Botany Dept

ವಿಭಾಗದ ಇತಿಹಾಸ

1919 ರಲ್ಲಿ ಸ್ಥಾಪಿತವಾದ  ಬೆಂಗಳೂರಿನ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗವು ಒಂದು ಹಳೆಯ ವಿಭಾಗವಾಗಿದೆ. ಮೈಸೂರು ವಿಶ್ವವಿದ್ಯಾಲಯದ ಒಂದು ಭಾಗವಾಗಿ ಸೆಂಟ್ರಲ್ ಕಾಲೇಜು ಆವರಣದಲ್ಲಿ ಪ್ರೊ.ಎಂ.ಎ. ಸಂಪತ್ ಕುಮಾರನ್ ವಿಭಾಗದ ಮುಖ್ಯಸ್ಥರಾಗಿ ಸ್ಥಾಪಿಸಲ್ಪಟ್ಟಿತು. 1964 ರಲ್ಲಿ ಬೆಂಗಳುರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದಾಗ ಸೆಂಟ್ರಲ್ ಕಾಲೇಜು ವಿಶ್ವವಿದ್ಯಾಲಯದ ಕಾಲೇಜು ಆಯಿತು ಮತ್ತು ಪ್ರೊ.ಎಂ.ನಾಗರಾಜ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮೊದಲ ಮುಖ್ಯಸ್ಥರಾದರು.   ಡಾ. ಎಂ.ಜೆ ತಿರುನಾಳಚೆಲ್ ಮತ್ತು ಡಾ. ಕೆ.ಎಸ್.ಗೋಪಾಲ ಕೃಷ್ಣ ರವರು ಆಂಟೀಯೋರ್ಟಿಕ್ ಟೆಕ್ನೋಲಜಿ, ಡಾ. ಎ.ಆರ್. ಗೋಪಾಲ್ ಅಯ್ಯಂಗಾರ್ ರವರು ರೇಡಿಯೇಷನ್ ಬಯೋಲಜಿ, ಡಾ. ಟಿ.ಎನ್ ರಾಮಚಂದ್ರರಾಂ, ರವರು ಫೆರ್ಮೆಂಟೇಷನ್ ಟೆಕ್ನೋಲಜಿ, ಪ್ರೊ.ಕೌಶಿಕ್, ಪ್ರೊ. ಸಿ.ವಿ. ಸುಬ್ರಮಣ್ಯಂ, ಪ್ರೊ. ನಾಗರಾಜ್ ಮತ್ತು ಪ್ರೊ. ಡಿ.ಎ. ಗೋವಿಂದಪ್ಪ ರವರುಗಳು ಮೋರ್ಫೋಲಜಿ ಗಳಂತಹ ವಿಷಯಗಳಲ್ಲಿ ವಿಭಾಗವು ಹಲವು ಅಗ್ರಮಾನ್ಯರನ್ನು ಸೃಷ್ಟಿಸಿದೆ.  ಇದಲ್ಲದೇ ಹಿಂದಿನ ಮತ್ತು ಪ್ರಸ್ತುತ ಶಿಕ್ಷಕರು ಮತ್ತು ಈ ವಿಭಾಗದ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇಶದಲ್ಲಿ ಮತ್ತು ಹೊರಗೆ ಎರಡೂ ಪ್ರದೇಶಗಳಲ್ಲಿ ತಮ್ಮ ಪ್ರಯತ್ನದ ವಿಶಿಷ್ಠ ಗುರುತನ್ನು ಮಾಡಿದ್ದಾರೆ. ಅಸ್ತಿತ್ವವಾದ ಅದರ ಒಂಭತ್ತು ದಶಕಗಳ ಅವಧಿಯಲ್ಲಿ ವಿಭಾಗವು ಉನ್ನತ ಗುಣಮಟ್ಟದ ಬೊಟಾನಿಕಲ್ ಶಿಕ್ಷಣವನ್ನು ಆಮದು ಮಾಡಿಕೊಳ್ಳಲು ಬದ್ದವಾಗಿದೆ. ಮತ್ತು ಸಂಶೋಧನೆಗೆ ಪರಿಣಾಮಕಾರಿ ಪ್ರಭಾವ ಬೀರಿದೆ. ಪ್ರಸ್ತುತ, ಈ ವಿಭಾಗವು ಜ್ಞಾನಭಾರತಿ ಆವರಣ್ದಲ್ಲಿ ಸೂಕ್ತವಾದ ತರಗತಿ ಕೊಠಡಿಗಳು, ಸಿಬ್ಬಂದಿ ಕೊಠಡಿಗಳು,ಸಂಶೋಧನಾ ಪ್ರಯೋಗಾಲಯಗಳು, ಮ್ಯೂಸಿಯಂ, ಆಡಿಟೋರಿಯಂ ಮತ್ತು ಲೈಬ್ರರಿಯನ್ನು ಹೊಂದಿದೆ. ವಿಭಾಗದ ಸಂಶೋಧನಾ ಚಟುವಟಿಕೆಗಳನ್ನು ಗುರುತಿಸಿ UGC, CSIR,DBT,DST,FIST SAP,Non-SAP & MoEF ಮತ್ತು ಖಾಸಗಿ ವಲಯಗಳಂತಹ ವಿವಿಧ ಸಂಸ್ಥೆಗಳು ಅಡ್ವಾನ್ಸ್ಡ್ ಸಂಶೋಧನಾ ಚಟುವಟಿಕೆಗಳನ್ನು ವಿಭಾಗದ ಬೋಧಕ ಸಿಬ್ಬಂದಿಗಳಿಗೆ ಹಣಕಾಸಿನ ನೆರವನ್ನು ಒದಗಿಸುತ್ತಿದೆ. 

ಸಸ್ಯಶಾಸ್ತ್ರ  ಅಧ್ಯಕ್ಷರು  :  ಡಾ. ಸಿ. ಮಾಯ

ಅಧಿಕಾರಾವಧಿ: 29.07.2021  ರಿಂದ 28.07.2023 ವರೆಗೆ

ಅಣು ಜೀವವಿಜ್ಞಾನ (ಸಂಯೋಜಕರು):ಡಾ. ಸಿ. ಮಾಯ

ಅಧಿಕಾರಾವಧಿ05.07.2019 ರಿಂದ ಮುಂದಿನ ಆದೇಶದವರೆಗೆ

 

ನಮ್ಮನ್ನು ಸಂಪರ್ಕಿಸಿ

ಸಸ್ಯಶಾಸ್ತ್ರ ವಿಭಾಗ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು - 560056


ದೂ: 080 22962311

ಇಮೇಲ್ :  botany@bub.ernet.in

ಅ. ಒದಗಿಸಲಾದ ಕೋರ್ಸುಗಳುಅ) ಸಸ್ಯಶಾಸ್ತ್ರ ಎಂ.ಎಸ್ಸಿ 

                                          ಆ) ಅಣು ಜೀವವಿಜ್ಞಾನ ಎಂ.ಎಸ್ಸಿ

ಆ. ಕೋರ್ಸಿನ ಸ್ವರೂಪ  -  ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ - 4 ಸೆಮಿಸ್ಟರ್  (2 ವರ್ಷ)

ಈ. ತೆಗೆದುಕೊಳ್ಳುವ ಸೀಟುಗಳುಅ) 42   ಆ) 22

ಉ. ಅರ್ಹತೆ:

ಅ. ಸಸ್ಯಶಾಸ್ತ್ರ ಎಂ.ಎಸ್ಸಿ ಗೆ ಅರ್ಹತೆ : ಪದವಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಶೇ. 40% ರಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು  50% ರಷ್ಟು ಅಂಕಗಳನ್ನು ಸಸ್ಯಶಾಸ್ತ್ರ / ಅನ್ವಯಿಕ ಸಸ್ಯಶಾಸ್ತ್ರ (ಸಂಬಂಧಪಟ್ಟ ವಿಷಯ) ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಗಳಿಸಿರುವವರು ಅರ್ಹರು.

ಆ. ಎಂ.ಎಸ್ಸಿ ಅಣು ಜೀವವಿಜ್ಞಾನಕ್ಕಾಗಿ ಅರ್ಹತೆ:  ಪದವೀದರರಾಗಿದ್ದು 50% ರಷ್ಟು ಅಂಕಗಳನ್ನು ಎಲ್ಲಾ ವಿಷಯಗಳಲ್ಲಿ ಗಳಿಸಿ ಜೊತೆಗೆ ಕಡ್ಡಾಯವಾಗಿ ರಸಾಯನಶಾಸ್ತ್ರ / ಜೀವರಸಾಯನಶಾಸ್ತ್ರ ಮತ್ತು ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರ / ಜೀವರಸಾಯನಶಾಸ್ತ್ರ/ ಜೀವತಂತ್ರಜ್ಞಾನ/ ಸೂಕ್ಷ್ಮಾಣು ಜೀವಶಾಸ್ತ್ರ / ಅನ್ವಯಿಕ ಜೈವಿಕ ಶಾಸ್ತ್ರ/ ಅನ್ವಯಿಕ ಸಸ್ಯಶಾಸ್ತ್ರ / ಅನ್ವಯಿಕ   ಪ್ರಾಣಿಶಾಸ್ತ್ರ/ ರೇಷ್ಮೇವಿಭಾಗ ಮತ್ತು ಇತರ ಜೀವ ವಿಜ್ಞಾನದ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಒಂದು ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರಬೇಕು.

ಕ್ರ.ಸಂಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ. ಎಲ್.ರಾಜಣ್ಣಎಂ. ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಎಂಬ್ರಿಯೋಲೊಜಿ, ಪ್ಲಾಂಟ್ ಮೋರ್ಫೋಜೆನೆಸಿಸ್, ಪ್ಲಾಂಟ್ ಟಿಶ್ಶೂ ಕಲ್ಚರ್, ಹಿಸ್ಟೋಕೆಮಿಸ್ಟ್ರಿ ಅಂಡ್ ಬಯೋಟೆಕ್ನೋಲಜಿಪ್ರೊಫೈಲ್
2ಡಾ.ವಿ.ಶಿವರಾಂಎಂ. ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಅಪೀಕಲ್ಚರ್, ಪೊಲೀನೇಷನ್ ಇಕೋಲೊಜಿ ಅಂಡ್ ಕನ್ಸರ್ವೇಷನ್ ಬಯೋಲಜಿಪ್ರೊಫೈಲ್
3ಡಾ. ಟಿ.ಜಿ.ಉಮೇಶ್ಎಂ. ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಸೈಟೋಜೆನೆಟಿಕ್ಸ್ಪ್ರೊಫೈಲ್
4ಡಾ.ಸಿ. ಮಾಯಎಂ. ಎಸ್ಸಿ., ಪಿಹೆಚ್.ಡಿಸಹ ಪ್ರಾಧ್ಯಾಪಕರುಮೈಕ್ರೋಬಯೋಲಜಿ, ಪ್ಲಾಂಟ್ ಪ್ಯಾಥೋಲಜಿ, ಇಕೋಲಜಿ ಅಂಡ್ ಎನ್ವಿರಾನ್ಮೆಂಟಲ್ ಬಯೋಲಜಿಪ್ರೊಫೈಲ್
5ಡಾ. ಹೆಚ್.ಆರ್. ರವೀಶಎಂ. ಎಸ್ಸಿ., ಪಿಹೆಚ್.ಡಿಪ್ರಾಧ್ಯಾಪಕರುಪ್ಲಾಂಟ್ ಟಿಶ್ಶೂ ಕಲ್ಚರ್ಪ್ರೊಫೈಲ್
      

ಸಂಶೋಧನಾ ಯೋಜನೆಗಳು ಮತ್ತು ಚಟುವಟಿಕೆಗಳು

  1. ವಿಭಾಗವು 2009 ರಿಂದ 20 ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದೆ. UGC, DST, DBT, MoEF ಮತ್ತು ಬೆಂಗಳೂರು ವಿಶ್ವವಿದ್ಯಾಲಯವು ಹಣಕಾಸಿನ ನೆರವನ್ನು ಒದಗಿಸಿವೆ.
  2. ಪಿಹೆಚ್.ಡಿ – 187 ಮತ್ತು 140- ಎಂ.ಫಿಲ್ ಡಿಗ್ರಿಗಳನ್ನು ನೀಡಲಾಗಿದೆ.
  3. 2009 ರಲ್ಲಿ UGC Non SAP ಕಾರ್ಯಕ್ರಮದಡಿಯಲ್ಲಿ ಮೂರ್ ಫೆಲೋಶಿಪ್ ಮತ್ತು UGC -SAP ಕಾರ್ಯಕ್ರಮದಡಿಯಲ್ಲಿ ಎರಡು ಸಂಶೋಧನಾ ಫೆಲೋಶಿಪ್ ಗಳನ್ನು ಮಂಜೂರು ಮಾಡಲಾಗಿದೆ
  4. ಉಪನ್ಯಾಸ ಟಿಪ್ಪಣಿಗಳು, PPT, OHP ಮತ್ತು ತರಗತಿ ಟಿಪ್ಪಣಿಗಳು ಮತ್ತು ಪುಸ್ತಕಗಳು ವಿಭಾಗದಲ್ಲಿ ಲಭ್ಯವಿದೆ