Performing Arts

ವಿಭಾಗದ ಇತಿಹಾಸ

ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗವನ್ನು ನಾಡೋಜಾ ಡಾ. ಹೆಚ್.ನರಸಿಂಹಯ್ಯನವರು 1973 ರಲ್ಲಿ ಶೈಕ್ಷಣಿಕ ಆಯಾಮದ ಮೂಲಕ ನೃತ್ಯ, ನಾಟಕ ಮತ್ತು ಸಂಗೀತ ಕ್ಷೇತ್ರಗಳಿಗೆ ಸ್ಪಷ್ಟ ದೃಷ್ಟಿ ಮತ್ತು ಗುರಿ ಯೊಂದಿಗೆ ಸ್ಥಾಪಿಸಿದರು. ಮೂರುವರೆ ದಶಕದ ಪಯಣದ ಸಮಯದಲ್ಲಿ ವಿಭಾಗವು ಹಲವು ಪ್ರದರ್ಶನಾಕಾರರನ್ನು ಹೊರತಂದಿದ್ದು ಅವರುಗಳು ನೃತ್ಯ, ನಾಟಕ ಮತ್ತು ಸಂಗೀತದ ವೇದಿಕೆಯಲ್ಲಿ ತಮ್ಮನು ತಾವು ಗುರುತಿಸಿಕೊಂಡಿದ್ದು ವಿಭಾಗಕ್ಕೆ ಹೆಮ್ಮೆ ತಂದು ತಮ್ಮನ್ನು ತಾವು ತೃಪ್ತಿ ಪಡಿಸಿಕೊಂಡಿದ್ದಾರೆ. ಪ್ರದರ್ಶನ ಕಲಾ ವಿಭಾಗವು ಪೂರ್ಣ ಪ್ರಮಾಣದ ಸ್ನಾತಕೋತ್ತರ ಪದವಿ ಕೇಂದ್ರವಾಗಿದ್ದು ನೃತ್ಯ, ನಾಟಕ ಮತ್ತು ಸಂಗೀತ ದಲ್ಲಿ ಮಾಸ್ಟರ್ ಡಿಗ್ರಿ ಕೋರ್ಸ್ಗಳನ್ನು ಒದಗಿಸುತ್ತದೆ. ಮೇಲಿನ ಪ್ರತಿಯೊಂದು ವಿಷಯಗಳಲ್ಲಿ ಇದು ಎಂ.ಫಿಲ್ ಮತ್ತು ಪಿಹೆಚ್.ಡಿ ಯೋಜನೆಯನ್ನು ಸಹ ಹೊಂದಿರುತ್ತದೆ. ಇಲ್ಲಿಯವರೆಗೆ ವಿಭಾಗವು ಸಂಗೀತದಲ್ಲಿ - 30 ಪಿಹೆಚ್.ಡಿ, ನಾಟಕದಲ್ಲಿ – 7 ಪಿಹೆಚ್.ಡಿ, ಮತ್ತು ನೃತ್ಯದಲ್ಲಿ- 8 ಪಿಹೆಚ್.ಡಿ ಪದವಿಯನ್ನು ನೀಡಿರುತ್ತಾರೆ . ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಪ್ರದರ್ಶನ ಕಲೆಯ ಮೂರು ವಿಭಾಗಗಳಾದ ನೃತ್ಯ, ನಾಟಕ ಮತ್ತು ಸಂಗೀತ ಗಳಲ್ಲಿ ಸ್ನಾತಕೊತ್ತರ ಪದವಿ ಶಿಕ್ಷಣ ಹೊಂದಿರುವ ಏಕೈಕ ವಿಶ್ವವಿದ್ಯಾಲಯವಾಗಿದೆ. ಸಿದ್ಧಾಂತದ ಗಣನೀಯ ಹಿನ್ನಲೆ ಹೊಂದಿರುವ ಪ್ರಾಯೋಗಿಕ ಅಂಶಗಳ ಮೇಲೆ ಮುಖ್ಯ ಒತ್ತು ನೀಡಲಾಗಿದೆ. ಪ್ರತಿ ವಿದ್ಯಾರ್ಥಿಯ ತಮ್ಮ ವೈಯುಕ್ತಿಕ ಪ್ರಾಜೆಕ್ಟ್, ಸೆಮಿನಾರ್ , ನಾಟಕ ನಿರ್ಮಾಣ, ಸಂಗೀತ ಮತ್ತು ನೃತ್ಯಗಳ ತರಗತಿ ಕಛೇರಿಗಳಲ್ಲಿ ಭಾಗವಹಿಸುವಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.

ಅಧ್ಯಕ್ಷರು :  ಡಾ. ಎಸ್.ಎನ್. ಸುಶೀಲ

ಅಧಿಕಾರಾವಧಿ : 28.03.2019 ರಿಂದ 27.03.2021

ನಮ್ಮನ್ನು ಸಂಪರ್ಕಿಸಿ :

ಪ್ರದರ್ಶನ ಕಲಾ ವಿಭಾಗ (ಡಿಡಿಎಮ್)
ಕಲಾ ಭವನ
ಜ್ಞಾನಭಾರತಿ ಆವರಣ
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು – 560 056

ದೂರವಾಣಿ: 080-22961701

ಫ್ಯಾಕ್ಸ್ : 080-22211792

ಇಮೇಲ್ ಐಡಿ: ddmbub@gmail.com;  performingarts@bub.ernet.in

ಅ.  ಒದಗಿಸಲಾದ ಕೋರ್ಸ್ ಗಳು:

೧. ಸಂಗೀತ ಎಂ.ಎ (ಗಾಯನ ಮತ್ತು ವೀಣೆ, ವಯೋಲಿನ್ ಮತ್ತು ಕೊಳಲು )
೨. ನೃತ್ಯ ಎಂ.ಎ
೩. ನಾಟಕ ಎಂ.ಎ
೪. ಮೃದಂಗಮ್ ಎಂ.ಎ

ಆ. ಕೋರ್ಸಿನ ಸ್ವರೂಪ -   ಸೆಮಿಸ್ಟರ್ ವ್ಯವಸ್ಥೆ

ಇ. ಅವಧಿ - 4 ಸೆಮಿಸ್ಟ್ರರ್ ( 2 ವರ್ಷಗಳು)

ಈ. ತೆಗೆದುಕೊಳ್ಳುವ ಸೀಟುಗಳು

೧. 16
೨. 16
೩. 22:
೪. 12

ಉ. ಅರ್ಹತೆ

ಅ. ಸಂಗೀತದಲ್ಲಿ ಎಂ.ಎ (ಗಾಯನ / ವಾದ್ಯ)

ಪದವಿಯ ಜೊತೆಯಲ್ಲಿ ಸಂಗೀತದ ಗಾಯನ/ ವಾದ್ಯ ಕ್ಕೆ ಸಂಬಂಧಿಸಿದಂತೆ ಯಾವುದಾದರೂ ಒಂದರ ಐಚ್ಛಿಕ ವಿಷಯದಲ್ಲಿ ಗರಿಷ್ಠ 50% ಅಂಕಗಳನ್ನು ಗಳಿಸಿರಬೇಕು. ಹಾಗೆಯೇ ಶ್ರೇಷ್ಠತೆಯ ಆಧಾರದ ಮೇಲೆ ಅರ್ಜಿದಾರನ್ನು ಆಯ್ಕೆ ಮಾಡಲಾಗುವುದು. ಅಥವಾ ಪದವೀದಧರರು 50% ರಷ್ಟು ಅಂಕಗಳನ್ನು ಸೆಕೆಂಡರಿ ಎಜುಕೇಷನ್ ಬೋರ್ಡ್ ಆಫ್ ಕರ್ನಾಟಕದವರು ನಡೆಸುವ ಸೀನಿಯರ್ ಗ್ರೇಡ್ ಪರೀಕ್ಷೆಯಾದ ಸಂಗೀತ ಗಾಯನ / ವಾದ್ಯದ ಪರೀಕ್ಷೆಯಲ್ಲಿ ಪಡೆದಿರಬೇಕು. ಅಥವಾ ಪದವೀಧರರು 50% ರಷ್ಟು ಅಂಕಗಳನ್ನು ಸ್ನಾತಕೋತ್ತರ ಡಿಪ್ಲೊಮೋದಲ್ಲಿ ಗಳಿಸಿರಬೇಕು. ಅಥವಾ ಯಾವುದೇ ಮಾನ್ಯತೆ ಪಡೆದ ರಾಜ್ಯ ಅಥವಾ ಹೊರರಾಜ್ಯದ ವಿಶ್ವವಿದ್ಯಾಲಯಗಳ ಅಥವಾ ಕೇಂದ್ರೀಯ ಸಂಸ್ಥೆ / ವಿಶ್ವವಿದ್ಯಾಲಯಗಳು ನಡೆಸಿದ 2 ವರ್ಷಗಳ ಡಿಪ್ಲೊಮೊ ಅಥವಾ  4 ವರ್ಷಗಳ ಗಾಯನ / ವಾದ್ಯ / ಸಂಗೀತ ಸರ್ಟಿಫಿಕೇಟು ಕೋರ್ಸಿನಲ್ಲಿ ಪಾಸಾಗಿರಬೇಕು

ಆ.  ನೃತ್ಯದಲ್ಲಿ ಎಂ.ಎ

ಪದವಿಯ ಜೊತೆಯಲ್ಲಿ ನೃತ್ಯವನ್ನು  ಐಚ್ಛಿಕ ವಿಷಯವಾಗಿ ಗರಿಷ್ಠ 50% ಅಂಕಗಳನ್ನು ಗಳಿಸಿರಬೇಕು. ಹಾಗೆಯೇ ಶ್ರೇಷ್ಠತೆಯ ಆಧಾರದ ಮೇಲೆ ಅರ್ಜಿದಾರನ್ನು ಆಯ್ಕೆ ಮಾಡಲಾಗುವುದು. ಅಥವಾ ಪದವೀದಧರರು 50% ರಷ್ಟು ಅಂಕಗಳನ್ನು ನೃತ್ಯದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಸೆಕೆಂಡರಿ ಎಜುಕೇಷನ್ ಬೋರ್ಡ್ ಆಫ್ ಕರ್ನಾಟಕದವರು ನಡೆಸುವ  ಪರೀಕ್ಷೆಯಲ್ಲಿ ಪಡೆದಿರಬೇಕು. ಅಥವಾ ಪದವೀಧರರು 50% ರಷ್ಟು ಅಂಕಗಳನ್ನು ಸ್ನಾತಕೋತ್ತರ ಡಿಪ್ಲೊಮೋದಲ್ಲಿ ಗಳಿಸಿರಬೇಕು. ಅಥವಾ ಯಾವುದೇ ಮಾನ್ಯತೆ ಪಡೆದ ರಾಜ್ಯ ಅಥವಾ ಹೊರರಾಜ್ಯದ ವಿಶ್ವವಿದ್ಯಾಲಯಗಳ ಅಥವಾ ಕೇಂದ್ರೀಯ ಸಂಸ್ಥೆ / ವಿಶ್ವವಿದ್ಯಾಲಯಗಳು ನಡೆಸಿದ 2 ವರ್ಷಗಳ ಡಿಪ್ಲೊಮೊ ಅಥವಾ 4 ವರ್ಷಗಳ  ಸರ್ಟಿಫಿಕೇಟು ಕೋರ್ಸಿನಲ್ಲಿ ಪಾಸಾಗಿರಬೇಕು

ಯಾವುದೇ ಪದವಿಯೊಂದಿಗೆ ಭರತನಾಟ್ಯಂ ನಲ್ಲಿ ಸೀನಿಯರ್ ಪರೀಕ್ಷೆ ಅಥವಾ ಭರತನಾಟ್ಯಂ ನ ಯಾವುದೇ ಸರ್ಟಿಫಿಕೇಟ್ ಕೋರ್ಸ್ ಅಥವಾ ದೂರದರ್ಶನ ದರ್ಜೆ ಅಥವಾ ಡಿಫ್ಲೊಮೊ ಅಥವಾ ಹಿರಿಯ ನೃತ್ಯಪಟುವಿನಿಂದ ಐದು ವರ್ಷಗಳ ಕಲಿಕೆಯ ಪ್ರಮಾಣಪತ್ರ  ಹೊಂದಿರಬೇಕು

ಇ.   ನಾಟಕದಲ್ಲಿ ಎಂ.ಎ

ಪದವೀಧರರು ನಾಟಕ / ನೃತ್ಯ / ಅಸ್ಂಗೀತ ಯಾವುದಾದರೂ ಒಂದು ವಿಷಯದಲ್ಲಿ ಗರಿಷ್ಠ 50%   ಅಂಕಗಳನ್ನು ಗಳಿಸಿರಬೇಕು. ಅಥವಾ ಯಾವುದೇ ಪದವಿಯ ಜೊತೆಗೆ ಡಿಪ್ಲೊಮೋ / ಸರ್ಟಿಪೀಕೇಟ್ ಕೋರ್ಸ್ ಪರೀಕ್ಷೆಯನ್ನು ನಾಟಕ / ಚಲನಚಿತ್ರದ ನಟನೆಯನ್ನು ಕರ್ನಾಟಕ ಸರ್ಕಾರ, ಸಾರ್ವಜನಿಕ ಮಾಹಿತಿ ವಿಭಾಗ /ಯಾವುದೇ ಸರ್ಕಾರದಿಂದ / ಕೇಂದ್ರ ಸರ್ಕಾರದಿಂದ ತೆಗೆದುಕೊಂಡಿರಬೇಕು. ಅಥವಾ ಯಾವುದೇ ಪದವಿಯ ಜೊತೆಗೆ ಬೆಂಗಳುರು ವಿಶ್ವವಿದ್ಯಾಲಯ ಸಂಯೋಜನೆ ಮಾಡಿಕೊಂಡಿರುವ ಜನಪದ ಲೋಕ / ಅಭಿನಯ ತರಂಗ (ಪ್ರಖ್ಯಾತಿ ಗಳಿಸಿರುವ ನಾಟಕ ಸಂಸ್ಥೆ, ಬೆಂಗಳೂರು) ಕರ್ನಾಟಕ ನಾಟಕ ಅಕಾಡೆಮಿ ಅಥವಾ ಎನ್.ಎಸ್.ಡಿ ನಡೆಸುವ ನಾಟಕದ ಕಾರ್ಯಾಗಾರ ಸರ್ಟಿಫಿಕೇಟ್ ಕೋರ್ಸಿನಲ್ಲಿ ಪಾಸಾಗಿರಬೇಕು

ಈ. ಮೃದಂಗದಲ್ಲಿ ಎಂ.ಎ

ಸಂಗೀತದ ಪದವಿಯ ಜೊತೆಗೆ ಮೃದಂಗವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು 50%  ಅಂಕಗಳನ್ನು ಹೊಂದಿರಬೇಕು. ಅಥವಾ ಯಾವುದೇ ಪದವಿಯ ಜೊತೆಗೆ ಕನಿಷ್ಠ 50%  ಅಂಕಗಳನ್ನು ಹಿರಿಯ ಶ್ರೇಣಿ ಮೃದಂಗ ಪರೀಕ್ಷೆಯನ್ನು ಕರ್ನಾಟಕ ಸೆಕೆಂಡರಿ ಎಜುಕೇಷನ್ ಬೋರ್ಡ್, ಕರ್ನಾಟಕ ಸರ್ಕಾರದಿಂದ ನಡೆಸುವ ಪರೀಕ್ಷೆಯಾಗಿರಬೇಕು. ಅಥವಾ ಯಾವುದೇ ಪದವಿ ಜೊತೆಗೆ 50%  ಅಂಕಗಳನ್ನು ಸ್ನಾತಕೋತ್ತರ ಡಿಪ್ಲೊಮೊ ಅಥವಾ ಎರಡು ವರ್ಷಗಳ ಡಿಪ್ಲೊಮೊ ಅಥವಾ ನಾಲ್ಕು ವರ್ಷಗಳ ಸರ್ಟಿಫಿಕೇಟ್ ಕೋರ್ಸ್ ನ ಮೃದಂಗವನ್ನು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ರಾಜ್ಯದ / ಹೊರ ರಾಜ್ಯದ ಅಥವಾ ಕೇಂದ್ರೀಯ ಅಧ್ಯಯನ ಸಂಸ್ಥೆ / ವಿಶ್ವವಿದ್ಯಾಲಯಗಳಲ್ಲಿ ತೇರ್ಗಡೆಯಾಗಿರಬೇಕು.

ಯಾವುದೇ ಪದವಿಯೊಂದಿಗೆ ಸಂಗೀತದಲ್ಲಿ ಸರ್ಟಿಫಿಕೇಟ್ ಕೋರ್ಸ್ ಅಥವಾ ಆಲ್ ಇಂಡಿಯಾ ರೇಡಿಯೋ / ದೂರದರ್ಶನ್ ದರ್ಜೆ ಅಥವಾ ಸಂಗೀತದಲ್ಲಿ ಡಿಪ್ಲೊಮೋ ಅಥವಾ ಯಾವುದೇ ಹಿರಿಯ ಸಂಗೀತಗಾರರಿಂದ ಐದು ವರ್ಷಗಳ ಕಲಿಕೆಯ ಪ್ರಮಾಣಪತ್ರ  ಹೊಂದಿರಬೇಕು..

ಕ್ರ. ಸಂ  ಹೆಸರು  ವಿದ್ಯಾರ್ಹತೆ  ಪದನಾಮ  ವಿಶೇಷ ಪರಿಣಿತಿಪ್ರೊಫೈಲ್ ವೀಕ್ಷಿಸಿ
  1  ಡಾ. ನಾಗೇಶ್ ಬೆಟ್ಟಕೋಟೆ  ಎಂ.ಎ, ಪಿಹೆಚ್.ಡಿ  ಪ್ರಾಧ್ಯಾಪಕರು  ನಾಟಕಪ್ರೊಫೈಲ್
  2  ಡಾ. ಕೆ. ರಾಮಕೃಷ್ಣಯ್ಯ  ಎಂ.ಎ, ಪಿಹೆಚ್.ಡಿ  ಪ್ರಾಧ್ಯಾಪಕರು  ನಾಟಕಪ್ರೊಫೈಲ್
  3  ವಿಧೂಷಿ ಡಾ. ಹಂಸಿನಿ ನಾಗೇಂದ್ರ  ಎಂ.ಎ, ಪಿಹೆಚ್.ಡಿ  ಪ್ರಾಧ್ಯಾಪಕರು  ಸಂಗೀತಪ್ರೊಫೈಲ್
  4  ಡಾ. ಎಸ್.ಎನ್ ಸುಶೀಲ   ಎಂ.ಎ, ಪಿಹೆಚ್.ಡಿ  ಪ್ರಾಧ್ಯಾಪಕರು  ಸಂಗೀತಪ್ರೊಫೈಲ್

ನೂತನ ಪ್ರಭಾವ ಚಟುವಟಿಕೆಗಳು:

ವಿಭಾಗವು ಪ್ರದರ್ಶನ ಕಲಾ ಕ್ಷೇತ್ರದಲ್ಲಿ ಆಧುನಿಕ ಪ್ರವೃತ್ತಿಗಳು ಮತ್ತು ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸಿದೆ.  ವಿಭಾಗವು ಕೆಲವು ಪ್ರಮುಖ ಚಟುವಟಿಕೆಗಳಾದ ಶ್ರೀ ಪುರಂದರ – ತ್ಯಾಗರಾಜ ಆರಾಧನಾ , ವಿದ್ಯಾರ್ಥಿಗಳ  ಸಂಗೀತ ಮತ್ತು ನೃತ್ಯಗಳಲ್ಲಿ ವಾರ್ಷಿಕ ನಾಟಕ ರಚನೆ , ಸಂಗೀತ ಮತ್ತು ನೃತ್ಯ ತರಗತಿಯ ಕಛೇರಿಗಳು, ವಿದ್ಯಾರ್ಥಿಗಳಿಂದ ವಿಷಯಾಧಾರಿತ ಪ್ರಸ್ತುತಿ, ಬ್ಯಾಲೆಟ್, ರಂಗೋತ್ಸವ, ಯುವ ರಂಗೋತ್ಸವ, ಚೈತ್ರ ಪಲ್ಲವ ರ ಪ್ರಸ್ತುತಿ. “ ವರ್ಡ್ ಥಿಯೇಟರ್  ಡೇ ” ಸಂಬಂಧಿಸಿದಂತೆ ನಾಟಕವನ್ನು ತಯಾರಿಸುವುದು ಮುಂತಾದವು. ಈ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತ ವೇದಿಕೆಯನ್ನು ಒದಗಿಸಿ ತಮ್ಮ ಪ್ರತಿಭೆಯನ್ನು ಹೊರತರುತ್ತದೆ.

ವಿಧ್ಯಾರ್ಥಿಗಳ ಬರವಣಿಗೆ ಪದ್ದತಿ ಯನ್ನು ಬೆಳೆಸಿ ಸ್ಪೂರ್ತಿಯನ್ನು ನೀಡಲು ವಿಭಾಗವು ತನ್ನದೇ ಆದ ಕಲಾಧ್ವನಿ ಎಂಬ ಮಾಸಿಕ ಪತ್ರಿಕೆ ಹೊಂದಿದೆ. ಇಲ್ಲಿಯವರೆಗೆ ವಿಭಾಗವು ೨೪ ವಿಚಾರಗಳ ಬಗ್ಗೆ ಕಲಾಧ್ವನಿಯಲ್ಲಿ ಹೊರತಂದಿದೆ

ವಿಭಾಗವು ಪ್ರಾರಂಭವಾದಗಿನಿಂದಲೂ ವಿಭಾಗದ ಬಹುಮುಖ ಚಟುವಟಿಕೆಗಳನ್ನು ದಾಖಲಿಸುವ ಕಲಾ ಸಿಂಚನ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದೆ.

ಸಂಶೋಧನೆ ಮತ್ತು ಚಟುವಟಿಕೆಗಳು::

ಯು.ಜಿ.ಸಿ ಗೆ ಅಪ್ಲೈ ಮಾಡಲಾಗಿ ಪಲಿತಾಂಶಗಳನ್ನು ನಿರೀಕ್ಷಿಸುತ್ತಿದೆ. ಸಂಶೋಧನೆ ಮುಂದುವರೆಸಲು  ಜೆ.ಆರ್.ಎಫ್ ಸ್ಕಾಲರ್ಸ್ ಗಳನ್ನು ವಿಭಾಗಕ್ಕೆ ಮಂಜೂರು ಮಾಡಿದೆ

ಭೋಧಕರು ಪೂರ್ಣಗೊಳಿಸಿದ ಸಂಶೋಧನಾ ಕಾರ್ಯ:

ಡಾ.ವಿ.ನಾಗೇಶ್ ಬೆಟ್ಟಕೋಟೆ :   

ಯುಜಿಸಿ ಮೈನರ್ ಪ್ರಾಜೆಕ್ಟ್ ಪೂರ್ಣಗೊಳಿಸಿದ್ದಾರೆ.

ಡಾ. ಎಸ್.ಎನ್. ಸುಶೀಲಾ: 

ಹೆಚ್ ಆರ್ ಡಿ, ನವದೆಹಲಿ ಪ್ರಾಜೆಕ್ಟ್ ವರ್ಕ್ ಪೂರ್ಣಗೊಳಿಸಿದ್ದಾರೆ.

ಡಾ. ಆರ್.ಕೆ ರಾಮಕೃಷ್ಣಯ್ಯ: 

ಅ. ಹವ್ಯಾಸಿ ರಂಗ ಭೂಮಿಯಲ್ಲಿ : ರಂಗತಂಡಗಳ ಕಾಯಕ - ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರದಿಂದ ಪ್ರಾಜೆಕ್ಟ್ ಮಂಜೂರು ಮಾಡಲಾಗಿದೆ

ಆ. ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗಗಳ ಪರಿಕಲ್ಪನೆಯಲ್ಲಿ - ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರದಿಂದ       ಪ್ರಾಜೆಕ್ಟ್ ಮಂಜೂರು ಮಾಡಲಾಗಿದೆ.

ಡಾ. ಹಂಸಿನಿ ನಾಗೇಂದ್ರ :

ಅ. ಕರ್ನಾಟಕ ಸಂಗೀತದ ರಾಗಗಳು” ಎಂಬ ಶೀರ್ಷೆಕೆಯ ಹೆಚ್ ಆರ್ ಡಿ, ನವದೆಹಲಿ ಪ್ರಾಜೆಕ್ಟ್ ವರ್ಕ್ ಪೂರ್ಣಗೊಳಿಸಿದ್ದಾರೆ.

ಆ. ಸಂಗೀತ ಶಿಕ್ಷಣದ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವ” ಎಂಬ ಶೀರ್ಷೆಕೆಯ ಬೆಂಗಳೂರು ವಿಶ್ವವಿದ್ಯಾಲಯದ ಯಂಗ್ ಬ್ರೀಗೇಡ್ ರಿಸರ್ಚ್ ಪ್ರಾಜೆಕ್ಟ್ ವರ್ಕ್  ಪೂರ್ಣಗೊಳಿಸಿದ್ದಾರೆ.

ಇ. ಪ್ರತಿಮಾಧ್ಯಮ ರಾಗಗಳು ಎಂಬ ಶೀರ್ಷಿಕೆಯ ಬೆಂಗಳೂರು ಆಕಾಶವಾಣಿ ಪ್ರಾಜೆಕ್ಟ್ (ಸಂಗೀತ ಪುಸ್ತಕ) ಪೂರ್ಣಗೊಳಿಸಿದ್ದಾರೆ.