image00211

ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್): Unit has been very active in conducting  a variety of social service camps and activities throughout the year.   The NSS Unit has  received State  Award for its outstanding community service for the year 2013-14.  In association with SANCHALAN the NSS Unit observed “Kargil Vijay Diwas" on 27th July 2014, initiated a Bio- Diversity park and planted 257 different species of garcenia  plants in Memory of Kargil war martyrs at Jnana Bharathi campus on the occasion of 15th Anniversary of Kargil Vijay Diwas.   It also organized a National Integration Camp during September 2014.  In coordination with   Bruhat Bangalore Mahanagar Palike, Rajarajeshwari Nagar the NSS Unit organized a “Swachha BHARATH Abhiyaan - NSS camp” (Clean & Green programme)  from 2nd October  2014 to 21st October 2014.  To commemorate the Birth Anniversary of Sardar Vallabhai Patel, a “National Unity Day” was organized.  In association with the Ministry of Youth Affairs and Sports, Government of India and Nehru Yuva Kendra Sangathan a “National Integration Camp” was held during March 2015.

ಕಾರ್ಯಕ್ರಮ ಸಂಯೋಜನಾಧಿಕಾರಿ: ಡಾ. ಸತೀಶ್‍ಗೌಡ. ಎನ್.
<ಸಹಾಯಕ ಪ್ರಾಧ್ಯಾಪಕರು, ವಿಶ್ವವಿದ್ಯಾಲಯ ಕಾನೂನು ಕಾಲೇಜು

ಅಧಿಕಾರಾವಧಿ:   

ನಮ್ಮ ಸಂಪರ್ಕ:
ರಾಷ್ಟ್ರೀಯ ಸೇವಾ ಯೋಜನೆ,
ಎನ್.ಎಸ್.ಎಸ್. ಭವನ,
ಜ್ಞಾನಭಾರತಿ ಆವರಣ,
ಬೆಂಗಳೂರು-56.

ಕಚೇರಿ ದೂರವಾಣಿ : 080-23214685

ಇ-ಮೇಲ್: nssbhavanbub@gmail.com

ಕಾರ್ಯಕ್ರಮ ಸಂಯೋಜನಾಧಿಕಾರಿಗಳ ಸಂದೇಶ

ಭಾರತದ ಐ.ಟಿ. ರಾಜಧಾನಿ ಹೆಸರಾದ ಬೆಂಗಳೂರಿನಲ್ಲಿರುವ ನಮ್ಮ ವಿಶ್ವವಿದ್ಯಾಲಯವು ಜುಲೈ 1964ರಲ್ಲಿ ಕಾರ್ಯಾರಂಭ ಮಾಡಿ ಇಂದಿನವರೆಗೂ ಆವಿರತವಾಗಿ ವಿದ್ಯಾರ್ಥಿಗಳ ಮತ್ತು ಸಮಾಜದ ಏಳಿಗೆಗಾಗಿ ಅರ್ಹನಿಶಿ ಶ್ರಮಿಸುತ್ತಿದೆ. ಜ್ಞಾನ ಮತ್ತು ವಿಜ್ಞಾನಗಳ ಸಮ್ಮಿಲನ ಇಲ್ಲಿನ ಕಲಿಕೆಯ ವೈಶಿಷ್ಟತೆಯ. ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಮುಖ ಕಲಿತು ಕಲಿಸುವ ಕೇಂದ್ರವೆನಿಸಿದೆ. ಇದು ಕ್ರಮಿಸಿದ ದಾರಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಆಧರಿಸಿ ಅಂತರಾಷ್ಟ್ರೀಯ ಮತ್ತು ಅಖಿಲ ಭಾರತ ಮಟ್ಟದಲ್ಲಿ ಬಹುಶಿಸ್ತೀಯ ವಿಶ್ವವಿದ್ಯಾಲಯವೆಂದು ಹೆಸರಾಗಿದೆ.

ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾಜದ ಆಸ್ತಿಂiÀiನ್ನಾಗಿ ರೂಪಿಸುವ ಹೊಣೆ ನಮ್ಮ ಮೇಲಿದೆ. ಆ ನಿಮಿತ್ತ ಕಲಿಕೆಯ ಜೊತೆ ಅವರಿಗೆ ಸಮಾಜದ ನಡುವೆ ಬದುಕಿ ಬಾಳುವ ಕಲೆ ಮೈಗೂಡಿಸಿಕೊಳ್ಳಲು ವೇದಿಕೆ ಸೃಷ್ಟಿಸಿ ಕೊಡುವ ಸದಾಶಯ ನಮ್ಮದು. ಆ ಸಮುದಾಯದ ನಡುವೆ ಅವರು ಮಿಳಿತವಾಗಿ ತಮ್ಮ ಬದುಕಿನಲಿ ಸೃಜನೆ, ಸುಸ್ಥಿರತೆ ಹಾಗೂ ವಿಮುಕ್ತತೆಗೆ ತೆರೆದುಕೊಳ್ಳಬೇಕು. ಹಾಗೆ ಅವರು ಸಮಾಜಮುಖಿಯಗಿ ಸಾಮಾಜಿಕ ಅಭಿವೃದ್ಧಿಗೆ ಕಾರಣರಾಗಬೇಕೆನ್ನುವ ಸದಾಶಯ ನಮ್ಮದು. ತನ್ನಿಮಿತ್ತ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಕೇಂದ್ರವನ್ನು ಪ್ರತಿ ಸಂಯೋಜಿತ ಮಹಾವಿದ್ಯಾಲಯದಲ್ಲಿ (ಕಾಲೇಜಿನಲ್ಲಿ) ತೆರೆದು ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯ ತರಭೇತಿ ನೀಡಿ ಅವರ ಸರ್ವತೋಮುಖ ಅಭಿವೃಧ್ದಿ ಘೋಷಿಸಲು ನಮ್ಮ ವಿಶ್ವವಿದ್ಯಾಲಯ ಮುಂದಾಗಿದೆ. ಸಾಮಾಜಿಕ ಪ್ರಯೋಜನ, ಸವಲತ್ತುಗಳ ಕುರಿತು ನನಗಲ್ಲ ನಿನಗೆ ಎನ್ನುವ ಪರಿಕಲ್ಪನೆ ಎಲ್ಲರಲ್ಲೂ ಬಿತ್ತಿ ಬೆಳೆಸುವ ಚಾತುರ್ಯ ಹಾಗೂ ಸಾಮಾಜಿಕ ಹೊಣೆಗರಿಕೆ ಅವರಲ್ಲಿ ರೂಢಿಸಿ ನಾಯಕತ್ವ ಗುಣ ಮೇಳೈಸುವಂತೆ ಮಾಡುವ ಜರೂರತೆಯಿದೆ.

ಅದಕ್ಕಾಗಿಯೇ, ಮಹಾತ್ಮ ಗಾಂಧೀಜಿಯವರು ಹೇಳಿದುದು - “ ದೇಶದ ಪ್ರಗತಿ ಅಪೇಕ್ಷಿತ ಮಾರ್ಗದಲ್ಲಿ ಸಾಗಬೇಕಾದರೆ ಅಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಹಳ್ಳಿ / ಸಮುದಾಯದ ಏಳಿಗೆಗೆ ಅವರು ಶ್ರಮಿಸುವಂತೆ ಮಾಡಬೇಕು ”. ಈ ದಿಸೆಯಲ್ಲಿ ವಿದ್ಯಾರ್ಥಿ ವೃಂದ. ಶಿಕ್ಷಕ ಸಮೂಹ ಹಾಗೂ ಜನ ಸಮುದಾಯದ ನಡುವೆ ಬಾಂಧವ್ಯ ಬೆಸೆಯುವಂತೆ ಮಾಡುವುದು ಎಲ್ಲರ ಜವಾಬ್ದಾರಿ. ಆಗ ಮಾತ್ರ ನಮ್ಮ ಸಂವಿಧಾನದ ಆಶೋತ್ತರಗಳನ್ನು ಸಾಕಾರಗೊಳಿಸುವುದು ಸುಲಭ-ಸಾಧ್ಯ ಎನ್ನುವುದು ನಮ್ಮ ಶಾಸಕಾಂಗದ ಅಭಿಮತ.

ಈ ನಿಟ್ಟಿನಲ್ಲಿ ವಾರಾಂತ್ಯ ಕಾರ್ಯಕ್ರಮಗಳನ್ನು ಹಾಗೂ ವಿಶೇಷ ಶಿಬಿರಗಳನ್ನು ರೂಪಿಸಿ ಎಲ್ಲರನ್ನು ಒಳಗೊಳಿಸುವ ಕೌಶಲತೆ ಮತ್ತು ಸಾಮಾಜಿಕ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿ ಒಡಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಅಭೀಪ್ಸೆ ನಮ್ಮದು. ಅವುಗಳಲ್ಲಿ ಪ್ರಮುಖವಾದುದು ಸ್ವಚ್ಚತೆ, ಅರಣೈಕರಣ, ಜನಜಾಗೃತಿ ಜಾಥಾ, ಗ್ರಾಮೀಣ ಪುನರ್ ನಿರ್ಮಾಣ, ಯುವಜನತೆಗೆ ಆರ್ಥಿಕಾಭಿವೃಧ್ದಿ ಯೋಜನೆ, ರಾಷ್ಟ್ರೀಯ ಐಕ್ಯತೆ ಮತ್ತು ಸಾಮಾಜಿಕ ಸೌಹಾರ್ದತೆ, ಸುಸ್ಥಿರ ಅಭಿವೃಧ್ದಿ, ಜಲ ಸಂಪನ್ಮೂಲ ಸಂರಕ್ಷಣೆ , ಬಂಜರ ಭೂಮಿ ಅಭಿವೃಧ್ಧಿ, ಸ್ವಾಸ್ಥ್ಯ ಯುವಜನತೆ ಮತ್ತು ಸ್ವಸ್ಥ ಭಾರತ ಹೀಗೆ ಹತ್ತು ಹಲವು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಬೇಕೆನ್ನುವುದು ನಮ್ಮ ಚಿಂತನೆ.

ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧೀಜಿ ಜಯಂತಿಯ 150ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ಹಾಗೆಯೇ ಎನ್.ಎಸ್.ಎಸ್. ಆರಂಭವಾಗಿ ಇಂದಿಗೆ 50 ವರ್ಷ ತುಂಬುವ ಜೊತೆಗೆ ವಿಶಾಲ ಕರ್ನಾಟಕ ಪರಿಕಲ್ಪನೆಗೆ 100 ವರ್ಷವಾಗುವುದು. ಈ ಎಲ್ಲವನ್ನು ಅರ್ಥವತ್ತಾಗಿ ಆಚರಿಸಿ ದೇಶ ಕಟ್ಟುವ ಕಾಯಕದಲ್ಲಿ ಎಲ್ಲರನ್ನು ತೊಡಗಿಸಬೇಕಾದ ಸಂಕ್ರಮಣ ಕಾಲವಿದು.

“ಆಳಾಗಿ ದುಡಿ ಅರಸನಾಗಿ ಉಣ್ಣು ಸೇವೆಯ ಊರುಗೋಲು” ಎಂಬ ನಾಡನುಡಿ ಮನಸ್ಸಿನಲ್ಲಿಟ್ಟುಕೊಂಡು ಎನ್.ಎಸ್.ಎಸ್.ನ್ನು ಎಲ್ಲರೂ ಸಾಮೂಹಿಕವಾಗಿ ಇಟ್ಟುಕೊಳ್ಳುವ ಬದಲು ಕಟ್ಟಿಕೊಳ್ಳೋಣ ಬನ್ನಿ.

ಡಾ. ಸತೀಶ್‍ಗೌಡ. ಎನ್.
ಕಾರ್ಯಕ್ರಮ ಸಂಯೋಜನಾಧಿಕಾರಿ