ರಾಷ್ಟ್ರೀಯ ಶೈಕ್ಷಣಿಕ ಕಣಜ

ಡಿಜಿಟಲ್ ಇಂಡಿಯಾ ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆ. ಇದರ ಲಕ್ಶ್ಯ ಭಾರತಕ್ಕೆ ವಿಶ್ವದಲ್ಲೇ ಒಂದು ಅತ್ಯುತ್ತಮ ಸ್ಥಾನಮಾನವನ್ನು ನೀಡುವುದಾಗಿದೆ.ಭಾರತೀಯ ನಾಗರಿಕರ ಡಿಜಿಟಲ್ ಸಬಲೀಕರಣ ಮಾಡುವುದು ಹಾಗೂ ಮಾಹಿತಿಯನ್ನು ಡಿಜಿಟಲೀಕರಣ ಗೊಳಿಸುವುದು ಇದರ ಪ್ರಮುಖ ಉದ್ಧೇಶವಾಗಿದೆ.ಇದು ಕಾಗದಪತ್ರಗಳ ಕಾರ್ಯ, ಸಮಯ ಮತ್ತು ಮಾನವಶ್ರಮವನ್ನು ಉಳಿಸುವಲ್ಲಿ ಒಂದು ಪ್ರಮುಖ ಪಾತ್ರವಹಿಸಿದೆ.


‘ರಾಷ್ಟ್ರೀಯ ಶೈಕ್ಷಣಿಕ ಕಣಜ’ ದ ಮೂಲಕ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿವರೆಗೂ ವೃತ್ತಿಪರ ಕೋರ್ಸ್‌ ಸೇರಿ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಅಂಕಪಟ್ಟಿ ಹಾಗೂ ಹಲವು ಬಗೆಯ ಪ್ರಮಾಣಪತ್ರಗಳನ್ನು ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ವಿವಿಧ ಕೋರ್ಸ್‌ಗಳ ಪ್ರಮಾಣಪತ್ರ ಸೇರಿ ಎಲ್ಲ ಬಗೆಯ ಶೈಕ್ಷಣಿಕ ಚಟುವಟಿಕೆಗಳ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ‘ನ್ಯಾಡ್‌’ನಲ್ಲಿ ದಿನದ 24 ಗಂಟೆಯೂ ಡಿಜಿಟಲ್‌ ಪ್ರಮಾಣಪತ್ರಗಳು ಲಭ್ಯವಿರಲಿವೆ. ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಮೊಬೈಲ್‌ನಲ್ಲೇ ಅಂಕಪಟ್ಟಿಗಳನ್ನು ನೋಡಬಹುದಾಗಿದೆ.


ಡಿಜಿಟಲ್ ಸಪ್ತಾಹಕ್ಕೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಡಿಜಿಲಾಕರ್‌ನ್ನು ಜನರಿಗೆ ಪರಿಚಯಿಸಿದೆ. ಡಿಜಿಲಾಕರ್ ಎಂಬುದು ಆನ್‌ಲೈನ್ ಸೇವೆಯಾಗಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಮೀಟಿವೈ), ಭಾರತ ಸರ್ಕಾರ ತನ್ನ ಡಿಜಿಟಲ್ ಇಂಡಿಯಾ ಉಪಕ್ರಮದಲ್ಲಿ ಒದಗಿಸುತ್ತದೆ. ಜನರು ತಮ್ಮ ಇ-ದಾಖಲೆಪತ್ರಗಳನ್ನು ಡಿಜಿ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಬಹುದು.ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನೆಲ್ಲಾ ಡಿಜಿಟಲೈಸ್ ಮಾಡುವಾಗ ಜನರಿಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಇದು ಸಹಾಯವಾಗುತ್ತದೆ. ಮಾತ್ರವಲ್ಲದೆ ಜನರು ತಮ್ಮ ಗುರುತುಚೀಟಿ, ಸರ್ಟಿಫಿಕೇಟ್‌ಗಳನ್ನು ಸಂಬಂಧಿಸಿದ ಕಚೇರಿ ಜತೆ ಶೇರ್ ಮಾಡಲು ಇದು ಸುಲಭ ವಿಧಾನವಾಗಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್, ಡಿಗ್ರಿ ಸರ್ಟಿಫಿಕೇಟ್, ದಾಖಲೆ ಪತ್ರ ಮೊದಲಾದವುಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ಡಿಜಿಟಲ್ ಲಾಕರ್‌ನಲ್ಲಿ ನಮ್ಮ ದಾಖಲೆ ಪತ್ರಗಳು ಸುರಕ್ಷಿತವಾಗಿರುತ್ತವೆ. ಕ್ಲೌಡ್ ಸರ್ವರ್ (Cloud Server) ತಂತ್ರಜ್ಞಾನದ ಮೂಲಕ ಈ ದಾಖಲೆಗಳೆಲ್ಲಾ ಇಲ್ಲಿ ಸೇವ್ ಆಗಿದ್ದು, ಅಗತ್ಯ ಬಂದಾಗ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ಡಿಜಿಲಾಕರ್ನಲ್ಲಿ ನೋಂದಾಯಿಸುವ ಲಿಂಕ್

ಬೆಂಗಳೂರು ವಿಶ್ವವಿದ್ಯಾಲಯದ ಡಿಜಿಲಾಕರ್‌ ನ್ಯಾಡ್ ಸೆಲ್ ವಿಳಾಸ ಮತ್ತು ಸಂಪರ್ಕ ಮಾಹಿತಿ

ಡಿಜಿಲಾಕರ್‌ ನ್ಯಾಡ್ ಸೆಲ್
ಪರೀಕ್ಷಾ ಭವನ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560056

ಸಂಪರ್ಕಾಧಿಕಾರಿ:  ನೋಡಲ್ ಅಧಿಕಾರಿ
ಇ-ಮೇಲ್ : bunaddigilocker@bub.ernet.in