ವಿಭಾಗದ ಇತಿಹಾಸ

ಸಂವಹನ ಅಧ್ಯಯನ ವಿಭಾಗವು 1973 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಹೆಚ್. ನರಸಿಂಹಯ್ಯ ನವರು ತೆಗೆದುಕೊಂಡ ಉಪಕ್ರಮದೊಂದಿಗೆ ಸ್ಥಾಪಿಸಲ್ಪಟ್ಟಿತು..
ಸಂವಹನ ಕ್ಷೇತ್ರದಲ್ಲಿ ಪರಿಣಿತರಾಗಿರುವ ಡಾ.ಇ.ಕೆ.ಈಫೆನ್ಸ್ ಅವರನ್ನು ಸಂವಹನ ವಿಭಾಗದ ಮುಖ್ಯಸ್ಥರಾಗಲು ಆಹ್ವಾನಿಸಲಾಗಿತ್ತು.
ಶ್ರೇಷ್ಠ ಪತ್ರಕರ್ತರು, ಸಂವಹನ ತಜ್ಞರು ಮತ್ತು ಶಿಕ್ಷಣ ತಜ್ಞರು ವಿಭಾಗದ ಅಭಿವೃದ್ಧಿಯ ಹಂತಗಳಲ್ಲಿ ಭಾಗಿಯಾಗಿದ್ದರು.
ಡಾ. ಎ.ವಿ.ಷಣ್ಮುಗನ್ ,ಯುನೆಸ್ಕೋ ಸಲಹೆಗಾರ ಮತ್ತು ಪ್ರೊಫೆಸರ್, ಅಭಿವೃದ್ಧಿ ಸಂವಹನ ಐಐಎಂ ಡಾ. ನಟೇಶನ್, ಪ್ರಸಾರಂಗದಲ್ಲಿ ಯುನೆಸ್ಕೊ ಸಲಹೆಗಾರ ಡಾ. ಹೆಚ್.ಕೆ. ರಂಗನಾಥ್, ಸಾಂಪ್ರದಾಯಿಕ ಮಾಧ್ಯಮದಲ್ಲಿ ಯುನೆಸ್ಕೊ ಸಲಹೆಗಾರ ಶ್ರೀ. ಕುಲದೀಪ್ ನಾಯರ್, ಗ್ರೇಟ್ ಬ್ರಿಟನ್ನಿನ ಪತ್ರಕರ್ತ ಮತ್ತು ಮಾಜಿ ಹೈ ಕಮೀಷನರ್, ಡಾ. ಬಷೀರುದ್ದಿನ್,  ಸಂವಹನ ದ ಪ್ರಾಧ್ಯಾಪಕರು, ಕತಾರ್ ನ ಮಾಜಿ ರಾಯಭಾರಿ, ಕುಲಪತಿ, ಡಾ. ಅಂಬೇಡ್ಕರ್ ಓಪನ್ ಯೂನಿವರ್ಸಿಟಿ, ಹೈದರಾಬಾದ್, ಡಾ. ಎ.ಡಬ್ಲ್ಯೂ.ಖಾನ್ , ಮಾಜಿ ಕುಲಪತಿಗಳು, ಇಂದಿರಾಗಾಂಧಿ ಓಪನ್ ಯೂನಿವರ್ಸಿಟಿ, ಪ್ರೊ. ಸತೀಶ್ ಬಹದೂರ್, ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಪುಣೆ.
ಡಾ. ಎನ್.ವಿ. ಮೂರ್ತಿ, ನಿರ್ದೇಶಕರು, ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಪ್ರೊ. ಎನ್.ವಿ.ತೀರ್ಥ, ಮುಖ್ಯಸ್ಥರು, ಶಿಕ್ಷಣ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.
ಈ ಶ್ರೇಷ್ಠ ವ್ಯಕ್ತಿಗಳು ವಿಭಾಗದ ಬೋಧನೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಅನಂತರ ಪ್ರೊ.ಬಿ.ಎ. ಶ್ರೀಧರ, ಪ್ರೊ.ಲೀಲಾ ರಾವ್, ಶ್ರೀ ರಮೇಶ್ ಮತ್ತು ಪ್ರೊ. ಬಾಲಸುಬ್ರಹಣ್ಯಂ ವಿಭಾಗದ ಭೋದನಾ ಸದಸ್ಯರಾಗಿ ಸೇರಿಕೊಂಡರು. ನಂತರ ಪ್ರೊ.ಹೆಚ್.ಎಸ್. ಈಶ್ವರ್ ಈ ಮೊದಲು ಮೈಸೂರು ವಿಶ್ವವಿದ್ಯಾಲಯದಲ್ಲಿ  ಕೆಲಸ ನಿರ್ವಹಿಸಿದ ಮತ್ತು  ಪಿಹೆಚ್.ಡಿ ಪದವಿ ಯನ್ನು ಯೂನಿವರ್ಸಿಟಿ ಇನ್ ವಿಸ್ಕಾನ್ಸಿನ್  ನಲ್ಲಿ ಪಡೆದವರು ಡಾ.ಈಪೇನ್ ವಿಭಾಗದ ಅಧ್ಯಕ್ಷರಾಗಿ ಯಶಸ್ವಿಯಾದರು. ಅನಂತರ ಪ್ರೊ.ಬಿ.ಎ. ಶ್ರೀಧರ, ಪ್ರೊ.ಕೆ.ಪುಟ್ಟರಾಜು, ಪ್ರೊ. ಲೀಲಾರಾವ್ ಪ್ರೊ.ಜಗದೀಶ್ ಪ್ರಕಾಶ್ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮತ್ತು ಪ್ರಸ್ತುತ ಪ್ರೊ.ಬಿ.ಕೆ. ರವಿ ವಿಭಾಗದ ಅಧ್ಯಕ್ಷರಾಗಿದ್ದಾರೆ.
ಭಾರತದಲ್ಲಿ ಟೆಲಿವಿಷನ್ ಬೆಳವಣಿಗೆಯನ್ನು ಗುರುತಿಸಿರುವ ಮೊಟ್ಟಮೊದಲ ವಿಭಾಗವಾಗಿದೆ ಮತ್ತು ದೂರದರ್ಶನ ಮತ್ತು ರೇಡಿಯೋ ಕಾರ್ಯಕ್ರಮಗಳ ಉತ್ಪಾದನೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಿ.ಸಿ.ಟಿ.ವಿ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಿದ ಮೊದಲ ಮತ್ತು ಅಗ್ರಗಣ್ಯ ವಿಭಾಗವಾಗಿದೆ.
ಸಂವಹನ ವಿಜ್, ಪತ್ರಿಕೋದ್ಯಮ, ಉಪಗ್ರಹ ಸಂವಹನ, ಸಂವಹನ ನೀತಿ ಮತ್ತು ಯೋಜನೆ, ಜಾಹಿರಾತು ಮತ್ತು ಸಾರ್ವಜನಿಕ ಸಂಬಂಧಗಳು, ಗ್ರಾಮೀಣ ಸಂವಹನ, ಮತ್ತು ಸಂವಹನ ಸಂಶೋಧನೆ ಯನ್ನು ಸ್ಥಾಪಿಸುವ ಪರಿಕಲ್ಪನೆಯೊಂದಿಗೆ ಈ ಆರು ಸ್ವತಂತ್ರ ವಿಶೇಷ ಶಾಖೆಗಳನ್ನು ವಿಸ್ತರಿಸಲು ಆರು ಪೋಸ್ಟ್ ಗಳ ರೀಡರ್‍ ಗಳನ್ನು ಯು.ಜಿ.ಸಿ ಮಂಜೂರು ಮಾಡಿ ಈ ವಿಭಾಗವನ್ನು ಪ್ರೋತ್ಸಾಹಿಸಿತು.

ಅಧ್ಯಕ್ಷರು  ಡಾ.ಬಿ.ಕೆ. ರವಿ   

ಅಧಿಕಾರಾವಧಿ:  28.09.2020 ರಿಂದ27.09.2022

ನಮ್ಮನ್ನು ಸಂಪರ್ಕಿಸಿ:

 ಸಂವಹನ ವಿಭಾಗ
ಹಳೆ ಪರೀಕ್ಷಾ ಭವನ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 056
ದೂ : 080 – 22961986

 

ಅ. ಲಭ್ಯವಿರುವ ಕೋರ್ಸ್ ಗಳು
1. ಪತ್ರಿಕೋದ್ಯಮ ಮತ್ತು ಸಂವಹನದಲ್ಲಿ ಎಂ ಎ.
2.  ಸಾರ್ವಜನಿಕ ಸಂಪರ್ಕ ಮತ್ತು ಜಾಹೀರಾತು
3.   ಮಾಧ್ಯಮ ಅಧ್ಯಯನದಲ್ಲಿ ಎಂ.ಎ.

ಆ. ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ - 4 ಸೆಮಿಸ್ಟರ್ ಗಳು ( 2 ವರ್ಷಗಳು)

ಈ. ಲಭ್ಯವಿರುವ ಸೀಟುಗಳು - 45 + ಅಧಿಕ ಶುಲ್ಕ – 06

ಈ ವಿಭಾಗವು  ಕನಿಷ್ಠ 45 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿರುತ್ತದೆ. ಅದರಲ್ಲಿ  34 ಸೀಟುಗಳನ್ನು  ಪತ್ರಿಕೋದ್ಯಮ ದಲ್ಲಿ ಪದವಿಗಳಿಸಿದವರಿಗೆ ಮತ್ತು  10 ಸೀಟುಗಳನ್ನು ಉಳಿದ ಪದವೀಧರರಿಗೆ ಕಾಯ್ದಿರಿಸಲಾಗುವುದು.

ಉ. ಅರ್ಹತೆ:

1. ಪತ್ರಿಕೋದ್ಯಮ ಮತ್ತು ಸಂವಹನದಲ್ಲಿ ಎಂ ಎ.

ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ: ಅಭ್ಯರ್ಥಿಯು ಪದವೀಧರರಾಗಿದ್ದು, ಐಚ್ಛಿಕ ವಿಷಯಗಳಲ್ಲಿ 50% ಅಂಕಗಳನ್ನು ಪಡೆದವರಾಗಿದ್ದು ಪದವಿಯಲ್ಲಿ ಪತ್ರಿಕೋದ್ಯಮವನ್ನು ಐಚ್ಛಿಕ ವಿಷಯವಾಗಿ ತೆಗೆದು ಕೊಂಡಿರಬೇಕು.
ಪತ್ರಿಕೋದ್ಯಮ ಓದಿಲ್ಲದ ಅಭ್ಯರ್ಥಿಗಳು: ಬೆಂಗಳೂರು ವಿಶ್ವವಿದ್ಯಾಲಯದಿಂದ ಅಥವಾ ಯಾವುದೇ ಮಾನ್ಯತೆ ಗಳಿಸಿರುವ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಎಲ್ಲಾ ವಿಷಯಗಳಲ್ಲಿ ಗಳಿಸಿರುವವರು ಅರ್ಹರಾಗಿರುತ್ತಾರೆ

2.  ಸಾರ್ವಜನಿಕ ಸಂಪರ್ಕ ಮತ್ತು ಜಾಹೀರಾತು

ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ: ಅಭ್ಯರ್ಥಿಯು ಪದವೀಧರರಾಗಿದ್ದು, ಐಚ್ಛಿಕ ವಿಷಯಗಳಲ್ಲಿ 50% ಅಂಕಗಳನ್ನು ಪಡೆದವರಾಗಿದ್ದು ಪದವಿಯಲ್ಲಿ ಪತ್ರಿಕೋದ್ಯಮವನ್ನು ಐಚ್ಛಿಕ ವಿಷಯವಾಗಿ ತೆಗೆದು ಕೊಂಡಿರಬೇಕು.
ಪತ್ರಿಕೋದ್ಯಮ ಓದಿಲ್ಲದ ಅಭ್ಯರ್ಥಿಗಳು: ಬೆಂಗಳೂರು ವಿಶ್ವವಿದ್ಯಾಲಯದಿಂದ ಅಥವಾ ಯಾವುದೇ ಮಾನ್ಯತೆ ಗಳಿಸಿರುವ ವಿಶ್ವವಿದ್ಯಾಲಯದಿಂದ ಪದವಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಎಲ್ಲಾ ವಿಷಯಗಳಲ್ಲಿ ಗಳಿಸಿರುವವರು ಅರ್ಹರಾಗಿರುತ್ತಾರೆ

3.   ಮಾಧ್ಯಮ ಅಧ್ಯಯನದಲ್ಲಿ ಎಂ.ಎ.

ಅಭ್ಯರ್ಥಿಯು ಬೆಂಗಳೂರು ವಿಶ್ವವಿದ್ಯಾಲಯ ಅಥವ ಬೇರೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು ಒಟ್ಟು ಶೇ. 50 ಅಂಕ ಗಳಿಸಿರಬೇಕು

 

 

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಸ್ವವಿವರ
1ಡಾ.ಬಿ.ಕೆ. ರವಿಎಂ.ಎ., ಎಂ ಎಸ್ ಕಮ್ಯುನಿಕೇಷನ್., ಪಿಹೆಚ್.ಡಿಪ್ರಾಧ್ಯಾಪಕರುಮುದ್ರಣ ಮಾಧ್ಯಮ, ಅಂತರರಾಷ್ಟ್ರೀಯ ಸಂವಹನ, ರಾಜಕೀಯ ಸಂವಹನ, ಚಲನಚಿತ್ರ ಅಧ್ಯಯನ, ವಿದ್ಯುನ್ಮಾನ ಮಾಧ್ಯಮ, ಅಭಿವೃದ್ಧಿ ಸಂವಹನ

ವೀಕ್ಷಿಸಿ

2ಡಾ. ಬಿ. ಶೈಲಶ್ರೀಎಂ ಎಸ್ ಕಮ್ಯುನಿಕೇಷನ್., ಎಂ.ಫಿಲ್., ಪಿಹೆಚ್.ಡಿಸಹಾಯಕ ಪ್ರಾಧ್ಯಾಪಕರುಸಂವಹನ ಸಿದ್ಧಾಂತಗಳು, ಪರಿಸರ ಸಂವಹನ, ಮಾಧ್ಯಮ ಕಾನೂನುಗಳು, ತಾಂತ್ರಿಕ ಬರವಣಿಗೆ, ಪತ್ರಿಕಾ ಉತ್ಪಾದನೆವೀಕ್ಷಿಸಿ
3ಡಾ. ಎನ್. ಸಂಜೀವ ರಾಜಎಂ ಎಸ್ ಕಮ್ಯುನಿಕೇಷನ್., ಪಿಹೆಚ್.ಡಿಸಹ ಪ್ರಾಧ್ಯಾಪಕರುವರದಿ ಮಾಡುವಿಕೆ, ತಾಂತ್ರಿಕ ಬರವಣಿಗೆ, ಕನ್ನಡ ಪ್ರೆಸ್, ಪತ್ರಿಕಾ ಬರವಣಿಗೆ ವೀಕ್ಷಿಸಿ