ವಿಭಾಗದ ಇತಿಹಾಸ::

ವಿದ್ಯುನ್ಮಾನ ಮಾಧ್ಯಮ ವಿಭಾಗವು 2002-03ರ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗಿದ್ದು, ಈ ವಿಭಾಗವು ವಿದ್ಯುನ್ಮಾನ ಮಾಧ್ಯಮಗಳಾದ ಟೆಲಿವಿಷನ್, ರೇಡಿಯೋ ಮತ್ತು ನವ ಮಾಧ್ಯಮಗಳಿಗೆ ಸಂಬಂಧಿಸಿದ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಟೆಲಿವಿಷನ್ ವಾಹಿನಿಗಳು, ಬಾನುಲಿ ಕೇಂದ್ರಗಳು ಹಾಗೂ ವೆಬ್ ಆಧಾರಿತ ಮಾಧ್ಯಮ ವೇದಿಕೆಗಳ ಬೆಳವಣಗೆಯಿಂದಾಗಿ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯಕ್ರಮ ನಿರ್ಮಾಣ ಮಾಡಲು ತಂತ್ರಜ್ಞಾನದ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಹೆಚ್ಚಿದೆ. ಈ ಬೇಡಿಕೆಯನ್ನು ಪೂರೈಸಲು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿದ್ಯುನ್ಮಾನ ಮಾಧ್ಯಮ ವಿಭಾಗವನ್ನು ಆರಂಭಿಸಲಾಗಿದೆ. ಪಠ್ಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಸಮತೋಲನವನ್ನು ಕಾಪಾಡಿಕೊಳ್ಳುತ್ತಾ ಈ ವಿಭಾಗವು ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಟೆಲಿವಿಷನ್, ಬಾನುಲಿ ಹಾಗೂ ನವ ಮಾಧ್ಯಮಗಳಲ್ಲಿ ಉದ್ಯೋಗ ದೊರಕಲು ಅನುಕೂಲವಾಗುವಂತೆ ವಿಭಾಗವು ಪ್ರಾಯೋಗಿಕ ತರಬೇತಿಗಳಿಗೆ ಹೆಚ್ಚು ಆದ್ಯತೆಂiÀiನ್ನು ನೀಡುತ್ತಿದೆ. ವಿಭಾಗದಲ್ಲಿ ಟೆಲಿವಿಷನ್ ಸ್ಟುಡಿಯೊ, ವಿಡಿಯೋ ಸಂಕಲನ ಕೇಂದ್ರ, ಸುಧಾರಿತ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾಗಳು, ಡ್ರೋಣ್ ಕ್ಯಾಮೆರಾ, ಧ್ವನಿ ಸಂಕಲನ ಹಾಗೂ ಮುದ್ರಣ ವ್ಯವಸ್ಥೆ, ಕಂಪ್ಯೂಟರ್ ಲ್ಯಾಬ್, ಉತ್ತಮ ಶೈಕ್ಷಣಿಕ ಅರ್ಹತೆ ಇರುವ ಬೋಧಕ ವರ್ಗ ಹಾಗೂ ವೈ-ಫೈ ತಂತ್ರಜ್ಞಾನ ಆಧಾರಿತ ಬೋಧನಾ ಕೊಠಡಿಗಳು, ನೂರಾರು ಪುಸ್ತಕ ಹಾಗೂ ಹಲವಾರು ಸುದ್ದಿ ಪತ್ರಿಕೆ, ವಾರಪತ್ರಿಕೆಗಳನ್ನು ಹೊಂದಿರುವ ಗ್ರಂಥಾಲಯ, ಹೀಗೆ ಹಲವಾರು ವಿಶೇಷ ಸೌಲಭ್ಯಗಳಿವೆ.

ಈ ಕೋರ್ಸ್ ನಾಲ್ಕು ಸೆಮಿಸ್ಟರ್ ಅಂದರೆ ಎರಡು ವರ್ಷ ಅವಧಿಯದ್ದಾಗಿದೆ. ಕೋರ್ಸ್‍ನ ಅಂತ್ಯಕ್ಕೆ ವಿದ್ಯಾರ್ಥಿಗಳು ನಾಲ್ಕು ವಾರಗಳ ಕಲಿಕಾ ತರಬೇತಿಯನ್ನು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಪಡೆದುಕೊಳ್ಳಬೇಕಾಗುತ್ತದೆ. ಎರಡು ವರ್ಷಗಳ ಅವಧಿಯಲ್ಲಿ ಸುದ್ದಿ ಸಂಗ್ರಹಣೆ ಹಾಗೂ ವಿದ್ಯುನ್ಮಾನ ಮಾಧ್ಯಮ ವರದಿಗಾರಿಕೆ, ನವ ಮಾಧ್ಯಮ ತಂತ್ರಜ್ಞಾನ, ಟೆಲಿವಿಷನ್ ಕಾರ್ಯಕ್ರಮ ನಿರ್ಮಾಣ, ಬಾನುಲಿ ಕಾರ್ಯಕ್ರಮ ನಿರ್ಮಾಣ, ಮಾಧ್ಯಮ ನಿರ್ವಹಣೆ, ಜಾಹೀರಾತು ಹಾಗೂ ಸಾಂಸ್ಥಿಕ ಸಂವಹನ, ಮಾಧ್ಯಮ ನೀತಿ ಸಂಹಿತೆ ಹಾಗೂ ಮಾಧ್ಯಮ ಸಂಶೋಧನೆಯಂತಹ ಪ್ರಮುಖ ವಿಷಯಗಳ ಜೊತೆ ಇನ್ನಿತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತದೆ.

ವಿಭಾಗದ ಹಲವಾರು ವಿದ್ಯಾರ್ಥಿಗಳು ಟೆಲಿವಿಷನ್, ಮನೋರಂಜನೆ, ಬಾನುಲಿ ಕೇಂದ್ರಗಳು, ಜಾಹೀರಾತು ಹಾಗೂ ಸಾಂಸ್ಥಿಕ ಸಂವಹನ, ಸಿನಿಮಾ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

 

ಸಂಯೋಜಕರು: ಡಾ.ಟಿ. ಶ್ರೀಪತಿ

ಅಧಿಕಾರಾವಧಿ: 01.04.2021 ರಿಂದ 31-03-2023

ನಮ್ಮನ್ನು ಸಂಪರ್ಕಿಸಿ

ವಿದ್ಯುನ್ಮಾನ ಮಾಧ್ಯಮ ವಿಭಾಗ
ಹಳೆ ಪರೀಕ್ಷಾ ಭವನ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು- 560 056

ದೂರವಾಣಿ ಸಂಖ್ಯೆ: 080 22961993

ಇಮೇಲ್ ಐಡಿ: universityelectronicmedia@gmail.com

ವಿಭಾಗದ ಜಾಲತಾಣ:

https://jnanabharathitv.wixsite.com/bunews

 

A. Courses Offered

M.Sc. in Electronic Media (Self Financing Course)

M.Sc. in Film Making (Self Financing Course)

M.Sc. in Graphics & Animation (Self Financing Course)

B. Nature of Course - Semester Scheme

C. Duration - 4 Semesters (2 years)

D. Intake - 35 + Payment Seats – 05

E. Eligibility:

Candidates who have passed any bachelors degree examination of Bangalore University or any other recognized university and passed graduation with 50 percent of marks (aggregate of all the subjects including the languages) are eligible as per the Bangalore University rules.

Sl. NoNameQualificationsDesignationSpecializationView Profile
1Dr.VahiniM.S. Communication, PG Dip in Higher EdnAssistant ProfessorNews Media Technology
 Profile
2Dr. T. SripathyM.A., JMC,PG Dip in TV ProductionAssistant ProfessorTV Production Profile
3
Dr. R. RajeshwariM.S. Communication
Assistant ProfessorRadio Production, Advertizing & Corporate Communication Profile