Soc-work-Dept Photo

ವಿಭಾಗದ ಕುರಿತು:

ಹಿನ್ನೆಲೆ: ಸಮಾಜಕಾರ್ಯ ವಿಭಾಗ ರಾಷ್ಟ್ರೀಯ ಸಮಾಜ ವಿಜ್ಞಾನಗಳ ಸಂಸ್ಥೆಯಿಂದ ಬಳುವಳಿಯಾಗಿ ಪಡೆದಿರುವ ಆಸ್ತಿ. ಕರ್ನಾಟಕ ಸರ್ಕಾರ ರಾಷ್ಟ್ರೀಯ ಸಮಾಜ ವಿಜ್ಞಾನಗಳ ಸಂಸ್ಥೆಯ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಂತರ ಅದರ ಉಸ್ತುವಾರಿಯನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿತು. ಬೆಂಗಳೂರು ವಿಶ್ವವಿದ್ಯಾಲಯ 1973 ರಲ್ಲಿ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಎಸ್.ಡಬ್ಲ್ಯೂ) ಆರಂಭಿಸಿತು. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಕ್ಕೆ ಒಳಪಡುವ ಸುಮಾರು 08 ಸಂಯೋಜಿತ ಕಾಲೇಜುಗಳಲ್ಲಿ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬೋಧಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆಯಾದ ನಂತರ ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಅಡಿಯಲ್ಲಿ ಸ್ನಾತಕೋತ್ತರ ಕೇಂದ್ರ, ರಾಮನಗರ ಹಾಗೂ ಒಟ್ಟು ಸಂಯೋಜಿತ ಕಾಲೇಜುಗಳು ಎಂ.ಎಸ್.ಡಬ್ಲ್ಯೂ ವಿಭಾಗವನ್ನು ಹೊಂದಿವೆ. ಜೊತೆಗೆ ಸಮಾಜಕಾರ್ಯ ವಿಭಾಗದಲ್ಲಿ ಪಿಎಚ್.ಡಿ ಕಾರ್ಯಕ್ರಮವನ್ನೂ ಹೊಂದಿದೆ. ವ್ಯಕ್ತಿಯ ಘನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮೌಲ್ಯಗಳನ್ನೊಳಗೊಂಡ ವಾತಾವರಣವನ್ನು ನಿರ್ಮಿಸಿಸುವ ಮುಖ್ಯ ಉದ್ದೇಶವನ್ನು ಹೊಂದಿರುವ  ಸಮಾಜಕಾರ್ಯ ವಿಭಾಗವು, ಸಮಾನತೆ, ಶಾಂತಿ ಮತ್ತು ಸಹಬಾಳ್ವೆಯನ್ನು ವೃದ್ಧಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜದ ಅಂಚಿಗೆ ದೂಡಲ್ಪಟ್ಟವರು ಹಾಗೂ ತುಳಿತಕ್ಕೊಳಪಟ್ಟ ಜನಾಂಗಗಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ಮತ್ತು ತರಭೇತಿಯನ್ನು ನೀಡುತ್ತಿದೆ.

ವಿಭಾಗದ  ಅಧ್ಯಕ್ಷರು:  ಪ್ರೊ. ಕೋದಂಡರಾಮ 

ಸಂಪರ್ಕ ವಿವರಗಳು
 
ಸಮಾಜಕಾರ್ಯ ವಿಭಾಗ, ಜ್ಞಾನಭಾರತಿ ಆವರಣ,
ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
 
ದೂರವಾಣಿ:    080 – 22941761
ಮಿಂಚಂಚೆ:      mswbub@gmail.com

 

ಲಭ್ಯವಿರುವ ಕೋರ್ಸ - ಸ್ನಾತಕೋತ್ತರ ಸಮಾಜಕಾರ್ಯ - ಎಂ.ಎಸ್.ಡಬ್ಲ್ಯೂ ಮತ್ತು ಪಿಎಚ್.ಡಿ.

ಕೋರ್ಸಿನ ಸ್ವರೂಪ - ಎರಡು ಶೈಕ್ಷಣಿಕ ವರ್ಷಗಳ ನಾಲ್ಕು ಸೆಮಿಸ್ಟರ್‍ಗಳ ಅವಧಿಯಲ್ಲಿ ಸದರಿ ಕೋರ್ಸು ಪೂರ್ಣಗೊಳ್ಳುವುದು. ಸಿ.ಬಿ.ಸಿ.ಎಸ್ ಪಠ್ಯಕ್ರಮ ಹೊಂದಿದ್ದು, ಆಂಗ್ಲ ಮತ್ತು ಕನ್ನಡ ಭಾಷಾ ಮಾಧ್ಯಮಗಳಲ್ಲಿ ಬೋಧಿಸಲಾಗುವುದು. ತರಗತಿ ಹಾಗೂ ಕ್ಷೇತ್ರಕಾರ್ಯಗಳು ಸದರಿ ಕೋರ್ಸಿನ ಜೀವಾಳವಾಗಿದ್ದು, ಎರಡೂ ವಿಭಾಗಗಳಲ್ಲಿ ಕನಿಷ್ಟ 75 ಪ್ರತಿಶತ ಹಾಜರಾತಿಯನ್ನು ಹೊಂದಿದ್ದರೆ ಮಾತ್ರ ಪರೀಕ್ಷೆಗೆ ಮಾನ್ಯ ಮಾಡಲಾಗುವುದು. ಒಂದು ವೇಳೆ ಯಾವುದೇ ವಿದ್ಯಾರ್ಥಿ 75 ಪ್ರತಿಶತ ಹಾಜರಾತಿಯನ್ನು ಪಡೆಯದಿದ್ದರೆ ಪುನಃ ಅದೇ ಸೆಮಿಸ್ಟರ್‍ನಲ್ಲಿ ಅಧ್ಯಯನ ಅಭ್ಯಸಿಸಿ, ಪರೀಕ್ಷೆ ತೆಗೆದುಕೊಳ್ಳಬಹುದು.

ಅವಧಿ - ಎರಡು ವರ್ಷಗಳು (ನಾಲ್ಕು ಸೆಮಿಸ್ಟರ್)

ಲಭ್ಯವಿರುವ ಸೀಟುಗಳು - 29+3+3+1+1+17+10=64 

(ಸಾಮಾನ್ಯ+ಆಟೋನಮಸ್+ಎಚ್.ಕೆ+ಓಯುಕೆ+ಓಕೆ+ಸೂಪರ್‍ನ್ಯೂಮೆರೆರಿ+ ಪೇಮೆಂಟ್)

ಅರ್ಹತೆ:

ಕನಿಷ್ಟ 50 ಪ್ರತಿಶತ (ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ 45%) ಅಂಕಗಳೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯ ಅಥವಾ ಭಾರತದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಎ ಅಥವಾ ಬಿ.ಎಸ್.ಡಬ್ಲ್ಯೂ ಪದವಿ ಪಡೆದವರು ಸದರಿ ಕೋರ್ಸಿಗೆ ದಾಖಲಾಗಲು ಅರ್ಹರಾಗಿರುತ್ತಾರೆ. ಕೇವಲ ಬಿ.ಎ ಅಥವಾ ಬಿ.ಎಸ್.ಡಬ್ಲ್ಯೂ ಪದವಿ ಪಡೆದವರನ್ನು ಮಾತ್ರ ಸದರಿ ಕೋರ್ಸಿಗೆ ದಾಖಲಾಗಲು ಅರ್ಹರಾಗಿರುತ್ತಾರೆ. 

ಕ್ರಮ ಸಂಖ್ಯೆಉಪನ್ಯಾಸಕರ ಹೆಸರುಶೈಕ್ಷಣಿಕ ಅರ್ಹತೆಪದನಾಮ / ಹುದ್ದೆವಿಶೇಷತೆ ಅಥವಾ ತಜ್ಞತೆ ಹೊಂದಿದ ಕ್ಷೇತ್ರಪ್ರೊಫೈಲ್ ವೀಕ್ಷಿಸಿ
1ಡಾ. ಕೋದಂಡರಾಮ     ಎಂ.ಎಸ್.ಡಬ್ಲ್ಯೂ. ಪಿಎಚ್.ಡಿಅಧ್ಯಕ್ಷರು ಮತ್ತು ಪ್ರೊಪೆಸರ್
ಮಾನವ ಸಂಪನ್ಮೂಲ ನಿರ್ವಹಣೆಪ್ರೊಫೈಲ್