Psychology

ಚರಿತ್ರೆ:
·
ಮನೋವಿಜ್ಞಾನ ವಿಭಾಗವು ೧೯೭೪ ರಲ್ಲಿ ನೈದಾನಿಕ ಮತ್ತು ಕೈಗಾರಿಕಾ ಮನೋವಿಜ್ಞಾನವೆಂಬ ಎರಡು ಐಚ್ಚಿಕ ವಿಷಯಗಳನ್ನು ನೀಡುವುದರ ಮೂಲಕ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಕಲಾ ನಿಖಾಯದಲ್ಲಿದ್ದ ವಿಭಾಗವು ೧೯೯೪ರಲ್ಲಿ ವಿಜ್ಞಾನ ನಿಖಾಯಕ್ಕೆ ಸೇರ್ಪಡೆಯಾಯಿತು.  ಇದೇ ಶೈಕ್ಷಣಿಕ ವರ್ಷದಲ್ಲಿ ಶಿಶು ಮನೋವಿಜ್ಞಾನವೆಂಬ ಮೂರನೇ ಐಚ್ಚಿಕ ವಿಷಯವನ್ನು ಸೇರಿಸಲಾಯಿತು.  ಶೈಕ್ಷಣಿಕ ವರ್ಷ ೨೦೦೦ ರಲ್ಲಿ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನು ಆಪ್ತ ಸಲಹಾ ಮನೋವಿಜ್ಞಾನ ವಿಷಯದಲ್ಲಿ ಪ್ರಾರಂಭಿಸಲಾಯಿತು.  ೨೦೦೩ರಲ್ಲಿ ಮನೋವಿಜ್ಞಾನ ಮತ್ತು ಆಪ್ತಸಲಹೆ ಮನೋವಿಜ್ಞಾನದಲ್ಲಿ  ಸ್ನಾತಕೋತ್ತರ ಪದವಿಗಳನ್ನು ಇತರ ಕಾಲೇಜುಗಳಲ್ಲಿ ನೀಡಲು ಅನುಮತಿ ನೀಡಲಾಯಿತು.  ಪ್ರಸ್ತುತ,  ವಿ.ವಿ.ಯ ವಿಭಜನೆ ಆದನಂತರ,  ಎರಡು ಕಾಲೇಜುಗಳಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡಲಾಗುತ್ತಿದೆ.

೨೦೦೬ರಲ್ಲಿ ವಿಭಾಗವು ತನ್ನದೇ ಆದ ವಿಶಿಷ್ಟ ಕಟ್ಟಡವನ್ನು ಹೊಂದಿದೆ. 

ಇಲಾಖೆಯ ಮುಖ್ಯಸ್ಥರು:   ಡಾ. ಎಚ್. ಎಸ್. ಅಶೋಕ್

ಅವಧಿ: ೮.೨.೨೦೧೭ ರಿಂದ ೭.೨.೨೦೧೯

ಸಂಪರ್ಕ ವಿವರಗಳು
ದೂರವಾಣಿ: 080 22961501

ಲಭ್ಯವಿರುವ ಕೋರ್ಸ್(ವಿಷಯಗಳ) ವಿವರ:

ಅ)  ಎಂ.ಎಸ್ಸಿ ಮನಃಶಾಸ್ತ್ರ
ಆ)  ಎಂ.ಎಸ್ಸಿ ಮನೋವೈಜ್ಞಾನಿಕ  ಆಪ್ತ ಸಲಹೆ (ಸ್ವಂತ ಹಣದಲ್ಲಿ ತೊಡಗಿಸುವ ಕೋರ್ಸು)
ಇ)  ಪಿ.ಜಿ. ಡಿಪ್ಲೊಮಾ ಮನೋವೈಜ್ಞಾನಿಕ  ಆಪ್ತ ಸಲಹೆ (ಪಿ.ಜಿ.ಡಿ.ಪಿ.ಸಿ)

ಕೋರ್ಸಿನ ಸ್ವರೂಪ:

ಅ) & ) ಸೆಮಿಸ್ಟರ್ ಪದ್ಧತಿ
ಇ)  ವಾರ್ಷಿಕ ಪದ್ಧತಿ

ಅವಧಿ :

ಅ) & ಆ)   ನಾಲ್ಕು ಸೆಮಿಸ್ಟರ್ (ಎರಡು ವರ್ಷಗಳು)
ಇ)    ಒಂದು ವರ್ಷ

ಲಭ್ಯವಿರುವ ಸೀಟುಗಳು:

ಅ)  45 + ಪೇಮೆಂಟ್ ಸೀಟ್ ಗಳು -8
ಆ)  20
ಇ)  40

ಅರ್ಹತೆ:

ಅ) ಎಂ.ಎಸ್ಸಿ ಮನಃಶಾಸ್ತ್ರ

  ಅಭ್ಯರ್ಥಿಯು ಪದವಿ ಪರೀಕ್ಷೆಯಲ್ಲಿ ಶೇ. ೪೦% ರಷ್ಟು ಅಂಕಗಳನ್ನು ಐಚ್ಚಿಕ ವಿಷಯಗಳಲ್ಲಿ ಗಳಿಸಿರಬೇಳು, ಮನಃಶಾಸ್ತ್ರವನ್ನು ಒಂದು ಐಚ್ಚಿಕ ವಿಷಯವಾಗಿ ತೆಗೆದುಕೊಂಡಿದ್ದು ಅದರಲ್ಲಿ ೫೦% ಅಂಕಗಳನ್ನು ಗಳಿಸಿರಬೇಕು.

)    ಎಂ.ಎಸ್ಸಿ ಮನೋವೈಜ್ಞಾನಿಕ  ಆಪ್ತ ಸಲಹೆ:

  ಅಭ್ಯರ್ಥಿಯು ಶೇ. ೫೦% ರಷ್ಟು ಅಂಕಗಳನ್ನು ಬಿ.ಎ./ಬಿ.ಎಸ್ಸಿ ಪದವಿಯಲ್ಲಿ ಪಡೆದಿದ್ದು, ಕನಿಷ್ಠ ಒಂದು ವಿಷಯವಾಗಿ ಮನಃಶಾಸ್ತ್ರವನ್ನು ಓದಿರಬೇಕು ಅಥವಾ ಬಿ.ಎಡ್ ಅಥವಾ ಮನಃಶಾಸ್ತ್ರ ಸಮಾಲೋಚನೆಯಲ್ಲಿ ಸ್ನಾತಕೋತರ ಡಿಪ್ಲೊಮಾದಲ್ಲಿ ಸರಾಸರಿ ಶೇ. ೫೦% ಪಡೆದಿರಬೇಕು.

)    ಪಿ.ಜಿ. ಡಿಪ್ಲೊಮಾ ಮನೋವೈಜ್ಞಾನಿಕ  ಆಪ್ತ ಸಲಹೆ:

     ಅಭ್ಯರ್ಥಿಯು ಬೆಂಗಳೂರು ವಿಶ್ವವಿದ್ಯಾಲಯದ ಅಥವಾ ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಅಭ್ಯಾಸ ಮಾಡಿ, ಕೆಳಗೆ ನಮೂದಿಸಲಾದ ಐಚ್ಚಿಕ ವಿಷಯಗಳಲ್ಲಿ ಯಾವುದಾದರೊಂದು ವಿಷಯವನ್ನು ತೆಗೆದುಕೊಂಡು ೫೦ % ರಷ್ಟು ಅಂಕಗಳನ್ನು (ಭಾಷೆಗಳನ್ನು ಸೇರಿಸಿ) ಪಡೆದಿರಬೇಕು. ಮನಃಶಸ್ತ್ರ/ ಸಮಾಜಶಾಸ್ತ್ರ/ ಸಮಾಜಕಾರ್ಯ ಗೃಹ ವಿಜ್ಞಾನ/ ಮಾನವ ವಿಕಾಸ (ಮ್ಯಾನೇಜ್ಮೆಂಟ್) ಅಥವಾ ಬಿ.ಎಡ್ ಅಥವಾ ರಿಹ್ಯಾಬಿಲಿಟೇಷನ್ ವಿಜ್ಞಾನ, ವೈದ್ಯ (ಯಾವುದೇ ವೈದ್ಯ ನಿಕಾಯ ಅಲೋಪತಿ/ ಆಯುರ್ವೇದ/ ಯುನಾನಿ ) ಪ್ಯಾರಾಮೆಡಿಕಲ್ ರಿಹ್ಯಾಬಿಲಿಟೇಷನ್ ನರ್ಸ್, ಫಿಸಿಯೋಥೆರಪಿಸ್ಟ್ ಅಕ್ಕ್ಯುಪೇಶನಲ್ ಥೆರಪಿಸ್ಟ್, ಆಡಿಯೋಲಾಜಿಸ್ಟ್ ವಿಷಯದಲ್ಲಿ ಸ್ನಾತಕ ಪದವಿ.

ಕ್ರ ಸಂಉಪನ್ಯಾಸಕರ ಹೆಸರುವಿದ್ಯಾರ್ಹತೆಪದನಾಮಪರಿಣಿತಿಪ್ರೊಫೈಲ್ ವೀಕ್ಷಿಸಿ
1ಡಾ. ಎಚ್.ಎಸ್. ಅಶೋಕ್ಎಂ ಏ.  ಪಿ. ಎಚ್ ಡಿ.ಪ್ರಾಧ್ಯಾಪಕರುಕೈಗಾರಿಕಾ  ಮನೋವಿಜ್ಞಾನಪ್ರೊಫೈಲ್
2ಡಾ. ಎಂ. ಶ್ರೀನಿವಾಸ್.ಎಂ. ಎ,   ಎಂ. ಫಿಲ್., ಪಿ.ಎಚ್.ಡಿ.ಸಹಾಯಕ ಪ್ರಾಧ್ಯಾಪಕರುಕೈಗಾರಿಕಾ ಮನೋವಿಜ್ಞಾನ, ಕ್ರೀಡಾಮನೋವಿಜ್ಞಾನಪ್ರೊಫೈಲ್