Sanskrit

ವಿಭಾಗದ ಬಗ್ಗೆ ಸಂಕ್ಷಿಪ್ತ ವಿವರ

1964ರಲ್ಲಿ ಸೆಂಟ್ರಲ್ ಕಾಲೇಜಿನ ಪರಿಸರದಲ್ಲಿ ಪ್ರಾರಂಭವಾದ ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕತ ಸ್ನಾತಕೋತ್ತರ ಕೇಂದ್ರವು 1968ರಲ್ಲಿ ಕೆ.ಟಿ. ಪಾಂಡುರಂಗಿಯವರ ಅಧ್ಯಕ್ಷತೆಯಲ್ಲಿ ಸ್ನಾತಕೋತ್ತರ ಸಂಸ್ಕೃತ ವಿಭಾಗವಾಗಿ ಮಾರ್ಪಟ್ಟಿತು. ಆಗ ಅಧ್ಯಕ್ಷರಾದ ಕೆ.ಟಿ. ಪಾಂಡುರಂಗಿಯವರು ನಿಯಮಿತ ಉಪನ್ಯಾಸಕರಾದ      ಎಂ.ಎ. ಕೃಷ್ಣಸ್ವಾಮಿಯವರೊಂದಿಗೆ ಹಾಗೂ ಕೆಲವು ಅತಿಥಿ ಉಪನ್ಯಾಸಕರ ಸಹಕಾರದೊಂದಿಗೆ ಅಧ್ಯಾಪನಾದಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. 1970ರಲ್ಲಿ ಶ್ರೀ ಎಂ. ಶಿವಕುಮಾರ ಸ್ವಾಮಿ ಮತ್ತು ಶ್ರೀ ಎಂ.ಎ. ಲಕ್ಷೀತಾತಾಚಾರ್ ಇವರಿಬ್ಬರು ನಿಯಮಿತ ಉಪನ್ಯಾಸಕರಾಗಿ ಇವರನ್ನು ಕೂಡಿಕೊಂಡರು. ಸಂಸ್ಕೃತ ಸ್ನಾತಕೋತ್ತರ ವಿಭಾಗವು ನಂತರ ಬೇರೆ ಭಾಷಾ ವಿಭಾಗಗಳೊಂದಿಗೆ ಹೊಸದಾಗಿ ನಿರ್ಮಿತವಾದ ಜ್ಞಾನಭಾರತಿ ಪರಿಸರಕ್ಕೆ ವರ್ಗಾಯಿಸಲ್ಪಟ್ಟಿತು. 1975ರಲ್ಲಿ ಪ್ರಹ್ಲಾದಾಚಾರ್‍ರವರು ಮತ್ತು ಮೀರಾಚಕ್ರವರ್ತಿಯವರು ನಿಯಮಿತ ಉಪನ್ಯಾಸಕರಾಗಿ ಈ ವಿಭಾಗಕ್ಕೆ ಸೇರ್ಪಡೆಗೊಂಡರು. ಅದೇ ವರ್ಷ ಸಂಶೋಧನಾ ವಿದ್ಯಾರ್ಥಿನಿ ಬಿ.ಜಿ ಶ್ರೀಲಕ್ಷ್ಮಿಯವರು ಉಪನ್ಯಾಸಕರಾಗಿ ಬಡ್ತಿ ಪಡೆದರು. 1979ರಲ್ಲಿ ಕೆ.ಟಿ. ಪಾಂಡುರಂಗಿಯವರು ನಿವೃತ್ತರಾದ ನಂತರ     ಡಾ.ಎಂ. ಶಿವಕುಮಾರ ಸ್ವಾಮಿಗಳು ಪ್ರಾಧ್ಯಾಪಕರಾಗಿ ವಿಭಾಗದ ಅಧ್ಯಕ್ಷತೆಯನ್ನು ವಹಿಸಿಕೊಂಡರು. 1980ರಲ್ಲಿ ಶೀಮತಿ. ಎಂ.ಎಸ್. ಭವಾನಿ ಮತ್ತು ಶ್ರೀ. ಸುಜ್ಞಾನಮೂರ್ತಿಯವರು ನಿಯಮಿತ ಉಪನ್ಯಾಸಕರಾಗಿ ಈ ವಿಭಾಗಕ್ಕೆ ಸೇರಿಕೊಂಡರು. 1982ರಲ್ಲಿ ಪ್ರಹ್ಲಾದಾಚಾರ್‍ರವರು ರೀಡರ್ ಆಗಿ ಆಯ್ಕೆಯಾದರು. 1994ರಲ್ಲಿ ಸಿ. ಶಿವರಾಜುರವರು ನಿಯಮಿತ ಉಪನ್ಯಾಸಕರಾಗಿ ಆಯ್ಕೆಯಾದರು. ನಂತರ ವಿದ್ವಾನ್. ಯು.ರಾಧಾಕೃಷ್ಣರವರು 1996ರಲ್ಲಿ ನಿಯಮಿತ ಉಪನ್ಯಾಸಕರಾಗಿ ಸೇರಿಕೊಂಡರು. 1998ರಲ್ಲಿ ಶ್ರೀ. ಶಿವಕುಮಾರ ಸ್ವಾಮಿಗಳು ನಿವೃತ್ತಿಹೊಂದಿ ಪ್ರಹ್ಲಾದಾಚಾರ್ ವಿಭಾಗಾಧ್ಯಕ್ಷರಾಗಿ ಆಯ್ಕೆಯಾದರು. ಪ್ರಹ್ಲಾದಾಚಾರ್‍ರವರು ಕೇಂದ್ರೀಯ ಸಂಸ್ಕøತ ವಿದ್ಯಾಪೀಠ, ತಿರುಪತಿಯಲ್ಲಿ, ಉಪಕುಲಪತಿ ಆದನಂತರ ಡಾ.ಮೀರಾಚಕ್ರವರ್ತಿ ವಿಭಾಗಾಧ್ಯಕ್ಷರಾದರು. ಪ್ರತಿ ಎರಡು ವರ್ಷಕ್ಕೆ ವಿಭಾಗಾಧ್ಯಕ್ಷ ಪಟ್ಟವು ಮೀರಾಚಕ್ರವರ್ತಿ ಮತ್ತು ಭವಾನಿ ಎಂ.ಎಸ್ ರವರ ಮಧ್ಯೆ ಹಸ್ತಾಂತರವಾಗುತ್ತಿತ್ತು. 2009ರಲ್ಲಿ ಮೀರಾಚಕ್ರವರ್ತಿ ಮತ್ತು ಬಿ.ಜಿ. ಶ್ರೀಲಕ್ಷಿಯವರು ನಿವೃತ್ತರಾದರು. ನಂತರ ಭವಾನಿ. ಎಂ.ಎಸ್. ಮತ್ತು ಸಿ.ಶಿವರಾಜುರವರ ನಡುವೆ ವಿಭಾಗಾಧ್ಯಕ್ಷ ಪಟ್ಟವು ಹಸ್ತಾಂತರವಾಗುತ್ತಿತ್ತು. 2012 ಡಿಸೆಂಬರ್ ಭವಾನಿ ಎಂ.ಎಸ್. ರವರು ನಿವೃತ್ತರಾದ ನಂತರ ಸಿ. ಶಿವರಾಜುರವರು ವಿಭಾಗಾಧ್ಯಕ್ಷರಾದರು. ಈಗ ಅವರು ಮೌಲ್ಯಮಾಪನ ಕುಲಸಚಿವರಾಗಿ ಆಯ್ಕೆ ಆದನಂತರ ಯು. ರಾಧಾಕೃಷ್ಣರವರು ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಂಯೋಜಕರು:   ಡಾ.ಸಿ. ಶಿವರಾಜು

ಅವಧಿ13.08.2020 ರಿಂದ 12.08.2022

ಸಂಪರ್ಕಿಸಿ

ಸಂಸ್ಕೃತ ವಿಭಾಗ
ಸಮಾಜ ವಿಜ್ಞಾನ ಕಟ್ಟಡ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು - 560056

ದೂರವಾಣಿ : 080 22961751

ಲಭ್ಯವಿರುವ ಕೋರ್ಸ್:    ಸಂಸ್ಕೃತ ಎಂ.ಎ

ಕೋರ್ಸಿನ ಸ್ವರೂಪ - ಸೆಮಿಸ್ಟರ್

ಅವಧಿ -   ನಾಲ್ಕು ಸೆಮಿಸ್ಟರ್ (ಎರಡು ವರ್ಷಗಳು)

ಲಭ್ಯವಿರುವ ಸೀಟುಗಳು-

a) Regular: 20(BU); 02(Autonomous) ;02 (HK); 01 (OUK); 01(OUOK)
b) Payment : 06 (BU); 01 (Autonomous); 01 (HK)

ಅರ್ಹತೆ:

ವಿದ್ಯಾರ್ಥಿಯು ಪದವಿಯಲ್ಲಿ ಒಟ್ಟು 40% ಅಂಕವನ್ನು ಪಡೆದಿದ್ದು ಪದವಿ ಸ್ತರದಲ್ಲಿ ಐಚ್ಛಿಕ ವಿಷಯ ಸಂಸ್ಕøತದಲ್ಲಿ 50% ಪ್ರತಿಶತ ಅಂಕಗಳನ್ನು ಪಡೆದಿರಬೇಕು. ಅಥವಾ ಭಾಷಾ ಸಂಸ್ಕೃತ ದಲ್ಲಿ ಪ್ರತಿಶತ 55% ಅಂಕಗಳನ್ನು ಪಡೆದಿರಬೇಕು. ಅಥವಾ ಯಾವುದೇ ಪದವಿಯೊಂದಿಗೆ ಸಂಸ್ಕೃತ ಸಾಹಿತ್ಯ ಅಥವಾ ಒಂದು ವರ್ಷ ಅವಧಿಯ ಸಂಸ್ಕೃತ ಡಿಪ್ಲೊಮಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಬೇಕು, ಅಥವಾ ಸಂಸ್ಕೃತ ವಿದ್ವತ್ ಮಧ್ಯಮ ಉತ್ತೀರ್ಣರಾಗಿರಬೇಕು.

 

ಕ್ರ ಸಂ.ಹೆಸರುವಿದ್ಯಾರ್ಹತೆಪದನಾಮವಿಶೇಷ ಪರಿಣಿತಿಸ್ವವಿವರ
1ಡಾ. ಸಿ. ಶಿವರಾಜುಎಂ.ಎ, ಎಂ.ಫಿಲ್ ಪಿ ಹೆಚ್ ಡಿಪ್ರಾಧ್ಯಾಪಕರುಅರ್ಥಶಾಸ್ತ್ರ ವೀಕ್ಷಿಸಿ
2ಡಾ. ಯು. ರಾಧಾಕೃಷ್ಣಎಂ.ಎ, ಎಂ.ಫಿಲ್ ಪಿ ಹೆಚ್ ಡಿಸಹಾಯಕ ಪ್ರಾಧ್ಯಾಪಕರು
ನ್ಯಾಯ ವೇದಾಂತ ಅಲಂಕಾರಶಾಸ್ತ್ರವೀಕ್ಷಿಸಿ

ಪ್ರಾಜೆಕ್ಟ್ ಹೆಸರು:

ಕ್ರ ಸಂ ಪ್ರಾಜೆಕ್ಟ್ ಹೆಸರು Sponsored 
1ಧರ್ಮ ಮತ್ತು ದಂಡನೀತಿ BUIRF (ಬೆಂಗಳೂರು ವಿಶ್ವವಿದ್ಯಾಲಯ) 


 

ಆಯೋಜಿಸಿದ ಸೆಮಿನಾರ್ / ಕಾನ್ಫರೆನ್ಸ್ / ವರ್ಕ್ ಶಾಪ್:

 

ಕ್ರ ಸಂ

 

ದಿನಾಂಕ

 

ವಿಷಯ

 

ಇತರ ಮಾಹಿತಿ

 

1

 

 

01 ನವೆಂಬರ್-2015

 

 

ಮಹಾಭಾರತದಲ್ಲಿನ ಸಾಮಾಜಿಕ ರಾಜಕೀಯ ವಿಚಾರ – ಇಂದಿಗೂ ಅದರ ಪ್ರಸ್ತುತತೆ 

 

 

ಸಂಘಟನಾ ಕಾರ್ಯದರ್ಶಿ

 

 

2

 

 

ಮಾರ್ಚ್ -2014

 

 

ಎರಡು ದಿನದ ರಾಷ್ಟ್ರೀಯವಿಚಾರ ಸಂಕೀರ್ಣ, ಭಾಸನ ನಾಟಕಗಳು, ಬಸವೇಶ್ವರ ಕಾಲೇಜಿನ ಸಹಯೋಗದೊಂದಿಗೆ