ಮುಖ್ಯವಾದ ಲಿಂಕ್ಸ್
ಕುಲಪತಿಗಳ ಸಂದೇಶ
- ಪ್ರಚಲಿತ ಸಮಾಚಾರ
- ಸುತ್ತೋಲೆ ಮತ್ತು ಅಧಿಸೂಚನೆ
- ವಿಚಾರ ಸಂಕಿರಣ/ ಸಮ್ಮೇಳನ/ ಕಾರ್ಯಾಗಾರ/ ಉತ್ಸವ/ ಶಿಬಿರ/ವರದಿಗಳು
- ಮಾಹಿತಿ ಹಕ್ಕು ಕಾಯಿದೆ
- ಐ.ಕ್ಯು.ಎ.ಸಿ
- ಪ್ಲೇಸ್ಮೆಂಟ್ ಸೆಲ್
- ಲಿಂಗ ಸಂವೇದನೆ ಸೆಲ್
- ಜಾತಿ ಆಧಾರಿತ ತಾರತಮ್ಯ
- ಇತರ ಬಾಹ್ಯ ಕೊಂಡಿಗಳು
ವಿಶ್ವವಿದ್ಯಾಲಯದ ಎಲ್ಲಾ ಸುತ್ತೋಲೆಗಳು, ಅಧಿಸೂಚನೆಗಳು ಮತ್ತು ಯು.ಜಿ.ಸಿ, ಉನ್ನತ ಶಿಕ್ಷಣ ಇಲಾಖೆ, ಸರ್ಕಾರ ಮತ್ತು ಇತರ ಏಜೆನ್ಸಿಗಳಿಂದ ಬಂದ ಪತ್ರಗಳು ಅಧಿಸೂಚನೆ ಮೆನುವಿನಡಿಯಲ್ಲಿ ದೊರೆಯುತ್ತವೆ.
ವಿಶ್ವವಿದ್ಯಾಲಯದ ಸುತ್ತೋಲೆಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶ್ವವಿದ್ಯಾಲಯದ ಅಧಿಸೂಚನೆಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷಾ ವಿಭಾಗದಿಂದ ಹೊರಡಿಸಿದ ಸುತ್ತೋಲೆ ಮತ್ತು ಅಧಿಸೂಚನೆಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರ ಅಕ್ಟೊಬರ್ 12,2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಮೂಲ ಉದ್ದೇಶ. ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿ ಆರ್ ಟಿಐ ಕಾಯಿದೆ ಅನ್ವಯವಾಗುತ್ತದೆ. ಮಾಹಿತಿ ಹಕ್ಕು ಕಾಯಿದೆ 2005 ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರೀಕರ ಮೂಲಭೂತ ಹಕ್ಕಾಗಿದೆ.
ಆಂತರಿಕ ಗುಣಮಟ್ಟ ದೃಢಗೊಳಿಸುವ ಅಂಗಸಂಸ್ಥೆಯು (ಐಕ್ಯೂಎಸಿ), ಮಾನ್ಯತೆ ನಂತರ ವಿಶ್ವವಿದ್ಯಾಲಯದ ಗುಣಮಟ್ಟವನ್ನು ಉಳಿಸಿಕೊಳ್ಳುವ ಬಗ್ಗೆ ಕೆಲಸ ಮಾಡುತ್ತದೆ. ಗುಣಮಟ್ಟದ ವರ್ಧನೆಯು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಐಕ್ಯೂಎಸಿಯು ಸಂಸ್ಥೆಯ ಒಂದು ಭಾಗವಾಗಿ ಪರಿಣಮಿಸುತ್ತದೆ ಮತ್ತು ಇದು ಗುಣಮಟ್ಟ ವರ್ಧನೆಯ ಮತ್ತು ಪೋಷಣೆಯ ಗುರಿಗಳನ್ನು ಅರಿತುಕೊಳ್ಳುವ ಕಡೆಗೆ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಗಳ ನಿರ್ವಹಣೆಯಲ್ಲಿ ಜಾಗೃತ, ಸ್ಥಿರ ಮತ್ತು ವೇಗವರ್ಧಕ ಸುಧಾರಣೆಗೆ ಒಂದು ವ್ಯವಸ್ಥೆಯನ್ನು ಬಳಕೆಗೆ ತರುವುದು ಐಕ್ಯೂಎಸಿಯ ಮುಖ್ಯ ಕೆಲಸವಾಗಿರುತ್ತದೆ.
ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕ ಕೆಲಸಕ್ಕಾಗಿ ಅವಕಾಶ ಕಲ್ಪಿಸುವ ಕಾರ್ಯವು ಶೈಕ್ಷಣಿಕ ವರ್ಷ ಪೂರ್ತಿ ಜುಲೈ ಕೊನೆಯ ವಾರದಿಂದ ಮಾರ್ಚ್ ವರೆಗೆ ನಡೆಯುತ್ತದೆ. ಈ ವಿಷಯದಲ್ಲಿ ಪೂರ್ವ-ಉದ್ಯೊಗ ಮಾತುಕತೆಗಳನ್ನು ಕೂಡ ನಡೆಸಲಾಗುತ್ತದೆ.ಉದ್ಯೋಗದ ಪ್ರಸ್ತಾಪ, ಸಂದರ್ಶನದ ದಿನಾಂಕಗಳು, ಅಭ್ಯರ್ಥಿಗಳ ಆಯ್ಕೆ ಇತ್ಯಾದಿ ಮಾಹಿತಿಗಳನ್ನು ತರಬೇತಿ ಮತ್ತು ಉದ್ಯೋಗ ಕಚೇರಿ ಮೂಲಕ ಪ್ರಕಟಿಸಲಾಗುತ್ತದೆ.
ಯು.ಜಿ.ಸಿ.ಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಆದುದರಿಂದ ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿ ವರ್ಗದವರು ಎಸ್ಸಿ / ಎಸ್ಟಿ / ಒಬಿಸಿ ಸಿಬ್ಬಂದಿ ಅಥವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ತರದ ಜಾತಿ ಆಧಾರಿತ ತಾರತಮ್ಯದ ಕಾರ್ಯದಿಂದ ದೂರವಿರಿರುವಂತೆ ಸೂಚಿಸಲಾಗಿದೆ. ಮತ್ತು ವಿಶ್ವವಿದ್ಯಾಲಯ ಹಾಗು ಕಾಲೇಜುಗಳು ತಮ್ಮ ಸಿಬ್ಬಂದಿಗಳು ಯಾವುದೇ ಜಾತಿ ಆಧಾರಿತ ತಾರತಮ್ಯದ ಕಾರ್ಯದಲ್ಲಿ ತೊಡಗದಂತೆ ಎಚ್ಚರಿಕೆ ವಹಿಸಬೇಕು. ಅಂತಹ ಯಾವುದೇ ಘಟನೆಗಳು ಅಧಿಕಾರಿಗಳ ಗಮನಕ್ಕೆ ಬಂದರೆ ಅಂಥವರ ಮೇಲೆ ಕ್ರಮಕೈಗೊಳ್ಳಬೇಕು. ಈನಿಟ್ಟಿನಲ್ಲಿ ಯಾವುದೇ ಸಿಬ್ಬಂದಿ ಅಥವ ವಿದ್ಯಾರ್ಥಿ ಜಾತಿ ಆಧಾರಿತ ತಾರತಮ್ಯದ ತೊಂದರೆಗೆ ಒಳಗಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬಹುದು.

ಡಾ. ವೇಣುಗೋಪಾಲ್ ಕೆ.ಆರ್.
ಪ್ರೊಫೈಲ್