English

ಇಂಗ್ಲಿಷ್

ವಿಭಾಗದ ಬಗ್ಗೆ ಸಂಕ್ಷಿಪ್ತ ವಿವರ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ವಿಭಾಗವನ್ನು 1965 ರಲ್ಲಿ ಸ್ಥಾಪಿಸಲಾಯಿತು. ಎಮ್ .ಎ ಇಂಗ್ಲೀಷ್ ಕೋರ್ಸಿನಲ್ಲಿ ಇಂಗ್ಲೀಷ್ ಭಾಷೆಯ ಘಟಕವನ್ನು ಪರಿಚಿಯಿಸಿದ ಮತ್ತು ಕಲಿಸಿದ ಬೆಂಗಳೂರು ವಿಶ್ವವಿದ್ಯಾಲಯವು ಭಾರತದಲ್ಲಿನ ಮೊಟ್ಟಮೊದಲ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದನ್ನು  ಪರಿಚಯಿಸಿದವರು ಪ್ರೊ. ಡಬ್ಲ್ಯೂ. ಡಬ್ಲ್ಯೂ. ಎಸ್ ಭಾಸ್ಕರ್. ಹಲವು ಬ್ಯಾಚ್ ಗಳ ಬದ್ದ ವಿಧ್ಯಾರ್ಥಿಗಳೊಂದಿಗೆ ಸುಪ್ರಸಿದ್ದ ಶಿಕ್ಷಕರುಗಳಾದ ಪ್ರೊ. ಎಲ್.ಎಸ್. ಶೇಷಗಿರಿರಾವ್, ಪ್ರೊ.ಎಸ್.ರಾಮಸ್ವಾಮಿ, ಪ್ರೊ.ಲಂಕೇಶ್, ಪ್ರೊ. ವಿಮಲ ರಾಮಾ ರಾವ್, ಪ್ರೊ. ಎಮ್.ಎ.ಯದುಗಿರಿ ಪ್ರ್ರೊ. ಹಾಸನ್ ಮನ್ಸೂರ್ ಮತ್ತು ಪ್ರೊ. ಟಿ.ಜಿ. ವೈಧ್ಯನಾಥನ್ ರವರುಗಳು ಕೆಲಸ ಮಾಡಲು ಭಕ್ತಿಯ ಸಂಪ್ರದಾಯವನ್ನು ರೂಪಿಸಿದ್ದು ಇದರಿಂದ ವಿಭಾಗವು ಸ್ಪೂರ್ತಿ ಪಡೆದಿದೆ. ಐದು ದಶಕಗಳ ಬೆಳವಣಿಗೆಯ ಅವಧಿಯಲ್ಲಿ ನಿರಂತರ ಪುನರ್ ವಿಮರ್ಶೆಯ  ಮೂಲಕ ಇಂಗ್ಲೀಷ್ ಅಧ್ಯಯನದ  ಕಡೆಗೆ ವಿಶಾಲವಾದ ದೃಷ್ಟಿಕೋನವನ್ನು ತಿರುಗಿಸಿದ್ದು  ಮತ್ತು ಇದು ಅಂತರಶಿಕ್ಷಣಕ್ಕೆ ಬಾಗಿಲು ತೆರೆದಿದೆ. ಪ್ರಸ್ತುತ ವಿಭಾಗದಲ್ಲಿ ಮೂರು ಪ್ರಾಧ್ಯಾಪಕರು ಮತ್ತು ನಾಲ್ಕು ಸಹಾಯಕ ಪ್ರಾಧ್ಯಾಪಕರುಗಳನ್ನು ಒಳಗೊಂಡಿರುವ ಏಳು ಶಿಕ್ಷಕರನ್ನು ಹೊಂದಿದ್ದು ಇವರುಗಳು ಗುಣಮಟ್ಟದ ಭೋಧನೆ ಮತ್ತು ಸಂಶೋಧನೆ ಗೆ ಬದ್ದರಾಗಿದ್ದಾರೆ.

ಉದ್ದೇಶಗಳು:

ಭಾಷೆ, ಸಾಹಿತ್ಯ ಅಧ್ಯಯನಕ್ಕಾಗಿ ಅರ್ಥಪೂರ್ಣ ಸಂಶೋಧನಾ ಕೇಂದ್ರವಾಗಿರಲು ಇಂಗ್ಲೀಷ್ ನಲ್ಲಿ ಗಡಿನಾಡು ಅಧ್ಯಯನ ಗಳ ಬಗ್ಗೆ ಪುನರ್ ವ್ಯಾಖ್ಯಾನಿಸಲು ಇಂಗ್ಲೀಷಿನಲ್ಲಿ ನವ ಸಾಹಿತ್ಯ ವನ್ನು ಸೇರಿಸುವುದಲ್ಲದೇ ಪೂರ್ವ ವಸಾಹತುಶಾಹಿ ಸನ್ನಿವೇಶಗಳ ಜೊತೆಗೆ ಸಂಸ್ಕೃತಿ ಮತ್ತು ಸಮಾಜದ ಬಗ್ಗೆ ಅದ್ಯ್ಹಯನಗಳನ್ನು ಸೇರಿಸಿದಲ್ಲಿ ಈ ಕ್ಷೇತ್ರದ ಮೂಲಕ ಸಂಸ್ಕೃತಿಯ ಕ್ಶೇತ್ರವನ್ನು ಪ್ರವೇಶಿಸಬಹುದು. ಸಂಕೀರ್ಣವನ್ನು ವಿಶ್ಲೇಷಿಸಲು ಸಹಾಯ ಮಾಡುವ ಪರಿಕಲ್ಪನಾ ಮತ್ತು ಸೈದ್ದಾಂತಿಕ ಸಾಧನಗಳೋಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು. ವಿಧ್ಯಾರ್ಥಿಗಳನ್ನು ಉತ್ತಮ ಶಿಕ್ಷಕರಾಗಿ ಸಕ್ರಿಯಗೊಳಿಸಲು ಭಾಷಾಶಾಸ್ತ್ರದಲ್ಲಿ ಇಂಗ್ಲೀಷ್ ಭಾಷೆಯ ವಿಧ್ಯಾರ್ಥಿಗಳನ್ನು ಸಂವೇದನಾಶೀಲರನ್ನಾಗಿಸಲು ಸ್ಥಳೀಯ ಮತ್ತು ನಿರ್ದಿಷ್ಟ ಪರಿಸರ ದಲ್ಲಿ ಜಾಗತೀಕರಣ ಮತ್ತು ಕ್ಷಿಪ್ರಗತಿಯ ಸವಾಲುಗಳನ್ನು ಎದುರಿಸಲು    ಇಂಗ್ಲೀಷ್ ವಿಶ್ವದ ಲಿಂಕ್ ಭಾಷೆ ಮತ್ತು ಅವಕಾಶಗಳ ಭಾಷೆಯಾಗಿರುವುದರಿಂದ  ಬಾಷೆಯ ಪ್ರಸರಣದಲ್ಲಿ ಸಮಾಜದ ಎಲ್ಲಾ ವಿಭಾಗಗಳಲ್ಲಿ ರೂಪಿಸುವ ಕಾರ್ಯವಿಧಾನಗಳನ್ನು ಸಾಕ್ಷಾತ್ಕರಿಸಲು ವಿಭಾಗವು ಪ್ರಮುಖ ಪಾತ್ರ ವಹಿಸುತ್ತದೆ.

ಅಧ್ಯಕ್ಷರು ಡಾ. ಚಿತ್ರಾ ಪಣಿಕರ್

ಅವಧಿ:  28.09.2020  ರಿಂದ 27.09.2022

ನಮ್ಮನ್ನು ಸಂಪರ್ಕಿಸಿ ಇಂಗ್ಲೀಷ್ ವಿಭಾಗ ಅಶೋಕ ಭವನ ಜ್ಞಾನಭಾರತಿ ಆವರಣ ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು - 560056

ದೂ: 080 22961631

ಇಮೇಲ್: dept.english@bub.ernet.in

ಲಭ್ಯ್ಯವಿರುವ ಕೋರ್ಸ್ ನ ವಿವರ -  ಇಂಗ್ಲಿಷ್ ಎಂ.ಎ

ಕೋರ್ಸ್ ನ ಪದ್ದತಿ - ಸೆಮಿಸ್ಟರ್ ಸ್ಕೀಮ್.

ಅವಧಿ -  4  

ಸೆಮಿಸ್ಟರ್ ಗಳು (ವರ್ಷ)

ಗರಿಷ್ಠ ಅವಕಾಶ ಮಿತಿ - 50 + ಪಾವತಿ ಸೀಟುಗಳು – 10

ಅರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪದವಿ ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಕನಿಷ್ಠ ಒಟ್ಟು ಶೇ.40% ಅಂಕಗಳು ಮತ್ತು ಸಂಬಂಧಪಟ್ಟ ಐಚ್ಚಿಕ ವಿಷಯದಲ್ಲಿ ಶೇ. 50% ಅಂಕಗಳನ್ನು ಪಡೆದವರು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಬಿಎ.,/ಬಿಎಸ್ಸಿ/ಬಿ.ಕಾಂ.,/ ಪರೀಕ್ಷೆ ಪಾಸಾಗಿ, ಸಂಬಂಧಪಟ್ಟ ವಿಷಯದಲ್ಲಿ ಶೇ.55% ರಷ್ಟು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರುವವರು ಅರ್ಹರಾಗಿರುತ್ತಾರೆ. 

ಕ್ರ. ಸಂ ಹೆಸರು ವಿದ್ಯಾರ್ಹತೆ ಪದನಾಮ ವಿಶೇಷ ಪರಿಣಿತಿ ಪ್ರೊಫೈಲ್
1  ಡಾ. ಗೀತಾಭಾಸ್ಕರ್ ಎಮ್.ಎ ಪಿಜಿಡಿಟಿಇ,  ಪಿಹೆಚ್.ಡಿ. ಡಿಪ್ಲೊಮೊ ಇನ್ ಫ್ರೆಂಚ್, ಸರ್ಟಿಫಿಕೇಟ್ ಇನ್ ಜೆರ್ಮನ್  ಪ್ರಾಧ್ಯಾಪಕರು ಆಂಗ್ಲ ಭಾಷೆ ಮತ್ತು ಭಾಷಾಶಾಸ್ತ್ರ, ಸಾಮಾನ್ಯ ಶಬ್ದಾರ್ಥ ವೀಕ್ಷಿಸಿ
2  ಡಾ. ಚಿತ್ರಾ ಪಣಿಕರ್ ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ  ಪ್ರಾಧ್ಯಾಪಕರು ವಿಮರ್ಶಾತ್ಮಕ ಸಿದ್ದಾಂತ, ಅನುವಾದ ಮತ್ತು ಸಾಂಸ್ಕೃತಿಕ ಅಧ್ಯಯನ ವೀಕ್ಷಿಸಿ
3  ಡಾ. ಕೆ.ಎಸ್.ವೈಶಾಲಿ ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ  ಪ್ರಾಧ್ಯಾಪಕರು ಲಿಂಗ ಅಧ್ಯಯನ / ನಿರ್ಣಾಯಕ ಸಿದ್ದಾಂತ, ವಸಾಹತು-ನಂತರದ ಅಧ್ಯಯನಗಳು ವೀಕ್ಷಿಸಿ
4  ಡಾ. ಅರ್. ಗೀತಾ ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ, ಸಿ.ಟಿ.ಇ  ಪ್ರಾಧ್ಯಾಪಕರು ಭಾಷಾ ಅಧ್ಯಯನಗಳು, ಆಂಗ್ಲ ಭಾಷಾ ಭೋಧನೆ, ನಿರ್ದಿಷ್ಟ ಮೌಖಿಕ ಸಾಮರ್ಥ್ಯದಲ್ಲಿ ಭಾಷೆಯ ಕೌಶಲಗಳನ್ನು ಅಭಿವೃದ್ಧಿ ಪಡಿಸುವುದು ವೀಕ್ಷಿಸಿ
5  ಡಾ. ಎಮ್.ಶೋಭಾ ಎಂ.ಎ; ಪಿ.ಹೆಚ್.ಡಿ ಪ್ರಾಧ್ಯಾಪಕರು ಕೆನಡಿಯನ್ ಅಧ್ಯಯನ, ವಿಮರ್ಶಾತ್ಮಕ ಸಿದ್ದಾಂತ, ಭಾಷಾಂತರದಲ್ಲಿ ಭಾಷಾ ಸಾಹಿತ್ಯ ವೀಕ್ಷಿಸಿ
6 ಡಾ. ಸಿಂಧು ಜೆ ಎಂ.ಎ; ಎಂ.ಫಿಲ್; ಪಿ.ಹೆಚ್.ಡಿ ಸಹ ಪ್ರಾಧ್ಯಾಪಕರು ಸೆಂಟ್ರಲ್ ಏಷ್ಯನ್ ಅಧ್ಯಯನ, ರಷ್ಯನ್ ಸಾಹಿತ್ಯ, ಯೂರೋಪಿಯನ್ ಸಾಹಿತ್ಯ ವೀಕ್ಷಿಸಿ
7  ಡಾ. ಶ್ರೀಕೀರ್ತಿ. ಬಿ. ಎನ್ ಎಂ.ಎ; ಪಿ.ಹೆಚ್.ಡಿ ಸಹ ಪ್ರಾಧ್ಯಾಪಕರು ಆಧುನಿಕ ಇಂಗ್ಲೀಷ್ ಕವನ, ವಸಾಹತು ನಂತರದ ಸಾಹಿತ್ಯ, ವಿಮರ್ಶಾತ್ಮಕ ಸಿದ್ದಾಂತ ವೀಕ್ಷಿಸಿ