ವಿಭಾಗದ ಇತಿಹಾಸ:
ಶಿಕ್ಷಣದಲ್ಲಿ ಸ್ನಾತಕೋತ್ತರ ವಿಭಾಗವನ್ನು 1967 ರಲ್ಲಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು.. ಎಂ.ಎಡ್. ಯೋಜನೆಯನ್ನು ಪ್ರಾರಂಭದಿಂದಲೂ ನಿಡಲಾಗುತ್ತಿದ್ದು. ಕೋರ್ಸ್ ಗಳಾದ ಎಂ.ಫಿಲ್ ಮತ್ತು ಪಿಹೆಚ್.ಡಿ ಯನ್ನು ವಿಭಾಗದಲ್ಲಿ ಸೇರಿಸಲಾಗಿದೆ. ವರ್ಷಗಳಲ್ಲಿ, ಈ ಕೊರ್ಸ್ ಗಳಲ್ಲಿ ಅವುಗಳ ವಿಷಯ ಮತ್ತು ರಚನೆಯ ದೃಷ್ಟಿಯಿಂದ ಗುನಮಟ್ಟ ಮತ್ತು ಪ್ರಸ್ತುತತೆಗೆ ಅನುಗುಣವಾಗಿ ಸಾಕಷ್ಟು ವೈವಿದ್ಯತೆ ಕಂಡು ಬಂದಿದೆ. ವಿಭಾಗವು ಅಸ್ತಿತ್ವದಲ್ಲಿದ್ದ ಕಳೆದ ಐದು ದಶಕಗಳಲ್ಲಿ ಗಣನೀಯ ಕೊಡುಗೆ ನೀಡಿದೆ. ಪ್ರತಿ ವರ್ಷವು ಉತ್ತಮ ಸಂಖ್ಯೆಯಲ್ಲಿ ಸಮರ್ಥ ತರಬೇತಿ ಪಡೆದ ಶಿಕ್ಷಕರು ಈ ವಿಭಾಗದಲ್ಲಿ ಹಾದು ಹೋಗಿದ್ದಾರೆ. ಮತ್ತು ಕರ್ನಾಟಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳಾದ NCERT, NEUPA, NCTE, IIM ಮತ್ತು ಹಲವಾರು ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಯೊಜಕರು, ಶೈಕ್ಷಣಿಕ ನಿರ್ವಾಹಕರು, ಪಠ್ಯಕ್ರಮ ಅಭಿವರ್ಧಕರು ಮತ್ತು ಶೈಕ್ಷಣಿಕ ಸಂಶೋಧಕರಾಗಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.ವಿವಿಧ ವಿಷಯಗಳಿಗೆ ಪ್ರವೇಶ ಪಡೆದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದರೂ ಈ ವಿಷಯದಲ್ಲಿ ಗುಣಮಟ್ಟ ಮತ್ತು ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ವಿಭಾಗವು ಶ್ರಮಿಸಿದೆ. ವಿಭಾಗವು ಹಲವಾರು ಪಿಹೆಚ್.ಡಿ ಗಳು, ಎಂ.ಫಿಲ್, ಎಂ.ಎಡ್ ಮತ್ತು ಹಲವಾರು ಸಂಶೋಧನಾ ಸಾಧಕರನ್ನು ಸೃಷ್ಠಿಸಿದೆ.
ಅಧ್ಯಕ್ಷರು : ಡಾ.ಎಂ. ನಾರಯಣ ಸ್ವಾಮಿ
ಅವಧಿ: 05.03.2022 ರಿಂದ 04.03.2024
ನಮ್ಮನ್ನು ಸಂಪರ್ಕಿಸಿ: ಶಿಕ್ಷಣ ವಿಭಾಗ,ಮಾನಸ ಭವನ, ಜ್ಞಾನಭಾರತಿ ಆವರಣ.ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು -560056 ದೂರವಾಣಿ ಸಂಖ್ಯೆ: 080 22961621ಅ. ಲಭ್ಯವಿರುವ ಕೋರ್ಸುಗಳು:
ಅ. ಎಂ.ಎಡ್
ಅವಧಿ: ಎರಡು ವರ್ಷಗಳ ಸಿಬಿಸಿಎಸ್ ಆಧಾರಿತ ಕಾರ್ಯಕ್ರಮ.
ತೆಗೆದುಕೊಳ್ಳುವ ಸೀಟುಗಳು: 35. (ಮೂವತ್ತೈದು)
ಸ್ವರೂಪ: ರೆಗ್ಯುಲರ್. (ಫುಲ್ ಟೈಮ್)
ಅರ್ಹತೆ: ಬಿ.ಎಡ್ ನಲ್ಲಿ ಶೇ. 50% ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ಜಾತಿಯವರಿಗೆ, ಶೇ. 45% ಎಸ್ಸಿ/ಎಸ್ಟಿ ಮತ್ತು ವರ್ಗ-೧ ರವರಿಗೆ
ಆ. ಪಿಹೆಚ್.ಡಿ
ಪಿಹೆಚ್.ಡಿ ಪ್ರವೇಶವು ಪ್ರವೇಶ ಪರೀಕ್ಷೆಯ ಮೂಲಕ ಮತ್ತು ಯುಜಿಸಿ - ಜೆಆರ್ ಎಫ್, ನೆಟ್ ಮತ್ತು ಸ್ಲೆಟ್ ಮೂಲಕ ನಡೆಸಲಾಗುತ್ತದೆ. ಪಿಹೆಚ್.ಡಿ ಕಾರ್ಯಕ್ರಮವನ್ನು ಯುಜಿಸಿ ಮಾರ್ಗಸೂಚಿಗಳನ್ನು ಆಧರಿಸಿ ನಡೆಸಲಾಗುತ್ತದೆ.
ಕ್ರ.ಸಂ | ಹೆಸರು | ವಿದ್ಯಾರ್ಹತೆ | ಪದನಾಮ | ವಿಶೇಷತೆ | ಸ್ವವಿವರ |
1 | ಡಾ.ಎಂ. ನಾರಯಣ ಸ್ವಾಮಿ | ಎಂಎಡ್., ಎಂ.ಫಿಲ್ ಪಿಹೆಚ್ .ಡಿ | ಪ್ರಾಧ್ಯಾಪಕರು | ಶಿಕ್ಷಣದ ತತ್ವಶಾಸ್ತ್ರೀಯ ಶಿಕ್ಷಣ, ಶೈಕ್ಷಣಿಕ ಆಡಳಿತ | ವೀಕ್ಷಿಸಿ |
2 | ಡಾ.ವಾಣಿಶ್ರೀ ಕೊಪ್ಪದ್ | ಎಂಎಡ್.,ಪಿಹೆಚ್.ಡಿ | ಸಹಾಯಕ ಪ್ರಾಧ್ಯಾಪಕರು | ಶೈಕ್ಷಣಿಕ ತಂತ್ರಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಸಂಶೋಧನಾ ವಿಧಾನ, ಪಠ್ಯಕ್ರಮದ ಅಧ್ಯಯನಗಳು ಮತ್ತು ಶಿಕ್ಷಕರ ಶಿಕ್ಷಣ | ವೀಕ್ಷಿಸಿ |
2 |