UVCE

ವಿಭಾಗದ ಇತಿಹಾಸ

ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವನ್ನು 1994 ರಲ್ಲಿ ಡಾ.ಎಲ್.ಎನ್ ಶಿವಶಂಕರ್ ನೇತೃತ್ವದಲ್ಲಿ ಪ್ರತ್ಯೇಕ ವಿಭಾಗವಾಗಿ ಸ್ಥಾಪಿಸಲಾಯಿತು. ಈ ವಿಭಾಗವನ್ನು ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗ ಮತ್ತು ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಗಳಾಗಿ 2004 ರಲ್ಲಿ ವಿಭಜಿಸಲಾಯಿತು.

ಹೊಸ ತಂತ್ರಜ್ಞಾನಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಉದ್ಯಮದ ವೇಗದಲ್ಲಿರಲು ಪಠ್ಯಕ್ರಮವನ್ನು ನಿಗದಿಪಡಿಸಲಾಗಿದೆ ಮತ್ತು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ.  ನಿಯಮಿತ ಪದವಿಪೂರ್ವ ಕೋರ್ಸು ಜೊತೆಗೆ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಕೋರ್ಸುಗಳನ್ನು ಸಹ ವಿಭಾಗವು ನೀಡುತ್ತದೆ. ಡಿಪ್ಲೊಮೊ ಮತ್ತು ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಿಭಾಗವು ಸಂಜೆ ಕಾಲೇಜು ನಡೆಸುತ್ತದೆ.  ಪ್ರಸ್ತುತ ವಿಭಾಗದಲ್ಲಿ ಸಾಮಾನ್ಯ ಪದವಿಪೂರ್ವ ಕೋರ್ಸಿಗೆ 60, ಸಂಜೆ ಪದವಿಪೂರ್ವ ಕೋರ್ಸ್ ಗೆ 60 ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ 25 ಸೀಟುಗಳನ್ನು ಒದಗಿಸಲಾಗುತ್ತಿದೆ. ವೇಗವಾಗಿ ಪ್ರಗತಿ ಹೊಂದುತ್ತಿರುವ ವಿದ್ಯುನ್ಮಾನ ಉದ್ಯಮಕ್ಕಾಗಿ ವಿಭಾಗವು ದಕ್ಷ ಎಂಜಿನಿಯರಿಗಳನ್ನು ಉತ್ಪಾದಿಸುತ್ತಿದೆ. ವಿಭಾಗವು ಸಣ್ಣ ಆದರೆ ಅತ್ಯುತ್ತಮ ಸಿಬ್ಬಂದಿಯನ್ನು ಹೊಂದಿದ್ದು ಅವರು ಉದ್ಯಮಕ್ಕೆ ಮತ್ತು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಸಮರ್ಪಿಸಲಾಗಿದೆ.

ಸಂವಹನ ಪ್ರಯೋಗಾಲಯ, ಡಿಜಿಟಲ್ ಪ್ರಯೋಗಾಲಯ, ಸಾಧನ ಪ್ರಯೋಗಾಲಯ, ಮೈಕ್ರೊಪ್ರೊಸೆಸರ್ ಪ್ರಯೋಗಾಲಯ, VLSI ಪಯೋಗಾಲಯ ಮತ್ತು ಸಿಮ್ಯುಲೇಶನ್ ಪ್ರಯೋಗಾಲಯದಂತಹ ಅಗತ್ಯ ಮೂಲಸೌಕರ್ಯಗಳನ್ನು ವಿಭಾಗವು ಹೊಂದಿದೆ.  ಈ ಪದವಿಪೂರ್ವ ಕೋರ್ಸ್ ನ ಆನೇಕ ವಿದ್ಯಾರ್ಥಿಗಳು ತಮ್ಮದೇ ಆದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲು ಕೆಲಸ ಮಾಡುತ್ತಿದೆ.

ಅಧ್ಯಕ್ಷರು   ಡಾ.ಕೆ.ಬಿ. ರಾಜ

ಅವಧಿ01.04.2021 ರಿಂದ 30.06.2022

ನಮ್ಮನ್ನು ಸಂಪರ್ಕಿಸಿ

ದೂ: 080 22961821

ಲಭ್ಯವಿರುವ ಕೋರ್ಸ್ ಗಳು

ವಿದ್ಯುನ್ಮಾನ ಇಂಜಿನಿಯರಿಂಗ್  (ಬಿ.ಇ) ಯುಜಿ 4 ವರ್ಷಗಳು

ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್  (ಎಂ.ಇ) ಪಿಜಿ 2 ವರ್ಷಗಳು

ಕ್ರ. ಸಂ     ಹೆಸರು ವಿದ್ಯಾರ್ಹತೆ ಪದನಾಮ ವಿಶೇಷ ಪರಿಣಿತಿ ಸ್ವವಿವರ
1 ಡಾ. ರಾಜ ಕೆ.ಬಿ ಎಂ.ಇ, ಪಿಹೆಚ್.ಡಿ., ಪ್ರಾಧ್ಯಾಪಕರು ಎಲೆಕ್ಟ್ರಾನಿಕ್ಸ್ ವೀಕ್ಷಿಸಿ
2 ಡಾ.ಬಿ.ಪಿ.ಹರೀಶ್ ಪಿಹೆಚ್.ಡಿ ಪ್ರಾಧ್ಯಾಪಕರು VLSI ಡಿಸೈ ನ್ ವೀಕ್ಷಿಸಿ
3 ಶ್ರೀ. ಬಿ.ಕೆ. ವೇಣುಗೋಪಾಲ್ ಎಂ.ಇ ಸಹ ಪ್ರಾಧ್ಯಾಪಕರು ಎಲೆಕ್ಟ್ರಾನಿಕ್ಸ್ ವೀಕ್ಷಿಸಿ
4 ಶ್ರೀ. ಎಸ್.ಹನುಮಂತಪ್ಪ ಎಂ.ಇ ಸಹಾಯಕ ಪ್ರಾಧ್ಯಾಪಕರು ಎಲೆಕ್ಟ್ರಾನಿಕ್ಸ್ ವೀಕ್ಷಿಸಿ