ವಿಭಾಗದ ಇತಿಹಾಸ

">ವಿಭಾಗವು 1973 ರಲ್ಲಿ ಸ್ಥಾಪಿಸಲ್ಪಟ್ಟಿತು. ಮತ್ತು ಅಂದಿನಿಂದ ತಾನೇ ಸ್ವತಃ ಉನ್ನತ ಮಟ್ಟದ ಮಾನದಂಡಗಳನ್ನು ಹೊಂದಿಸಿದೆ.ಮೊದಲ ಅಧ್ಯಕ್ಷರಾದ – ಪ್ರೊ.ಕೆ.ಹೆಚ್. ಚೆಲುವರಾಜು – ವಿಭಾಗದ ಅಡಿಪಾಯವನ್ನು ಹಾಕಿದರು ಮತ್ತು ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದರು. ವಿಭಾಗದ ಬೆಳವಣಿಗೆಗೆ ಯಶಸ್ವಿ ಅಧ್ಯಕ್ಷರ ಜೊತೆಗೆ ಬೋಧನಾ ವಿಭಾಗದ ಸದಸ್ಯರು ಸಹ ಕೊಡುಗೆ ನೀಡಿದ್ದಾರೆ.ಅದರ ಪ್ರಾರಂಭದಿಂದಲೂ ಯಾವಾಗಲೂ ಮೀಸಲಿಟ್ಟ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳನ್ನು ಹೊಂದಿದ್ದು ಇದು ಇದರ ಬೆಳವಣಿಗೆಗೆ ಪ್ರಮುಖ ಅಂಶವಾಗಿದೆ.ವಿಭಾಗವು ಸಂಶೋಧನೆ ಮತ್ತು ’ನವೀನ ಬೋಧನಾ ವಿಧಾನಗಳನ್ನು ಅಭಿವೃದ್ಧಿ ಪಡಿಸುವುದನ್ನು ಉತ್ತೇಜಿಸಲು ಅನುಕೂಲಕರವಾದ ವಾತಾವರಣವನ್ನು ಸೃಷ್ಠಿಸಿದೆ.ವಿಭಾಗವು ಹಲವಾರು ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸೆಮಿನಾರ್ ಗಳು, ಸಮಾವೇಶಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಿದೆ.ವಿಭಾಗವು ಪ್ರತಿವರ್ಷ ಕೆಂಗಲ್ ಹನುಮಂತಯ್ಯ ಪ್ರತಿಭಾ ಉಪನ್ಯಾಸ, ಜನ್ಮ ಭೂಮಿ ಟ್ರಸ್ಟ್ ಉಪನ್ಯಾಸ, ಎಸ್ ನಿಜಲಿಂಗಪ್ಪ ಪ್ರತಿಭಾ ಉಪನ್ಯಾಸ ಮತ್ತು ಮಾಧವರಾಂ ಪ್ರತಿಭಾ ಉಪನ್ಯಾಸ ಎಂಬ ನಾಲ್ಕು ಪ್ರತಿಭಾ ಉಪನ್ಯಾಸಗಳನ್ನು ಆಯೋಜಿಸುತ್ತದೆ.ವಿಭಾಗವು ಸಾಮಾಜಿಕ ವಿಜ್ಞಾನ ಚರ್ಚೆ ವೇದಿಕೆ ಯನ್ನು ಸ್ಥಾಪಿಸಿದೆ.ವಿಭಾಗವು ಯುನೈಟೆಡ್ ಸ್ಟೇಟ್ಸ್ ಇನ್ಫಾರ್ಮೇಷನ್ ಸೆಂಟರ್ (ಯು ಎಸ್ ಐ ಸಿ), ಚೆನೈ, ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಬೆಂಗಳೂರು, ಇವರುಗಳ ಜೊತೆ ಸಹಭಾಗಿತ್ವ ಕಾರ್ಯಕ್ರಮಗಳನ್ನು ಮುಂದುವರೆಸಿದೆ.ಸಮಕಾಲೀನ ಬೆಳವಣಿಗೆಗಳ ಬಗ್ಗೆ ’ರಾಜಕೀಯ ವಿಜ್ಞಾನ ಸೊಸೈಟಿ’ ಯು ಶ್ರೇಷ್ಠ ವ್ಯಕ್ತಿಗಳ ವಿಶೇಷ ಉಪನ್ಯಾಸಗಳನ್ನು ಆಯೋಜಿಸುತ್ತದೆ.ವಿಭಾಗವು ಒಂದು ಜರ್ನಲ್ ನ್ನು ಹೊರತರಲು ಉದ್ದೇಶಿಸಿದೆ.ಬೋಧನಾ ವಿಭಾಗದ ಹಲವಾರು ಸದಸ್ಯರು ಎನ್ ಜಿ.ಒ ಗಳು ಮತ್ತು ನಾಗರೀಕ ಸಮಾಜ ಸಂಸ್ಥೆಗಳೊಂದಿಗೆ ಸಕ್ರಿಯ ಸಂಪರ್ಕವನ್ನು ಹೊಂದಿದ್ದಾರೆ.

ಅಧ್ಯಕ್ಷರುಡಾ. ಎಸ್. ವೈ. ಸುರೇಂದ್ರ ಕುಮಾರ್

ಅವಧಿ: 01.04.2023 ರಿಂದ 31.03.2025   
 
ನಮ್ಮನ್ನು ಸಂಪರ್ಕಿಸಿ:
ರಾಜ್ಯಶಾಸ್ತ್ರ ವಿಭಾಗ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 056

ದೂ: 080 - 22961731

ಇಮೇಲ್ ಐಡಿ:  dpsbub2018@gmail.com

ಅ. ಲಭ್ಯವಿರುವ ಕೋರ್ಸ್ ಗಳು -  ರಾಜ್ಯಶಾಸ್ತ್ರ ದಲ್ಲಿ ಎಂ.ಎ

ಆ. ಕೋರ್ಸಿನ ಸ್ವರೂಪ - ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ -  4 ಸೆಮಿಸ್ಟರ್ ಗಳು ( 2 ವರ್ಷಗಳು)

ಈ. ಲಭ್ಯವಿರುವ ಸೀಟುಗಳು 

a) Regular  : 38(BU); 04(Autonomous) ;04 (HK); 02 (OUK); 01(OUOK)     

Payment : 08 (BU); 01 (Autonomous); 01 (HK)

ಉ. ಅರ್ಹತೆ

ಪದವಿಯ ಎಲ್ಲಾ ವಿಷಯಗಳಲ್ಲಿ ಶೇ.40% ಅಂಕಗಳು ಮತ್ತು ಸಂಬಂಧಪಟ್ಟ ಐಚ್ಛಿಕ ವಿಷಯದಲ್ಲಿ ಶೇ. 50% ಅಂಕಗಳನ್ನು ಪಡೆದಿರಬೇಕು.. ಸಾರ್ವಜನಿಕ ಆಡಳಿತವನ್ನು ಅಭ್ಯಾಸ ಮಾಡಿ ಶೇ. 50% ಅಂಕಗಳನ್ನು ಪದವಿಯಲ್ಲಿ ಗಳಿಸಿರಬೇಕು. ಐದು ವರ್ಷದ ಬಿ.ಎ.,/ಬಿ.ಎಲ್/ಎಲ್.ಎಲ್.ಬಿ ಕೋರ್ಸಿನ ಪ್ರಥಮ 3 ವರ್ಷಗಳಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ತೇರ್ಗಡೆ ಹೊಂದಿದ ಪದವೀಧರರು.
ಕ್ರ.ಸಂ. ಹೆಸರು ವಿದ್ಯಾರ್ಹತೆ ಪದನಾಮ ವಿಶೇಷ ಪರಿಣಿತಿ ಸ್ವವಿವರ
1 ಡಾ. ಎಂ.ನರಸಿಂಹಮೂರ್ತಿ ಎಂ.ಎ; ಪಿಹೆಚ್.ಡಿ  ಪ್ರಾಧ್ಯಾಪಕರು ಸಾರ್ವಜನಿಕ ಆಡಳಿತ ಮತ್ತು ಭಾರತೀಯ ಆಡಳಿತ ವೀಕ್ಷಿಸಿ
2 ಡಾ. ವೀಣಾ ದೇವಿ ಎಂ.ಎ; ಎಂ.ಫಿಲ್; ಪಿಹೆಚ್.ಡಿ ಪ್ರಾಧ್ಯಾಪಕರು ಮಹಿಳಾ ಅಧ್ಯಯನ ಮತ್ತು ಚುನಾವಣಾ ಅಧ್ಯಯನ ವೀಕ್ಷಿಸಿ
3 ಡಾ. ಎಸ್. ವೈ. ಸುರೇಂದ್ರ ಕುಮಾರ್ ಎಂ.ಎ; ಎಂ.ಫಿಲ್; ಪಿಹೆಚ್.ಡಿ ಪ್ರಾಧ್ಯಾಪಕರು ದಕ್ಷಿಣಾ ಏಷ್ಯಾ ಭದ್ರತೆ ಮತ್ತು ವಿದೇಶಿ ನೀತಿ ಅಧ್ಯಯನ ವೀಕ್ಷಿಸಿ