾತಕೋತ್ತರ.ಡಿಪ್ಲೊಮೊ

ಆ. ಕೋರ್ಸಿನ ಸ್ವರೂಪ:

ಅ. ಸೆಮಿಸ್ಟರ್ ವ್ಯವಸ್ಥೆ

ಅ. ಸೆಮಿಸ್ಟರ್ ವ್ಯವಸ್ಥೆ

ಇ. ವಾರ್ಷಿಕ ವ್ಯವಸ್ಥೆ

ಇ. ಅವಧಿ-

ಅ ಮತ್ತು ಆ 4 ಸೆಮಿಸ್ಟರ್ (2 ವರ್ಷಗಳು)

ಇ. 1 ವರ್ಷ

ಈ .  ಲಭ್ಯವಿರುವ ಸೀಟುಗಳು -

ಅ. 30 + ಅಧಿಕ ಶುಲ್ಕ ಸೀಟುಗಳು  -06

 ಆ. 12 + 3 (ನಿಯೋಜಿತ ಅಭ್ಯರ್ಥಿಗಳು)

ಉ.  ಅರ್ಹತೆ: 

ಅ. ಭೂಗೋಳ ಶಾಸ್ತ್ರ ಮತ್ತು ಭೌಗೋಳಿಕ ಮಾಹಿತಿ ವಿಜ್ಞಾನ ಎಂ.ಎಸ್ಸಿ (GIS)  ಅರ್ಹತೆ

ಅಭ್ಯರ್ಥಿಯು ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಬಿಎ/ ಬಿಎಸ್ಸಿ/ ಬಿ.ಕಾಂ/ ಬಿಇ  ಪರೀಕ್ಷೆಗಳಲ್ಲಿ ಪದವಿಯನ್ನು ಪಡೆದವರು, ಶೇ.50% ರಷ್ಟು ಅಂಕಗಳನ್ನು ಐಚ್ಛಿಕ ವಿಷಯಗಳಲ್ಲಿ ತೆಗೆದುಕೊಂಡವರು ಈ ಕೋರ್ಸಿಗೆ ಅರ್ಹರಾಗಿರುತ್ತಾರೆ.(ಪ.ಜಾ / ಪ.ಪಂ ಅಭ್ಯರ್ಥಿಗಳು ಶೇ. 45% ರಷ್ಟು ಪಡೆದಿರಬೇಕು).

ಇದಲ್ಲದೇ ಭೂಗೋಳಶಾಸ್ತ್ರವನ್ನು ಐಚ್ಛಿಕ ವಿಷಯಗಳಲ್ಲಿ ಒಂದಾಗಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಶೇ.50% ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಉಳಿದ ಶೇ.50% ಸ್ಥಾನಗಳನ್ನು ಯಾವುದೇ ಐಚ್ಛಿಕ ವಿಷಯಗಳ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಎರಡೂ ಸಂಧರ್ಭಗಳಲ್ಲಿ ಖಾಲಿ  ಸ್ಥಾನಗಳನ್ನು ಭರ್ತಿ ಮಾಡಿದರೆ ಪರಿಗಣಿಸಬಹುದು.

ಆ.  ಜಿಯೋಇನ್ಫಾರ್ಮೆಟಿಕ್ಸ್ ನಲ್ಲಿ ಸ್ನಾತಕೋತ್ತರ. ಡಿಪ್ಲೊಮೊಗೆ ಅರ್ಹತೆ:

ಭೂ ವಿಜ್ಞಾನ, ಭೂಗೋಳ ಶಾಸ್ತ್ರ, ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ : ಸಿವಿಲ್ ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪದಲ್ಲಿ ಸ್ನಾತಕ ಪದವಿಯನ್ನು ಶೇಕಡಾ 55% ಅಂಕಗಳೊಂದಿಗೆ ಪಡೆದಿರಬೇಕು.  ಸ್ವಯಂ ಹಣಕಾಸು ವ್ಯವಸ್ಥೆ ಮೇಲೆ ಈ ಕೋರ್ಸ್ ನಡೆಯುತ್ತದೆ.    50%ರಷ್ಟು ಸೀಟುಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ   25% ರಷ್ಟು ಸೀಟುಗಳನ್ನು ಕರ್ನಾಟಕದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲದಿಂದ ಹೊರಗಿನ ವಿಧ್ಯಾರ್ಥಿಗಳಿಗೆ,   25% ರಷ್ಟು ಸೀಟುಗಳನ್ನು ಕರ್ನಾಟಕದಿಂದ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಸ್ವವಿವರ
1ಡಾ.ಅಶೋಕೆ.ಡಿ. ಹಂಜಗಿಎಂ. ಎಸ್ಸಿ; ಪಿಹೆಚ್.ಡಿಪ್ರಾಧ್ಯಾಪಕರುಎನ್ವಿರಾನ್ಮೆಂಟಲ್ ಜಿಯೋಗ್ರಾಫಿ ಅರ್ಬಾನ್ ರಿಮೋಟ್ ಸೆನ್ಸಿಂಗ್ ಅಂಡ್ ಜಿಐಎಸ್ ವೀಕ್ಷಿಸಿ
1ಡಾ.ಸುರೇಂದ್ರ ಪಿಎಂ. ಎಸ್ಸಿ; ಪಿಹೆಚ್.ಡಿಸಹಾಯಕ
ಪ್ರಾಧ್ಯಾಪಕರು
ನಗರ/ ಕೃಷಿ/ ಆರ್ಥಿಕ / ಜನಸಂಖ್ಯೆ/ ಜಿಐಎಸ್ ಅಪ್ಲಿಕೇಶನ್‌ಗಳು ವೀಕ್ಷಿಸಿ